Select Your Language

Notifications

webdunia
webdunia
webdunia
webdunia

ಜಾಗತಿಕ ತಾಪಮಾನ ತಡೆಯುವಲ್ಲಿ ಇರುವೆಯ ಮಹತ್ವದ ಪಾತ್ರ!

ಜಾಗತಿಕ ತಾಪಮಾನ ತಡೆಯುವಲ್ಲಿ ಇರುವೆಯ ಮಹತ್ವದ ಪಾತ್ರ!
ವಾಷಿಂಗ್ಟನ್ , ಗುರುವಾರ, 14 ಆಗಸ್ಟ್ 2014 (17:42 IST)
ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಈ ಜಾಗತಿಕ ತಾಪಮಾನದಿಂದ ಇರುವೆ ನಮ್ಮನ್ನು ರಕ್ಷಿಸುತ್ತದೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ. ಇರುವೆಗಳು 6.5 ಕೋಟಿ ವರ್ಷದ ಮೊದಲಿನಿಂದ  ಅಪಾರ ಪ್ರಮಾಣದ ಕಾರ್ಬನ್‌ ಡೈಆಕ್ಸೈಡ್‌‌‌ ಶೇಖರಿಸಿಕೊಂಡಿವೆ. ಒಂದು ಇರುವೆಯ ಜೀವನಾವಧಿ ಒಂದು ವರ್ಷಕ್ಕಿಂತ ಹೆಚ್ಚಿಗೆ ಇರುವುದಿಲ್ಲ. ಆದರೆ, ಇವುಗಳ ಸಂಖ್ಯೆ ಹೆಚ್ಚುತ್ತಾ ಹೊದಂತೆ ವಾತಾವರಣವನ್ನು ತಂಪುಗೊಳಿಸುವಲ್ಲಿ ಸಹಾಯ ಮಾಡುತ್ತದೆ  ಎಂದು ಸಂಶೋಧನೆ ತಿಳಿಸಿದೆ. 
 
ಇರುವೆಗಳು ಪರಿಸರವನ್ನು ಬದಲಾಯಿಸುತ್ತಿವೆ. ಕೆಲವು ಸ್ವಜಾತಿಯ ಇರುವೆಗಳು ಖನಿಜಾಂಶಗಳಲ್ಲಿರುವ ಗಾಳಿಯನ್ನು ಹೀರಿ  ಕ್ಯಾಲ್ಸಿಯಂ ಕಾರ್ಬನೆಟ್‌‌ ಅಥವಾ ಸುಣ್ಣದ ಕಲ್ಲುಗಳ ಉತ್ಪಾದನೆಯಲ್ಲಿ ನೆರವಾಗುತ್ತದೆ.  ಸುಣ್ಣದ ಕಲ್ಲುಗಳ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಇರುವೆಗಳು ಗಾಳಿಯಿಂದ ಅಲ್ಪ ಪ್ರಮಾಣದ ಕಾರ್ಬನ್‌ ಡೈಆಕ್ಸೈಡ್‌‌‌ನ ತೆಗೆದು ಬಿಡುತ್ತದೆ ಎಂದು ಟೆಂಪ್ ನಗರದ ಅರಿಜೋನಾ ಸ್ಟೇಟ್‌‌ ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರಜ್ಞ ರೋನಾಲ್ಡ್‌‌ ಡಾರ್ನ್‌ ತಿಳಿಸಿದ್ದಾರೆ. ಇರುವೆಗಳು ಬೆಸಾಲ್ಟ್‌ ಕಲ್ಲುಗಳನ್ನು ಕೊರೆಯಲು ಕೂಡ ಸಹಾಯ ಮಾಡುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.  
 
" ಇರುವೆಗಳು ಖನಿಜದಿಂದ ಕ್ಯಾಲ್ಸಿಯಂ ಮತ್ತು ಮ್ಯಾಗ್ನೆಶಿಯಂ ಹೊರತೆಗೆಯುತ್ತದೆ ಮತ್ತು  ಸುಣ್ಣದ ಕಲ್ಲು ಸಿದ್ದಪಡಿಸಲು ಇದರ ಬಳಕೆಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಕಾರ್ಬನ್‌‌ ಡೈಆಕ್ಸೈಡ್‌‌‌ ಗ್ಯಾಸ್‌‌‌‌ನ ಕೆಲವು ಪ್ರಮಾಣ ಕಲ್ಲಿನಲ್ಲಿ ಸರೆಯಾಗುತ್ತದೆ. " ಎಂದು ಡಾರ್ನ್‌ ತಿಳಿಸಿದ್ದಾರೆ. ಈ ಅಧ್ಯಯನದ, ಸಂಶೋಧನೆ ಪತ್ರಿಕೆಯಾದ ಜಿಯೊಲಾಜಿಯಲ್ಲಿ ಪ್ರಕಟವಾಗಿದೆ. 
 

Share this Story:

Follow Webdunia kannada