Webdunia - Bharat's app for daily news and videos

Install App

ನಿಮಗೆ ಗೊತ್ತೆ? - ನಿಮ್ಮ ಭವಿಷ್ಯ ನಿಮ್ಮ ಬರವಣಿಕೆಯಲ್ಲಡಗಿದೆ

Webdunia
ಶುಕ್ರವಾರ, 21 ನವೆಂಬರ್ 2014 (16:09 IST)
ಗ್ರಾಫಾಲಜಿ, ಕೇವಲ ನಿಮ್ಮ ಸಹಿ ಅಥವಾ ಹಸ್ತಾಕ್ಷರವನ್ನು ವಿಶ್ಲೇಷಿಸಿ ನಿಮ್ಮ ವ್ಯಕ್ತಿತ್ವ, ಜೀವನ ಶೈಲಿ, ಗುಣ, ನಡೆ-ನುಡಿ ತಿಳಿಸುವ ಕಲೆ. ಒಂದು ವೇಳೆ ನಿಮ್ಮ ಬರವಣಿಗೆ ಹೊಂದಿದ ಪುಸ್ತಕವು ಗ್ರಾಫಾಲಜಿಸ್ಟ್‌ಗಳಿಗೆ ಸಿಕ್ಕಿತ್ತು ಅಂತಾದರೆ, ಅವರು ನಿಮ್ಮ ಪೂರ್ಣ ಜಾತಕವನ್ನು ಬರೆದರೂ ಆಶ್ಚರ್ಯವಿಲ್ಲ. ಗ್ರಫಾಲಜಿಗೆ ಅಷ್ಟೊಂದು ತಾಕತ್ತಿದೆ ಎನ್ನುತ್ತಾರೆ ಅದನ್ನು ಬಲ್ಲವರು.
 
ಗ್ರಫಾಲಜಿಯು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಭಾರತದಲ್ಲಿ ಗ್ರಫಾಲಜಿಯು ಅಷ್ಟೊಂದು ಪ್ರಚಲಿತದಲ್ಲಿಲ್ಲ. ಬಹುಶಃ ಇದು ನ್ಯೂಮರಾಲಜಿಯಂತೆ(ಸಂಖ್ಯಾಶಾಸ್ತ್ರ) ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿದ್ದಾಗಿರಬಹುದು. ಅವರುಗಳೇ ಇದರ ಬಗ್ಗೆ ಹೆಚ್ಚಾಗಿ ಅಧ್ಯಯನ ನೆಡೆಸಿದವರು.
 
ಗ್ರಫಾಲಜಿ ಪ್ರಕಾರ ಅಕ್ಷರವನ್ನು ಚಿಕ್ಕದಾಗಿ ಬರೆಯುವವರು, ಬಹಳ ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ, ಅಂದರೆ ಚಿಕ್ಕ ವಿಷಯಗಳನ್ನು ಗಮನಿಸುವ ಗುಣವನ್ನು ಹೊಂದಿರುತ್ತಾರೆ. ಯಾವಗಲೂ ಮಾನಸಿಕವಾಗಿ ವಿಚಲಿತವಾಗಿರುತ್ತಾರೆ, ಆದರೆ ಇವರಲ್ಲಿ ಆತ್ಮವಿಶ್ವಾಸದ ಕೊರೆತೆ ಇರುತ್ತದೆ. 
 
ಇನ್ನೂ ಅಕ್ಷರವನ್ನು ದೊಡ್ಡದಾಗಿ ಬರೆಯುವವರು, ಇವರು ದೃಢವಿಶ್ವಾಸದಿಂದಿರುತ್ತಾರೆ ಮತ್ತು ಆಕ್ರಮಣಶೀಲ ಮನೋಭಾವವನ್ನು ಹೊಂದಿರುತ್ತಾರೆ. ಇವರು ಮಹಾತ್ವಾಕಾಂಕ್ಷೆ ಮತ್ತು ಉತ್ಸಾಹವನ್ನು ಹೊಂದಿದವರಾಗಿರುತ್ತಾರೆ. ಅವರು ಹೆಚ್ಚಾಗಿ ಬಹಿರ್ಮಖಿಯಾಗಿರುತ್ತಾರೆ. ಆದರೆ ಇವರು ಹೆಚ್ಚಾಗಿ ಏಕಾಗ್ರತೆ ಮತ್ತು ಶಿಸ್ತನ್ನು ಹೊಂದಿರುವುದಿಲ್ಲ.
 
