Webdunia - Bharat's app for daily news and videos

Install App

ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ? ಸಂಶಯ ಮೂಡಿಸಿದೆ ಬಿಎಸ್ವೈ ನಡೆ!

Webdunia
ಸೋಮವಾರ, 19 ಜುಲೈ 2021 (11:37 IST)
ಬೆಂಗಳೂರು(ಜು.19): ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ವಿಚಾರ ಕಾವು ಪಡೆದಿದೆ. ಬಿಎಸ್ವೈ ದೆಹಲಿಯಿಂದ ಮರಳಿದ ಬಳಿಕ ಈ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರದ್ದು ಎನ್ನಲಾದ ಆಡಿಯೋ ಕೂಡಾ ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿದೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿ. ಎಸ್ ಯಡಿಯೂರಪ್ಪರವರು ಖುದ್ದು ತಾವೇ ನೀಡಿದ ಸೂಚನೆಯೊಂದು ಈ ಸಂಶಯಕ್ಕೆ ಮುನ್ನುಡಿ ಹಾಕಿದೆ.

* ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ನಿಶ್ಚಿತವಾ...?
* ಯಡಿಯೂರಪ್ಪ ಅವರ ಸೂಚನೆಯೊಂದು ಅಂತಹದೊಂದು ಸಂಶಯಕ್ಕೆ ಮುನ್ನುಡಿ....?
* ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜನೆ
ಹೌದು ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ಸಿಎಂ ಬಿ. ಎಸ್. ಯಡಿಯೂರಪ್ಪ ಸಚಿವಾಲಯದ ಸಿಬ್ಬಂದಿಗಳಿಗೆ ಜುಲೈ 15ರಂದು ಭೋಜನ ಕೂಟ ಆಯೋಜಿಸಿದ್ದಾರೆ. ಅಲ್ಲದೇ ಭೋಜನಕೂಟಕ್ಕೆ ಆಗಮಿಸುವಂತೆ ಸಿಎಂ ಕಚೇರಿ ಸಿಬ್ಬಂದಿಗಳಿಗೆ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ಏಕಾಎಕಿ ಯಡಿಯೂರಪ್ಪ ನೀಡಿರುವ ಈ ಆಹ್ವಾನ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಾರಾ? ಎಂಬ ಅನುಮಾನ ಮೂಡಿಸಿದೆ.
ಸಹಜವಾಗಿ  ಅವಧಿ ಮುಗಿದ ಬಳಿಕ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜನೆ ಮಾಡೋದು ಸಂಪ್ರದಾಯ. ಆದರೆ ಅವಧಿಗೆ ಮುನ್ನವೇ ಭೋಜನ ಕೂಟವನ್ನು ಆಯೋಹಿಸಿರುವ ಸಿಎಂ ಕ್ರಮ, ಅವಧಿಗೆ ಮುನ್ನವೇ ಸಿಎಂ ಬದಲಾವಣೆ ಆಗ್ತಾರಾ ಎಂಬ ಸಂಶಯ ಮೂಡಿಸಿದೆ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಸ್ವಾತಂತ್ರ್ಯಕ್ಕೆ ದಿನಕ್ಕೆ ಪ್ರಧಾನಿ ಮೋದಿ ಏನು ಭಾಷಣ ಮಾಡಬೇಕು, ನೀವೇ ನಿರ್ಧರಿಸಲು ಇಲ್ಲಿದೆ ಅವಕಾಶ

ಅಮೆರಿಕಾಗೆ ತಕ್ಕ ತಿರುಗೇಟು ಕೊಟ್ಟ ಭಾರತ: ಯುದ್ಧ ವಿಮಾನ ಖರೀದಿ ಡೀಲ್ ಕ್ಯಾನ್ಸಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments