Select Your Language

Notifications

webdunia
webdunia
webdunia
webdunia

ಮನೆ, ಮನೆಯಲ್ಲಿ ಸಂಭ್ರಮ ತರುವ ಬೆಳಕಿನ ಹಬ್ಬ ದೀಪಾವಳಿ

ಮನೆ, ಮನೆಯಲ್ಲಿ ಸಂಭ್ರಮ ತರುವ ಬೆಳಕಿನ ಹಬ್ಬ ದೀಪಾವಳಿ
ಬೆಂಗಳೂರು , ಬುಧವಾರ, 22 ಅಕ್ಟೋಬರ್ 2014 (12:03 IST)
ದೀಪಾವಳಿ ಅಥವಾ ದಿವಾಳಿ ಹಿಂದು ಉತ್ಸವಗಳಲ್ಲಿ ಅತ್ಯಂತ ದೊಡ್ಡ ಹಬ್ಬ. ಇದು ದೀಪಗಳ ಹಬ್ಬವಾಗಿದ್ದು, ನಾಲ್ಕು ದಿನಗಳ ಕಾಲ ಆಚರಣೆ ಮೂಲಕ ದೇಶಾದಾದ್ಯಂತ ಬೆಳಕನ್ನು ಮೂಡಿಸಿ ಸಂತೋಷ, ಸಂಭ್ರಮಗಳನ್ನು ಉಂಟುಮಾಡುತ್ತದೆ.
 
ಐತಿಹಾಸಿಕವಾಗಿ ದೀಪಾವಳಿಯ ಮೂಲ ಪ್ರಾಚೀನ ಭಾರತದಲ್ಲಿ ಪತ್ತೆಯಾಗಿದ್ದು, ಇದು ಬಹುಶಃ ಪ್ರಮುಖ ಬೆಳೆ ಕೊಯ್ಲಿನ ಉತ್ಸವವಾಗಿತ್ತು. ಆದಾಗ್ಯೂ ದಿವಾಳಿ ಅಥವಾ ದೀಪಾವಳಿ ಹುಟ್ಟಿನ ಬಗ್ಗೆ ವಿವಿಧ ದಂತಕತೆಗಳಿವೆ. ಕೆಲವರು ಇದನ್ನು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ವಿವಾಹ ಸಮಾರಂಭದ ಆಚರಣೆ ಎಂದು ನಂಬಿದ್ದಾರೆ. ಬಂಗಾಳದಲ್ಲಿ ಈ ಉತ್ಸವವನ್ನು ಕಾಳಿ ದೇವಿಯ ಪೂಜೆಗೆ ಮುಡುಪಾಗಿಡಲಾಗಿದೆ.ಜೈನಧರ್ಮದಲ್ಲಿ ದೀಪಾವಳಿಯು ಭಗವಾನ್ ಮಹಾವೀರ ನಿರ್ವಾಣವನ್ನು ಪಡೆಯುವ ಉತ್ಸವವಾಗಿ ಆಚರಿಸಲಾಗುತ್ತದೆ.
 
ಭಗವಾನ್ ರಾಮ ಸೀತೆ ಮತ್ತು ಲಕ್ಷ್ಮಣನ ಜೊತೆ 14 ವರ್ಷಗಳ ವನವಾಸದಿಂದ ಹಿಂತಿರುಗುವ ಮತ್ತು ರಾಕ್ಷಸ ರಾಜ ರಾವಣನ ಹತ್ಯೆಯ ಸಂಕೇತವಾಗಿ ಆಚರಿಸಲಾಗುತ್ತಿದೆ. ರಾಮನು ಅಯೋಧ್ಯೆಗೆ ಹಿಂತಿರುಗಿದ ಕೂಡಲೇ ಜನರು ತೈಲದ ದೀಪಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
 
 ದಿವಾಳಿಯ ಪ್ರತಿಯೊಂದು ದಿನ ಅದರದ್ದೇ ಕಥೆ, ದಂತಕತೆಯನ್ನು ಹೊಂದಿದೆ. ಮೊದಲ ದಿನದ ಉತ್ಸವ ನರಕಚತುರ್ದಶಿಯನ್ನು ಭಗವಾನ್ ಕೃಷ್ಣ ಮತ್ತು ಪತ್ನಿ ಸತ್ಯಭಾಮಾ ನರಕಾಸುರನನ್ನು ಹತ್ಯೆ ಮಾಡಿದ ಸಂಕೇತವಾಗಿ ಆಚರಿಸಲಾಗುತ್ತದೆ.
 