ಅಕ್ಷರಗಳನ್ನು ಅಷ್ಟೇನು ದೊಡ್ಡದು ಅಲ್ಲದೆ, ಚಿಕ್ಕದು ಅಲ್ಲದೆ ಮಧ್ಯಮ ಗಾತ್ರದಲ್ಲಿ ಬರೆಯುವವರು, ಸಾಂಪ್ರಾದಾಯವಾದಿಗಳಾಗಿರುತ್ತಾರೆ, ಪ್ರಾಮಾಣಿಕರು, ನಿಷ್ಕಪಟದವರು, ಯಾವುದೇ ವಾತಾವರಣಕ್ಕೆ ಸುಲಭಾವಾಗಿ ಹೊಂದಿಕೊಳ್ಳುವವರಾಗಿರುತ್ತಾರೆ.
 
ಅಕ್ಷರಗಳನ್ನು ಅಸ್ಥಿರ ಗಾತ್ರದಲ್ಲಿ ಬರೆಯುವವರು, ಅಂದರೆ ಒಮ್ಮೆ ಚಿಕ್ಕದಾಗಿಯೂ, ಇನ್ನೊಮ್ಮೆ ದೊಡ್ಡದಾಗಿಯೂ ಬರೆಯುವವರು, ಇವರು ಸಿಡುಕಿನ(moody) ಸ್ವಭಾವದವರಾಗಿರುತ್ತಾರೆ. ಇವರು ಯಾವಾಗ ಯಾವ ಮನಸ್ಥಿತಿಯಲ್ಲಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಇವರಿಗೆ ಯಾವುದೇ ಒಂದು ವಿಷಯದಲ್ಲಿ ನಿರ್ಧಾರಕ್ಕೆ ಬರಲು ತುಂಬಾ ಕಷ್ಟವಾಗುವುದು.
 
ಅಕ್ಷರಗಳು ಬಲಕ್ಕೆ ವಾಲಿಕೊಂಡಿದ್ದರೆ, ಅವರನ್ನು ಅಭಧ್ರತೆ ಕಾಡುತ್ತದೆ ಮತ್ತು ಅವರು ಹೆಚ್ಚಾಗಿ ಅವಿವೇಕದಿಂದ ವರ್ತಿಸುವರು. ಅಕ್ಷರಗಳು ಎಡಕ್ಕೆ ವಾಲಿಕೊಂಡಿದ್ದರೆ, ಇವರು ಭಾವನಾತ್ಮಕವಾಗಿ ತಮ್ಮತ್ತ ಎಲ್ಲರನ್ನು ಸೆಳೆದುಕೊಳ್ಳಬಲ್ಲರು ಮತ್ತು ಇವರಿಗೆ ಬಹಳ ಬೇಗನೆ ಅತೀಂದ್ರಿಯ ಶಕ್ತಿಗಳು ಒಲಿಯುತ್ತದೆ. ಅಕ್ಷರಗಳು ಎಡಕ್ಕೆ, ಬಲಕ್ಕೆ ವಾಲದೇ, ನೇರವಾಗಿದ್ದರೆ, ಇವರು ಸ್ವಯಂನಿಯಂತ್ರಣವನ್ನು ಹೊಂದಿರುತ್ತಾರೆ. ಇವರು ಮೆದುಳು ಹೃದಯವನ್ನು ನಿಯಂತ್ರಿಸುತ್ತದೆ. ಅಂದರೆ ಇವರು ಭಾವನೆಗಳಿಗೆ ಹೆಚ್ಚಾಗಿ ಬೆಲೆಕೊಡುವುದಿಲ್ಲ. ಅಸ್ಥಿರವಾದ ಬರವಣಿಗೆ ಶೈಲಿಯಾಗಿದ್ದರೆ, ಇವರಲ್ಲಿ ಅಭಧ್ರತೆಯ ಭಾವನೆ ಹೆಚ್ಚಾಗಿರುತ್ತದೆ. ಇವರು ಸಿಡುಕಿನ(moody) ಸ್ವಭಾವದವರಾಗಿರುತ್ತಾರೆ. ಇವರು ಯಾವಾಗ ಯಾವ ಮನಸ್ಥಿತಿಯಲ್ಲಿರುತ್ತಾರೆ ಎಂದು ಹೇಳಲಾಗುವುದಿಲ್ಲ.
 
