ಭೇದಿಸಲಾಗುತ್ತಿಲ್ಲ ಈ ಭಯಾನಕ ರಹಸ್ಯ!

Webdunia
ಸೋಮವಾರ, 13 ಜುಲೈ 2015 (11:43 IST)
ಇದು ಹಾಲಿವುಡ್‌ನ ಯಾವುದೋ ಸಿನಿಮಾದ ಕಥೆಯಲ್ಲ. ರಹಸ್ಯಮಯವಾದ ಭಯಾನಕ ಸತ್ಯ. ಬಿಲಾಸ್ಪುರದ ಕುಟುಂಬವೊಂದು ಕಳೆದ 10 ತಿಂಗಳಿಂದ ಎದುರಿಸುತ್ತಿರುವ ಭೀಭತ್ಸ್ ಜೀವನದ ಸುದ್ದಿ ಇದು.

ಬಿಲಾಸ್ಪುರ ಜಿಲ್ಲೆಯ ಬಾಡಿ ಎಂಬ ಗ್ರಾಮದಲ್ಲಿ ವಾಸವಾಗಿರುವ ನಿವೃತ್ತ ಸರ್ಕಾರಿ ನೌಕರನ ಮನೆಯಲ್ಲಿರುವ ವಸ್ತುಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ. ಯಾವಾಗಲೋ ಒಮ್ಮೆ ಹೀಗಾಗುವುದಿಲ್ಲ. ಪದೇ ಪದೇ ನಡೆಯುತ್ತದೆಯಂತೆ ಇದು. 
 
ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ಪರಿಣಿತರಿಂದ ಸಹ ಈ ರಹಸ್ಯವನ್ನು ಬಗೆಹರಿಸಲಾಗಿಲ್ಲ. 2014ರ ಸೆಪ್ಟಂಬರ್ 10ರಂದು ಮೊದಲ ಬಾರಿ ಈ ಘಟನೆ ನಡೆದಿತ್ತು. ಆಗ ಕುಟುಂಬದವರು ಪೂಜೆ, ಹೋಮಹವನವನ್ನು ಮಾಡಿಸಿದ್ದಾರೆ. ತದನಂತರ ನಾಲ್ಕು ತಿಂಗಳುಗಳ ಕಾಲ ಈ ಸಮಸ್ಯೆ ನಿವಾರಣೆಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಮತ್ತೆ ಬೆಂಕಿ ಅನಾಹುತ ಪ್ರಾರಂಭವಾಗಿದ್ದು, ಕುಟುಂಬದವರು ನಿದ್ದೆಗೆಟ್ಟು ಜೀವನ ನಡೆಸುವಂತಾಗಿದೆ. 
 
ಮಕ್ಕಳನ್ನು ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಸಾಮಗ್ರಿಗಳನ್ನು ಹತ್ತಿರದ ಬಂಧುಗಳೊಬ್ಬರ ಮನೆಗೆ ಸ್ಥಳಾಂತರಿಸಲಾಗಿದೆ. 
 
ಅಷ್ಟೇ ಅಲ್ಲದೇ ಇತ್ತೀಚಿಗೆ ಕೋಣೆಯೊಂದರ ಗೋಡೆಯ ಮೇಲೆ, "ಈ ಮನೆ ಬಿಟ್ಟು ಹೊರಟು ಹೋಗಿ, ಇಲ್ಲವಾದರೆ ನಾನು ಎಲ್ಲರನ್ನೂ ಕೊಲ್ಲುತ್ತೇನೆ" ಎಂದು ಬರೆದಿರುವುದು ಕಂಡು ಬಂದಿದೆ. 
 
ಪ್ರಕರಣವನ್ನು ಬೇಧಿಸಲು ಸಕಲ ಪ್ರಯತ್ನಗಳನ್ನು ನಡೆಸುತ್ತಿರುವ ಪೊಲೀಸರು ಕುಟುಂಬದವರ ರಕ್ಷಣೆಗೆ ಒಬ್ಬ  ಪೇದೆಯನ್ನು ಜನ ಮನೆಯ ಹೊರಗೆ ಕಾವಲಿಟ್ಟಿದ್ದಾರೆ. ಆದರೆ ಪೇದೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಹ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಇವೆಲ್ಲವುಗಳ ಹಿಂದಿನ ರಹಸ್ಯ ನಿಗೂಢವಾಗಿಯೇ ಉಳಿದಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ನವದೆಹಲಿ ದಟ್ಟ ಮಂಜು, ಹವಾಮಾನ ಎಫೆಕ್ಟ್‌, ಇಂದು ಕೂಡಾ ವಿಮಾನ ಪ್ರಯಾಣಿಕರಿಗೆ ಶಾಕ್

48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

Show comments