ದೀಪಾವಳಿಯ ಎರಡನೇ ದಿನ ಅಮಾವಾಸ್ಯೆಯನ್ನು ಸಂಪತ್ತಿನ ದೇವತೆ, ಭಕ್ತರ ಇಚ್ಛೆಗಳನ್ನು ಈಡೇರಿಸುವ ಲಕ್ಷ್ಮಿ ಪೂಜೆಗೆ ಸಂಕೇತವಾಗಿದೆ. ಅಮಾವಾಸ್ಯೆ ಭಗವಾನ್ ವಿಷ್ಣುವಿನ ಕಥೆಯನ್ನು ಕೂಡ ಹೇಳುತ್ತದೆ. ವಿಷ್ಣು ವಾಮನ ಅವತಾರ ತಾಳಿ ಬಲಿಯನ್ನು ನರಕಕ್ಕೆ ತಳ್ಳುತ್ತಾನೆ. ಬಲಿ ವರ್ಷಕ್ಕೊಮ್ಮೆ ಭೂಮಿಗೆ ಹಿಂತಿರುಗಲು ಅವಕಾಶ ನೀಡಲಾಗುತ್ತದೆ. ಆ ಸಂದರ್ಭದಲ್ಲಿ ಕತ್ತಲು ಮತ್ತು ಅಜ್ಞಾನ ನಿವಾರಣೆಗೆ, ಪ್ರೀತಿ ಮತ್ತು ಜ್ಞಾನದ ವಿಸ್ತರಣೆಗೆ  ಲಕ್ಷಾಂತರ ದೀಪಗಳನ್ನು ಹಚ್ಚಲಾಗುತ್ತದೆ. ದೀಪಾವಳಿಯ ಮೂರನೇ ದಿನ ಕಾರ್ತಿಕ ಶುದ್ಧ ಪಾಡ್ಯಮಿಯಂದು ಬಲಿ ನರಕದಿಂದ ಹೊರಗೆ ಹೆಜ್ಜೆಇರಿಸಿ ಭಗವಾನ್ ವಿಷ್ಣುವಿನ ವರದಂತೆ ಭೂಮಿಯನ್ನು ಆಳುತ್ತಾನೆ.
 
 ನಾಲ್ಕನೇ ದಿನವನ್ನು ಯಮ ದ್ವಿತೀಯ( ಭಾಯಿ ದೂಜ್ ಎಂದು ಕೂಡ ಕರೆಯಲಾಗುತ್ತದೆ.) ಆ ದಿನ ಸಹೋದರಿಯರು ತಮ್ಮ ಸಹೋದರರನ್ನು ಮನೆಗೆ 
ಆಹ್ವಾನಿಸಿ ಸತ್ಕರಿಸುತ್ತಾರೆ. 
ಬೆಳಕು ಮತ್ತು ಪಟಾಕಿಗಳ ಮಹತ್ವ
 
ಮನೆಯನ್ನು ದೀಪಗಳಿಂದ ಬೆಳಗುವುದು ಮತ್ತು ಆಕಾಶದಲ್ಲಿ ಪಟಾಕಿಗಳನ್ನು ಸಿಡಿಸುವುದು ಆರೋಗ್ಯ, ಸಂಪತ್ತು, ಜ್ಞಾನ, ಶಾಂತಿ ಮತ್ತು ಸಮೃದ್ಧಿಯ ಪ್ರಾಪ್ತಿಯಾಗಿ ಸ್ವರ್ಗಕ್ಕೆ ಸಲ್ಲಿಸುವ ಪ್ರಣಾಮವಾಗಿದೆ.
ಒಂದು ನಂಬಿಕೆಯ ಪ್ರಕಾರ, ಪಟಾಕಿಗಳ ಸದ್ದು ಜನರ ಸಂತೋಷ, ಸಂಭ್ರಮದ ಸಂಕೇತವಾಗಿದ್ದು, ದೇವರಿಗೆ ಜನರ ಸಮೃದ್ಧಿ ಸ್ಥಿತಿಯ ಅರಿವಾಗುತ್ತದೆ. ಇನ್ನೊಂದು ಕಾರಣ ವೈಜ್ಞಾನಿಕ ಆಧಾರದಿಂದ ಕೂಡಿದೆ. ಪಟಾಕಿಗಳಿಂದ ಆವರಿಸಿದ ಹೊಗೆ ಮಳೆಯ ನಂತರ ವಿಪುಲವಾಗಿ ಕಾಣಿಸುವ ಅನೇಕ ಕೀಟಾಣುಗಳನ್ನು ಮತ್ತು ಸೊಳ್ಳೆಗಳನ್ನು ಕೊಲ್ಲುತ್ತವೆ. ಒಟ್ಟಿನಲ್ಲಿ ದೀಪಾವಳಿ ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವಾದ ಬೆಳಕಿನ ಹಬ್ಬವಾಗಿ ವರ್ಷ ವರ್ಷವೂ ಬರುತ್ತಿದೆ. ಜನರಿಗೆ ಸಂತೋಷ, ಸಂಭ್ರಮ ತರುತ್ತಿದೆ.

Share this Story:

Follow Webdunia kannada