ಕೆಲವೊಮ್ಮೆ ಬರೆಯುವಾಗ ಒತ್ತಡ ಹೆಚ್ಚಿ ಕಾಗದ ಹರಿಯುವ ಪ್ರಸಂಗವಿದೆ. ಹಾಗೆ ಹೆಚ್ಚಿನ ಒತ್ತಡದೊಂದಿಗೆ ಬರೆಯುವವರು ಆಕ್ರಮಣಶೀಲ ಮನೋಭಾವ ಹೊಂದಿರುತ್ತಾರೆ, ಕಡಿಮೆ ಒತ್ತಡದೊಂದಿಗೆ ಬರೆಯುವವರು ಸೂಕ್ಷ್ಮ ಮನೋಭಾವದವರಾಗಿರುತ್ತಾರೆ, ಹಾಗೆಯೇ ಮಧ್ಯಮ ಒತ್ತಡದೊಂದಿಗೆ ಬರೆಯುವವರು ಸ್ವಯಂನಿಯಂತ್ರಣವನ್ನು ಹೊಂದಿರುತ್ತಾರೆ.
 
ಇನ್ನೂ ಕೆಲವರು ಪರೀಕ್ಷೆಯನ್ನು 80 ಪುಟಗಳಷ್ಟು ಬರೆಯುತ್ತಾರೆ, ಇನ್ನೂ ಕೆಲವರು ಅದೇ ಪರೀಕ್ಷೆಯನ್ನು 20 ಪುಟಗಳಲ್ಲಿ ಮುಗಿಸುತ್ತಾರೆ. ಈ ಅಂತರಕ್ಕೆ ತುಂಬಾ ಕಾರಣಗಳಿರಬಹುದು ಆದರೆ ಮುಖ್ಯವಾಗಿರುವುದು ಅಕ್ಷರ ಮತ್ತು ಶಬ್ದಗಳ ನಡುವಿನ ಅಂತರ. ಅಕ್ಷರ ಮತ್ತು ಶಬ್ದಗಳ ನಡುವೆ ಕಡಿಮೆ ಅಂತರವಿದ್ದರೆ, ಇವರು ಸ್ವಾರ್ಥಿಗಳಾಗಿರುತ್ತಾರೆ, ಇವರಲ್ಲಿ ಅಭಧ್ರತೆ ಇರುತ್ತದೆ, ಇವರು ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳಲಾರರು. ಅಕ್ಷರ ಮತ್ತು ಶಬ್ದಗಳ ನಡುವೆ ಹೆಚ್ಚು ಅಂತರವಿದ್ದರೆ, ಇವರು ಬಹಿರ್ಮುಖಿಗಳಾಗಿರುತ್ತಾರೆ. ಸಹಾನುಭೂತಿ, ಅನುಕಂಪ ಮತ್ತು ಮಾನವೀಯತೆ ಇವರಲ್ಲಿರುತ್ತದೆ. ಅಕ್ಷರ ಮತ್ತು ಶಬ್ದಗಳ ನಡುವೆ ಸಮನಾದ ಅಂತರವಿದ್ದರೆ, ಇವರು ಆತ್ಮವಿಶ್ವಾಸ, ನೈತಿಕತೆ ಹೊಂದಿರುತ್ತಾರೆ, ಆದರೆ ಇವರು ಯಾವತ್ತೂ ಸಾಹಸಕಾರ್ಯಗಳಿಗೆ ಕೈ ಹಾಕುವುವವರಲ್ಲ.
 
ಹೀಗೆ ಗ್ರಾಫಾಲಜಿಯೂ ನಮ್ಮ ಬರವಣಿಗೆಯನ್ನು ವಿಧ ವಿಧವಾಗಿ ವಿಶ್ಲೇಷಿಸುತ್ತದೆ. ಇದರಲ್ಲಿ ಸೂಕ್ಷ್ಮವಾಗಿ ಮಾತ್ರ ವಿವರಿಸಲಾಗಿದೆ. ನಿಜಕ್ಕೂ ಗ್ರಾಫಾಲಜಿಯೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಜೀವನ ಶೈಲಿ, ಗುಣ, ನಡೆ-ನುಡಿ ತಿಳಿಯಲು ಆಸಕ್ತಿಕರ ವಿಷಯ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments