Webdunia - Bharat's app for daily news and videos

Install App

ವಿಚಿತ್ರ ಮದುವೆ:9 ವರ್ಷದ ಮದುಮಗ, 62 ವರ್ಷದ ಮದುಮಗಳು

Webdunia
ಮಂಗಳವಾರ, 22 ಜುಲೈ 2014 (14:12 IST)
ದಕ್ಷಿಣ ಆಫ್ರಿಕಾದ ಒಂಬತ್ತು ವರ್ಷದ ಬಾಲಕ ಸಾನೆಲ್‌‌ ಮಸಿಲೆಲಾ ತನ್ನ 62 ವರ್ಷ ವಯಸ್ಸಿನ ಪತ್ನಿಗೆ ಮುತ್ತು ಕೊಟ್ಟು ಅವಳಿಗೆ ಪ್ರೀತಿ ಮಾಡುವುದಾಗಿ ತಿಳಿಸಿದ್ದಾನೆ. ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಗ್ರಾಮದ ಜನತೆ ಈ ಮದುವೆಯನ್ನು ವಿಭಸ್ತ ಘಟನೆ ಎಂದು ಕರೆದಿದ್ದಾರೆ. 
 
ಡೆಲಿ ಮೆಲ್‌‌ ಆನ್‌ ಲೈನ್‌‌‌ನಲ್ಲಿ ಜಾನ್‌ ಕೆಲಿ ಪ್ರಕಾರ ಈ ಇಬ್ಬರು ಎರಡನೇ ಬಾರಿ ಮದುವೆಯಾಗಿದ್ದಾರೆ. ವಧು ಹೆಲನ್‌ ಶಾಬಾಂಗೂ (62) ತಮ್ಮ ಎರಡನೇ ಮದುವೆಯಲ್ಲಿ ಪತಿ ಸಾನೆಲ್‌ ಮಸೀಲೆಲಾಗೆ ಉಂಗುರ ತೊಡಿಸಿದ್ದಾರೆ. ಈ ಮದುವೆ ದಕ್ಷೀಣ ಆಫ್ರಿಕಾದ ಎಮಪುಮಾಲಾಂಗಾದಲ್ಲಿ ಬುಶಬಕರಿಜ್‌ ಹತ್ತಿರದ ಶಿಮಹುಂಗ್ವೆಯ ಕಿಲ್ಡೆಯರ್‌ ಗ್ರಾಮದಲ್ಲಿ ನಡೆದಿದೆ. ಈ ಜೋಡಿ ಕಳೆದ ವರ್ಷ ಕೂಡ ವಿಧಿವತ್ತಾಗಿ ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ. 
 
ಒಂದು ಬೆಳ್ಳಿತರಹದ ಬಿಳಿ ಬಣ್ಣದ ಟಕ್ಸೆಡೊ ಸಾಂಪ್ರದಾಯಕ ವಸ್ತ್ರವನ್ನು ಧರಿಸಿಕೊಂಡು ಮಗುವಿನ ಮುಖ ಹೊಂದಿರುವ ಸಾನೆಲೆ ಐದು ಮಕ್ಕಳ ತಾಯಿ ಹೆಲನ್‌‌ ಶಾಬಾಂಗು ಕೈಹಿಡಿದುಕೊಂಡಿದ್ದಾನೆ ಮತ್ತು ಇಬ್ಬರು ಮದುವೆಯ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಹೆಲನ್‌ಗೆ 28 ವರ್ಷದಿಂದ 38 ವರ್ಷದವರೆಗಿನ ಮಕ್ಕಳಿದ್ದಾರೆ. ಈ ಇಬ್ಬರ ಮದುವೆಗೆ 100 ಜನರು ಆಗಮಿಸಿದ್ದರು.  
 
ಸಮಾರಂಭದಲ್ಲಿ ಬಂದಿದ್ದ ಜನರಿಗೆ ಕೇಕ್‌ ತಿನಿಸಲಾಯಿತು ಮತ್ತು ಈ ಸಮಯದಲ್ಲಿ ಹೆಲನ್ ದೀರ್ಘಕಾಲದವರೆಗೆ ಪತಿಯಾಗಿದ್ದ ಆಲ್ಫ್ರೆಢ್‌ ಶಬಾಂಗು ಕೂಡ ಉಪಸ್ಥಿತರಿದ್ದರು. 66 ವರ್ಷದ ಶಬಾಂಗು ಕಳೆದ ವರ್ಷದ ಮದುವೆಯ ಸಂದರ್ಭದಲ್ಲಿ ಕೂಡ ಉಪಸ್ಥಿತರಿದ್ದರು. 
 
ನಾನು ನನ್ನ ಮಕ್ಕಳು ಖುಷಿಯಾಗಿದ್ದೇವೆ ಏಕೆಂದರೆ ನಮಗೆ ಹೆಲನ್‌ ಮತ್ತು ಆ ಮಗುವಿನ ಮದುವೆಯಿಂದ ಯಾವುದೇ ಸಮಸ್ಯೆ ಇಲ್ಲ ಮತ್ತು ಇದರಿಂದ ಬೇರೆ ಜನರು ಏನೆಂದುಕೊಳ್ಳುತ್ತಾರೆಂದು ನನಗೆ ಗೊತ್ತಿಲ್ಲ ಎಂದು ಆಲ್ಫ್ರೆಡ್‌ ತಿಳಿಸಿದ್ದಾನೆ.  ಈ ಮದುವೆ ಮತ್ತೊಂದು ಸಂಬಂಧವಾಗಿದೆ ಎಂದು ಎರಡೂ ಪರಿವಾರದವರು ತಿಳಿಸಿದ್ದಾರೆ. ಏಕೆಂದರೆ ಕಳೆದ ವರ್ಷ ಸಾನೆಲೆಯ ಮೃತ ಪೂರ್ವಜರು ಈ ವಿವಾಹ ಮಾಡಲು ತಿಳಿಸಿದ್ದರು. ಇವರ ತಂದೆ ತಾಯಿಯರು 500 ಪೌಂಡ್‌ ಹಣ ಹೆಲನ್‌ಗೆ ಮತ್ತು 1000 ಪೌಂಡ್‌ ಹಣ ವಿವಾಹ ಸಮಾರಂಭಕ್ಕೆ ನೀಡಿದ್ದಾರೆ. ನನಗೆ ಇನ್ನು ವಯಸ್ಸಿದೆ ಮುಂದೆ ದೊಡ್ಡವನಾದಾಗ ನನ್ನದೆ  ವಯಸ್ಸಿನ ಮಹಿಳೆಯ ಜೊತೆಗೆ  ಮತ್ತೊಂದು ವಿವಾಹವಾಗಬಹುದು ಎಂದು ಮದುಮಗ  ತಿಳಿಸಿದ್ದಾನೆ 
 
ನಾನು ಹೆಲನ್‌ ಜೊತೆಗೆ ಮದುವೆಯಾಗಿರುವುದು ನನಗೆ ಸಂತಸವಾಗಿದೆ. ಆದರೆ ನಾನು ಶಾಲೆಗೆ ಹೋಗುವೆ ಮತ್ತು ಮನಸ್ಸಿಚ್ಛೆಯಂತೆ ಓದುವೆ. ನಾನು ಹೆಲನ್‌‌ಗೆ ಪ್ರೀತಿ ಮಾಡುತ್ತೇನೆ ಅದಕ್ಕಾಗಿ ಅವಳನ್ನು ಮದುವೆಯಾಗಿದ್ದೇನೆ, ನಾನು ಹೆಲನ್‌‌‌ನನ್ನು ಮದುವೆ ಆಗುತ್ತೇನೆ ಎಂದು ನನ್ನ ತಾಯಿಗೆ ತಿಳಿಸಿದ್ದೆ. ನಾವು ಜೊತೆ ಜೊತೆಯಾಗಿ ಇರುವುದಿಲ್ಲ ಆದರೆ ನಾನು ಡಮ್ಪಿಂಗ್‌ ಸೈಟ್‌‌ನಲ್ಲಿ ಬೇಟಿಯಾಗುತ್ತೇನೆ. ಅಲ್ಲಿ ನನ್ನ ತಾಯಿ ಕೆಲಸ ಮಾಡುತ್ತಾಳೆ. ರಿಸೈಕ್ಲಿಂಗ್‌ ಕೆಲಸ ಮಾಡುವ ಹೆಲನ್‌ " ನನಗೆ ತುಂಬಾ ಖುಷಿಯಾಗಿದೆ , ಈ ಹುಡುಗ ನನ್ನನ್ನು ಆರಿಸಿದ್ದಕ್ಕಾಗಿ ನನಗೆ ಸಂತಸವಿದೆ" ಎಂದು ತಿಳಿಸಿದ್ದಾಳೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments