Select Your Language

Notifications

webdunia
webdunia
webdunia
webdunia

ಸಾವಿನ ಭಯದ ನೆರಳಿನಲ್ಲಿ ಎರಡು ವರ್ಷ ಬದುಕಿದಳು

ಸಾವಿನ ಭಯದ ನೆರಳಿನಲ್ಲಿ ಎರಡು ವರ್ಷ ಬದುಕಿದಳು
, ಸೋಮವಾರ, 28 ಜುಲೈ 2014 (17:11 IST)
ಮನುಷ್ಯ ಸಾವಿಗಿಂತ ಸಾವಿನ ಭಯಕ್ಕೆಹೆದರುತ್ತಾನೆ ಎಂದು ಯಾರೋ ನಿಜವನ್ನೇ ಹೇಳಿದ್ದಾರೆ. ಬ್ರಿಟನ್‌‌‌ನ ಒಬ್ಬ ಮಹಿಳೆಗೆ ವೈದ್ಯರು ನಿನಗೆ ಕ್ಯಾನ್ಸರ್ ಇರುವುದರಿಂದ ಬಹುಬೇಗ ಸಾವನ್ನಪ್ಪುತ್ತೀರಿ ಎಂದು ಹೇಳಿದ್ದರು. ಇಂದು ಸಾಯುತ್ತೇನೆ, ನಾಳೆ ಸಾಯಿಸುತ್ತೇನೆ ಎನ್ನುವ ಭಯದಲ್ಲಿ ಆ ಮಹಿಳೆ ಎರಡು ವರ್ಷಗಳನ್ನು ದೂಡಿದ್ದಾಳೆ.
 
ವೈದ್ಯರ ಹೇಳಿಕೆಯಿಂದ ಬದುಕುವ ಆಸೆಯನ್ನು ಕಳೆದುಕೊಂಡ ಮಹಿಳೆ ತನ್ನ ಸಾವಿನ ಸಂಪೂರ್ಣ ಸಿದ್ದತೆ ನಡೆಸಿದ್ದಾಳೆ. ತಾವು ಅನುಭವಿಸಿದ ನೋವುಗಳ ಕುರಿತಂತೆ ಮಕ್ಕಳಿಗಾಗಿ ಪತ್ರವೊಂದನ್ನು ಬರೆದು ತನ್ನ ಬಳಿ ಇಟ್ಟುಕೊಂಡಿದ್ದಳು. ಎರಡು ವರ್ಷಗಳಿಂದ ನಿರಂತರ ಸಾವಿನ ಭಯ ಎದುರಿಸಿದ್ದವಳಿಗೆ ಅಚ್ಚರಿಯ ಸಂಗತಿ ಎದುರಾಗಿತ್ತು.ಆಕೆಗೆ ಕ್ಯಾನ್ಸರ್ ರೋಗವೇ ಇಲ್ಲವೆಂದು ವೈದ್ಯಕೀಯ ವರದಿ ಬಹಿರಂಗಪಡಿಸಿತ್ತು. 
 
34 ವರ್ಷದ ಡೆನಿಸ್‌ ಕ್ಲಾರ್ಕ್‌‌ಗೆ ವೈದ್ಯರು ಕ್ಯಾನ್ಸರ್‌ ಇದೆ ಮತ್ತು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಹೇಳಿದಾಗ ಆಘಾತವಾಗಿದೆ. ಬದುಕುವ ಆಸೆಯನ್ನು ಕಳೆದುಕೊಂಡ ಆಕೆ ತನ್ನ ಮಕ್ಕಳೊಂದಿಗೆ ಹೆಚ್ಚಿಸ ಸಮಯ ಕಳೆಯಲು ಆರಂಭಿಸಿದ್ದಾಳೆ.
 
ಕ್ಲಾರ್ಕ್‌ಗೆ 2010ರಲ್ಲಿ ಸರ್ವೈಕಲ್ ಕ್ಯಾನ್ಸರ್‌ ಆಗಿತ್ತು. ಇದರ ನಂತರ ಆಕೆ ಚಿಕಿತ್ಸೆ ಪಡೆಯಲು ಆರಂಭಿಸಿದಳು. ಕೆಲ ದಿನಗಳ ನಂತರ ಈಕೆ ತಾನು ಎದುರಿಸಿದ ಕಷ್ಟಗಳ ಬಗ್ಗೆ ತನ್ನ ಮಗನಿಗೆ ಪತ್ರ ಬರೆದಿದ್ದಲ್ಲದೇ ತನ್ನ ಅಂತಿಮ ಸಂಸ್ಕಾರಕ್ಕೂ ಸಿದ್ದತೆ ನಡೆಸಿದ್ದಳು. 
 
ಚಿಕಿತ್ಸೆಗಾಗಿ ಸುಮಾರು 8 ಲಕ್ಷ ರೂಪಾಯಿಗಳವರೆಗೆ ವೆಚ್ಚ ಮಾಡಿದ್ದಾಳೆ. 2011ರಲ್ಲಿ ಮತ್ತೆ ಕ್ಯಾನ್ಸರ್‌ ಪರಿಕ್ಷೇ ಮಾಡಿಸಿಕೊಂಡಾಗ ಈಕೆಗ ಕ್ಯಾನ್ಸರ್‌ ಮತ್ತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ವೈದ್ಯರು ಈಕೆಗೆ ಚಿಕಿತ್ಸೆ ನೀಡಲಿ ನಿರಾಕರಿಸಿದರು. ಸುಮಾರು ಎರಡು ವರ್ಷಗಳ ಕಾಲ ಸಾವಿನ ಭಯದಲ್ಲಿ ಬದುಕಿದ್ದಳು. ಈ ನಡುವೆ ಕ್ಲಾರ್ಕ್‌ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಮತ್ತೊಮ್ಮೆ ವೈದ್ಯರು ಆಕೆಯನ್ನು ಪರೀಕ್ಷಿಸಿದ ನಂತರ ಈಕೆಗೆ ಕ್ಯಾನ್ಸರ್‌ ಇಲ್ಲ ಎಂದು ಗೊತ್ತಾಗಿದೆ. ತಪ್ಪು ಮಾಹಿತಿ ನೀಡಿದ ವೈದ್ಯರ ವಿರುದ್ದ ದೂರು ದಾಖಲಿಸಲು ಮಹಿಳೆ ಡೇನಿಸ್ ಕ್ಲಾರ್ಕ್ ಸಿದ್ದಳಾಗಿದ್ದಾಳೆ.

Share this Story:

Follow Webdunia kannada