Webdunia - Bharat's app for daily news and videos

Install App

ಮೋದಿಯ ಸ್ವಚ್ಛ ಆಡಳಿತದ ಭರವಸೆಗೆ ಮತಹಾಕಿದ ಬೆಂಗಳೂರಿಗರು

Webdunia
ಬುಧವಾರ, 26 ಆಗಸ್ಟ್ 2015 (16:21 IST)
-ಗುಣವರ್ಧನ ಶೆಟ್ಟಿ 

ಬೆಂಗಳೂರಿನ ಮತದಾರರು ತಮ್ಮ ನಿರ್ಧಾರವನ್ನು ಪ್ರಕಟಿಸಿ,  ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ 100 ಸ್ಥಾನ ಗೆಲ್ಲಿಸಿಕೊಟ್ಟರು. ಕಾಂಗ್ರೆಸ್ 75 ಸ್ಥಾನದಲ್ಲಿ ತೃಪ್ತಿಪಟ್ಟುಕೊಂಡಿದೆ. ಬೆಂಗಳೂರಿಗೆ ಕಳೆದ ಐದು ವರ್ಷಗಳು ದುರ್ದಿನಗಳಾಗಿದ್ದವು. ಕಳೆದ ಬಾರಿಯ ನಗರಪಾಲಿಕೆ ಇತಿಹಾಸದಲ್ಲೇ ಅತ್ಯಂತ ಭ್ರಷ್ಟವಾಗಿತ್ತು. ಮಧ್ಯರಾತ್ರಿ ಟೆಂಡರ್‌‍ಗಳು, ದಾಖಲೆಗಳ ಭಸ್ಮ, ಸುಳ್ಳು ಮತ್ತು ಬೋಗಸ್ ಬಿಲ್ ಸೃಷ್ಟಿ ಮುಂತಾದ ಹಗರಣಗಳು ಮತ್ತು ಹಣದ ಭಾರೀ ಅಕ್ರಮ ನಡೆದಿದ್ದವು.

ಸರ್ಕಾರ ತನಿಖಾ ಸಮಿತಿಯನ್ನು ಸೃಷ್ಟಿಸಿದಾಗ ಅವು ಗಾಬರಿಗೊಳಿಸುವ ವಿವರಗಳನ್ನು ನೀಡಿದವು. ಕಸ, ಕುಡಿಯುವ ನೀರು, ಫುಟ್‌ಪಾತ್, ರಸ್ತೆಗಳು ಎಲ್ಲವೂ ಅಸ್ತವ್ಯಸ್ತವಾಗಿದ್ದು, ಕಸದ ಮಾಫಿಯಾ, ನೀರಿನ ಟ್ಯಾಂಕರ್ ಮಾಫಿಯಾ, ಗುತ್ತಿಗೆ ಮಾಫಿಯಾ, ಸುಲಿಗೆ ಜಾಲಗಳು ಹುಟ್ಟಿಕೊಂಡಿದ್ದವು. ಇವುಗಳ ಮಧ್ಯೆ ಬಿಜೆಪಿ ಮತ್ತು ಪ್ರಸಕ್ತ ಸರ್ಕಾರ ಅಸಹಾಯಕವಾಗಿದ್ದವು. ಜೀವನದ ಗುಣಮಟ್ಟ ಕುಸಿಯತೊಡಗಿ ಜನರು ಹತಾಶರಾದರು, ಆಕ್ರೋಶಗೊಂಡರು. ಇಂತಹ ಒಂದು ಕೆಟ್ಟ, ಭ್ರಷ್ಟ ಆಡಳಿತದ ನಂತರವೂ ಬಿಜೆಪಿ ಚುನಾವಣೆಯಲ್ಲಿ ಗೆದ್ದಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು.

ಆದರೆ ವಾಸ್ತವವಾಗಿ ಬೆಂಗಳೂರಿನ ಜನತೆ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಿದ್ದರು. ಅವರ ಸ್ವಚ್ಛ ಆಡಳಿತದ ಭರವಸೆಯನ್ನು ಅವರ ಪಕ್ಷದವರು ಈಡೇರಿಸುತ್ತಾರೆಂಬ ಆಶಯದಿಂದ ಮತ ಹಾಕಿದ್ದರು. ಕಾಂಗ್ರೆಸ್ ಪ್ರಬಲ ಹೋರಾಟ ನೀಡಿದ್ದರೂ ಅನೇಕ ಕಾರಣಗಳಿಂದ ಸೋಲಪ್ಪಿತು. 
 
 2013ರಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಬಳಿಕ ಕಾಂಗ್ರೆಸ್ ಬೆಂಗಳೂರಿನ ಬಗ್ಗೆ ಉದಾಸೀನ ಧೋರಣೆ ಹೊಂದಿತ್ತು.  ನಗರ ಪ್ರದೇಶಗಳಿಗೆ ಫಂಡ್‌ಗಳನ್ನು ಅದು ಕಡಿತ ಮಾಡಿತು. ಪೂರ್ಣ ಕಾಲಿಕ ಕೈಗಾರಿಕೆ ಸಚಿವರು ಇಲ್ಲದೇ ಕೈಗಾರಿಕೆಯನ್ನು ಕಡೆಗಣಿಸಿತು.  ನಗರದಿಂದಲೇ ರಾಜ್ಯ ತೆರಿಗೆಗಳು ಮತ್ತು ಜಿಡಿಪಿಯಲ್ಲಿ ಬಹುಪಾಲು ಬಂದರೂ ನಗರಕ್ಕೆ ಉದಾಸೀನ ಮನೋಭಾವ ಹೊಂದಿದ್ದರು. 
 
 ನಮ್ಮ ಮುಖ್ಯಮಂತ್ರಿ ಮಾಧ್ಯಮ ಮತ್ತು ಬೆಂಗಳೂರಿಗರ ಒತ್ತಡದಿಂದ ಕೊನೆಯ ಆರುತಿಂಗಳಲ್ಲಿ ನಗರದ ಅಗತ್ಯಗಳ ಬಗ್ಗೆ ಅರಿವುಂಟಾಗಿ ಬಿಬಿಎಂಪಿ ಮರುರಚನೆಗೆ ಸಮಿತಿಯನ್ನು ನೇಮಿಸಿತು. ಸಂಚಾರ ದಟ್ಟಣೆ ತಗ್ಗಿಸಲು ಪ್ರಮುಖ ಮೂಲಸೌಲಭ್ಯ ಯೋಜನೆ ಪ್ರಕಟಿಸಿದರು. ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿ ಹಿರಿಯ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿದರು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. 
 
 
ಈ ಚುನಾವಣೆ ಎರಡೂ ಪಕ್ಷಗಳಿಗೂ ಪಾಠ ಕಲಿಸಿದೆ. ಬಿಜೆಪಿ ಪ್ರಧಾನಮಂತ್ರಿಯ ಜನಪ್ರಿಯತೆಯ ಲಾಭ ಪಡೆದು 100 ಸೀಟು ಗಳಿಸಿತು.  ಕೆಟ್ಟ ಆಡಳಿತ ದಾಖಲೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಅಸಾಮರ್ಥ್ಯದಿಂದ ವೋಟಿಂಗ್ ಲೀಡ್ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಕಡಿಮೆಯಾಗಿದೆ. ಕಾಂಗ್ರೆಸ್‌ಗೆ ಕಡೇ ಗಳಿಗೆಯಲ್ಲಿ ನಗರವು ರಾಜ್ಯದ ಆರ್ಥಿಕತೆಯ ಎಂಜಿನ್ ಮತ್ತು ನಗರದ ನಿಯಂತ್ರಣ ಅದರ ಹಿತಾಸಕ್ತಿಗೆ ಮುಖ್ಯ ಎನ್ನುವುದು ಅರಿವಾಗಿತ್ತಾದರೂ ಅಷ್ಟರಲ್ಲಿ ಕಾಲ ಮಿಂಚಿಹೋಗಿ ಅದಕ್ಕೆ ಬೆಲೆ ತೆತ್ತರು. 
 
ಅಪಾರ ಸಂಖ್ಯೆಯ ಮತದಾರರು ಪ್ರಧಾನಿಯ ಮೇಲೆ ನಂಬಿಕೆಯಿರಿಸಿ ಮತಹಾಕಿದ್ದರಿಂದ ಅವರ ಪಕ್ಷವು ಭ್ರಷ್ಟಾಚಾರರಹಿತ ಆಡಳಿತವನ್ನು ಮುಂದಿನ ಐದುವರ್ಷ ನೀಡುತ್ತದೆಂದು ಜನತೆ ನಿರೀಕ್ಷಿಸಿದ್ದಾರೆ. ಈಗ ಅಧಿಕಾರ ಪ್ರಮಾಣದ ಜತೆ ಬಿಜೆಪಿ ಕಾರ್ಪೊರೇಟರ್‌ಗಳು ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೊಸ ಪ್ರತಿಜ್ಞಾವಿಧಿ ಸ್ವೀಕರಿಸಬೇಕಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments