Select Your Language

Notifications

webdunia
webdunia
webdunia
webdunia

15 ವರ್ಷದವರೆಗೆ ಈತನ ಶರೀರದಿಂದ ಸಿಳ್ಳೆ ಶಬ್ದ ಬರುತ್ತಿತ್ತು

15 ವರ್ಷದವರೆಗೆ ಈತನ ಶರೀರದಿಂದ ಸಿಳ್ಳೆ ಶಬ್ದ ಬರುತ್ತಿತ್ತು
ಬೀಜಿಂಗ್‌‌ , ಶನಿವಾರ, 5 ಏಪ್ರಿಲ್ 2014 (18:03 IST)
PR
ಚೀನಾದ ಲೀಯೂ ಯುಗಾಂಗ್‌‌ ಹೆಸರಿನ ವ್ಯಕ್ತಿ 9 ವರ್ಷದಲ್ಲಿದ್ದಾಗ ಪ್ಲ್ಯಾಸ್ಟಿಕ್‌‌ನ ಸೀಟಿಯನ್ನು ನುಂಗಿದ್ದನು.15 ವರ್ಷದ ನಂತರ ಈತನ ಶರೀರದಿಂದ ವೈದ್ಯರು ಸೀಟಿಯನ್ನು ಹೊರ ತಗೆದರು. ಇದಕ್ಕು ಮೊದಲು ಸತತ 15 ವರ್ಷಗಳ ಕಾಲ ಈತ ಮಲಗಿಕೊಂಡಾಗ ಈತನಿಂದ ಶಿಳ್ಳೆಯ ಶಬ್ದ ಬರುತ್ತಿತ್ತು .

ಚೀನಾದ ಸಿಚುಆನ್‌ ಪ್ರಾಂತ್ಯದ ಚೆಂಗದು ಆಸ್ಪತ್ರೆಯಲ್ಲಿನ ವೈದ್ಯರು ಕನಿಷ್ಟ 30 ನಿಮಿಷದರೆಗೆ ನಡೆಸಿದ ಶಸ್ತ್ರ ಚಿಕಿತ್ಸೆಯ ನಂತರ ಯುಗಾಂಗ್‌‌ನ ಶರೀರದಿಂದ ಸೀಟಿಯನ್ನು ಹೊರತಗೆದರು .

ಈತ 1999ರಲ್ಲಿ ಸೀಟಿಯನ್ನು ನುಂಗಿದ್ದನು. ಆದರೆ ಆ ಸಮಯದಲ್ಲಿ ವೈದ್ಯರು ಈತನ ಶರೀರದಿಂದ ಸೀಟಿಯನ್ನು ಹೊರತಗೆದಿರಲಿಲ್ಲ ಎಂದು ಗ್ಲೋಬಲ್‌ ಟೈಮ್ಸ್‌‌ ವರದಿಯಲ್ಲಿ ತಿಳಿಸಲಾಗಿದೆ.

ಕಳೆದ 15 ವರ್ಷಗಳಿಂದ ಈತನಿಗೆ ಉಸಿರಾಟದ ಸಮಸ್ಯೆ ಕಾಡುತ್ತಿತ್ತು. ಇದರಿಂದ ಈತನಿಗೆ ಸದಾ ಕೆಮ್ಮು ಕೂಡ ಬರುತ್ತಿತ್ತು . ಈತನ ಶರೀರದಲ್ಲಿ ಯಾವುದಾದರು ವಸ್ತು ಇದೆ ಎಂದು ವೆಸ್ಟ್‌‌ ಚೈನಾ ಹಾಸ್ಪೀಟಲ್‌‌‌ ವೈದ್ಯ ಝೂ ಹುಯಿ ಅವರಿಗೆ ಅನಿಸಿತು . ಆಗ ವೈದ್ಯರು ಈತನ ಶರೀರದಿಂದ ಸೀಟಿ ