Webdunia - Bharat's app for daily news and videos

Install App

ಕಲಿಯುಗದ ಭೀಷ್ಮನ ಕಥೆಯಿದು; ಮಿಸ್ ಮಾಡದೆ ಓದಿ

Webdunia
ಶುಕ್ರವಾರ, 12 ಜೂನ್ 2015 (17:25 IST)
ಇದು ಸುಖಾಂತ್ಯಗೊಂಡಿರುವ ಕಥೆಯಲ್ಲ. ಆದರೆ ಪರಿಶ್ರಮ, ಆಶಾವಾದಿತನದ ಸ್ಪೂರ್ತಿಯ ಕತೆ. ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲದಿಂದ ಪರೀಕ್ಷೆ ಬರೆಯುತ್ತಿರುವ ಅಜ್ಜನ ಕಥೆಯಿದು. ಈತನನ್ನು ಕಲಿಯುಗದ ಭೀಷ್ಮ ಪಿತಾಮಹನೆನ್ನುತ್ತೀರೋ, ಛಲದಂಕಮಲ್ಲನೆನ್ನುತ್ತೀರೋ? ಅಥವಾ ಇನ್ನೇನನ್ನುತ್ತೀರೋ... ನಿಮಗೆ ಬಿಟ್ಟಿದ್ದು...

ಏನೇ ಆಗಲಿ ನಾನು 10ನೇ ತರಗತಿಯನ್ನು ಪಾಸ್ ಮಾಡಲೇಬೇಕೆಂಬ ಗುರಿ ಹೊತ್ತಿರುವ 81 ವರ್ಷದ ಅಜ್ಜ ಕೆಲ ದಿನಗಳ ಹಿಂದೆ 46ನೇ ಬಾರಿ ಪರೀಕ್ಷೆ ಎದುರಿಸಿದ್ದ. ಈ ಬಾರಿಯಾದರೂ ತಾನು ಉತ್ತೀರ್ಣನಾಗುತ್ತೇನೆ ಎಂಬ ಆಶಾವಾದದಲ್ಲಿ ಇದ್ದನಾತ. ಬುಧವಾರವಷ್ಟೇ ರಾಜಸ್ಥಾನದಲ್ಲಿ 10ನೇ ತರಗತಿ ಫಲಿತಾಂಶ ಹೊರ ಬಿದ್ದಿದ್ದು ಈ ಬಾರಿಯೂ ಅಜ್ಜ ವಿಫಲರಾಗಿದ್ದಾರೆ. ಆದರೆ ನಿರಾಶರಾಗಿಲ್ಲ. 
 
ಈ ಬಾರಿ ತೇರ್ಗಡೆಯಾಗುತ್ತೇನೆ ಎಂಬ ಭರವಸೆಯಲ್ಲಿದ್ದ ಅವರ ಭರವಸೆ ಸಂಪೂರ್ಣವಾಗಿ ಸತ್ತು ಹೋಗಿಲ್ಲ. ಅವರು ಒಂದು ವಿಷಯದಲ್ಲಿ ಪಾಸ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜ ವಿಜ್ಞಾನ ವಿಷಯದಲ್ಲಿ ಕಳೆದ ಬಾರಿ ಸೊನ್ನೆ ಸುತ್ತಿದ್ದ ಅವರು  ಈ ಬಾರಿ 34 ಅಂಕ ಪಡೆದು ಪಾಸಾಗಿದ್ದಾರೆ.
 
ಇತರೆ ವಿಷಯಗಳಲ್ಲಿ ಅಜ್ಜ ಪಡೆದ ಅಂಕಗಳು ಈ ಮುಂದಿನಂತಿವೆ:
 
ಇಂಗ್ಲೀಷ್ - 0
ಹಿಂದಿ    -   3
ಗಣಿತ -    9
ಸಂಸ್ಕೃತ - 7
 
45 ಯತ್ನಗಳಲ್ಲಿ ಸಹ ತೇರ್ಗಡೆಯಾಗಲು ವಿಫಲನಾಗಿದ್ದ ಅಜ್ಜ ಈ ಬಾರಿ ಸಮಾಜ ವಿಜ್ಞಾನ ವಿಷಯದಲ್ಲಿ ಪಾಸ್ ಆದ ಸಂತೋಷದಲ್ಲಿದ್ದಾರೆ. ಕಳೆದ ಬಾರಿ ಅವರು ಪಡೆದ ಅಂಕಗಳು ಇಂತಿವೆ:
ಇಂಗ್ಲೀಷ್ - 4
ಹಿಂದಿ    -   27
ಗಣಿತ -    8
ಸಂಸ್ಕೃತ - 7
ಸಮಾಜ ವಿಜ್ಞಾನ- 0
 
ಪ್ರತಿ ವರ್ಷ ನಡೆಯುವ 10 ನೇ ತರಗತಿ ಪರೀಕ್ಷೆಗೆ ಕಳೆದ ಹಲವು ದಶಕಗಳಿಂದ ಬರುತ್ತಿರುವ ಅಜ್ಜ ಎಲ್ಲರಿಗೂ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ. 
 
50 ವರ್ಷಗಳಿಂದ ಫೇಲ್ ಆಗುತ್ತಿದ್ದರೂ ಈ ಅಜ್ಜ ತನ್ನ ಹಠ ಮಾತ್ರ ಬಿಟ್ಟಿಲ್ಲ ಮುಂದಿನ ವರ್ಷ ಮತ್ತಷ್ಟು ಶ್ರಮವಹಿಸಿ ಪಾಸ್ ಮಾಡುತ್ತೇನೆ ಅಂತಾರೆ. 
 
ನಿಮ್ಮ ಈ ಛಲಕ್ಕೆ ಕಾರಣವೇನು ಎಂದು ಕೇಳಿದ್ದಕ್ಕೆ ಅಜ್ಜ ನೀಡುವ ಕಾರಣ ಮತ್ತೂ ಕುತೂಹಲಕಾರಿಯಾಗಿದೆ. "ನಾನು 10 ನೇ ತರಗತಿ ಪಾಸ್ ಆಗುವವರೆಗೆ ಮದುವೆಯಾಗಲಾರೆ ಎಂದು ಯುವಕನಾಗಿದ್ದಾಗ ಪ್ರತಿಜ್ಞೆ ಮಾಡಿದ್ದೆ. ಈಗ ಮದುವೆಯನ್ನಂತೂ ಆಗಲು ಸಾಧ್ಯವಿಲ್ಲ. ಹೀಗಾಗಿ ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ ಪರೀಕ್ಷೆ ಬರೆಯುತ್ತಿದ್ದೇನೆ", ಎನ್ನುತ್ತಿದ್ದಾನೆ ಅಜ್ಜ. 
 
"ಇಲ್ಲಿಯವರೆಗೆ ನಾನು ಬಹಳ ಪರಿಶ್ರಮ ಪಟ್ಟಿದ್ದೆ. ಆದರೆ ಈಗ ವಯಸ್ಸಾಗಿರುವುದರಿಂದ ಬರವಣಿಗೆ ವೇಗ ಕುಂಠಿತಗೊಂಡಿದೆ. ಏಕೆಂದರೆ ನನ್ನ ಕಣ್ಣಿನ ದೃಷ್ಟಿ ಮಂಜಾಗಿದೆ. ಹೀಗಾಗಿ ಉತ್ತರಗಳು ಗೊತ್ತಿದ್ದರೂ ನನಗೆ ಬರೆಯಲಾಗುತ್ತಿಲ್ಲ", ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ತಾತ.
 
ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಅನಾಥರಾಗಿರುವ ಶಿವ ಚರಣ್ ತಾತ ದೇವಸ್ಥಾನವೊಂದರಲ್ಲಿ ವಾಸವಾಗಿದ್ದಾರೆ.
 
"ಮುಂದಿನ ವರ್ಷ ನಾನು ಮತ್ತಿಷ್ಟು ಕಷ್ಟ ಪಟ್ಟು ಓದಿ ಪಾಸ್ ಆಗಲು ಪ್ರಯತ್ನಿಸುತ್ತೇನೆ", ಎನ್ನುತ್ತಾರೆ ತಾತ ಕುಂದದ ಆಶಾವಾದದೊಂದಿಗೆ... 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments