Webdunia - Bharat's app for daily news and videos

Install App

ಮೊದಲ ರಾತ್ರಿಯೇ ಮಗುವಿಗೆ ಜನ್ಮ

Webdunia
ಸೋಮವಾರ, 8 ಜೂನ್ 2015 (09:37 IST)
ಮದುವೆಯಾಗಿ ಗಂಡನ ಮನಗೆ ಬರುತ್ತಿದ್ದಂತೆ ಮದುಮಗಳು ಮಗುವಿಗೆ ಜನ್ಮ ನೀಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಇದರಿಂದ ಆಘಾತಕ್ಕೊಳಗಾದ ಯುವತಿಯ ಗಂಡನ ಮನೆಯವರು ಆಕೆಯನ್ನು ಮದುವೆಯನ್ನು ಮುರಿದುಕೊಂಡಿದ್ದಾರೆ. 

ದೇರಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಡಿ ಬರುವ ಕಾನ್ಪುರದ ಸಬ್ದಾಲ್ಪುರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
 
ಮದುವೆ ಶಾಸ್ತ್ರ ಮುಗಿಸಿ ದಿಬ್ಬಣ ವರನ ಮನೆಯನ್ನು ತಲುಪಿತ್ತು. ನವಜೋಡಿಗಳ ಪ್ರಥಮ ರಾತ್ರಿಗೆ ಕೋಣೆಯನ್ನು ಸಿಂಗರಿಸಲಾಗಿತ್ತು. ಅಷ್ಟರಲ್ಲಿ  ವಧುವಿಗೆ ಪ್ರಸವ ವೇದನೆ ಪ್ರಾರಂಭವಾಗಿದೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಹಠಾತ್ ನಡೆದ ಈ ಘಟನೆ ವಧುವಿನ ಕಡೆಯವರಿಗೆ ಇರಿಸುಮುರಿಸು ತಂದಿದೆ. ಆದರೆ ಘಟನೆಯಿಂದ ಕ್ರೋಧಿತರಾದ ವರನ ಕಡೆಯವರು ವಧುವಿನ ಕಡೆಯವರನ್ನು ತರಾಟೆಗೆ ತೆಗೆದುಕೊಂಡರು.
 
ನಂತರ ಈ ಪ್ರಕರಣ ಪಂಚಾಯತ್ ಮುಂದೆ ಹೋಯಿತು. ಗ್ರಾಮದ ಮುಖಂಡರ ನಿರ್ಣಯದ ಮೇರೆಗೆ  ತಿಲಕ್ ಕಾರ್ಯಕ್ರಮದ ವೇಳೆ ವಿನಿಮಯ ಮಾಡಿಕೊಂಡಿದ್ದ ವಸ್ತುಗಳನ್ನು  ವಧುವಿನ ಕಡೆಯವರು ಹಿಂತಿರುಗಿಸಿದರು ಮತ್ತು ಮಗುವಿನ ಸಮೇತ ಮಗಳನ್ನು ಹಿಂತಿರುಗಿ ಮನೆಗೆ ಕರೆದೊಯ್ದರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

Show comments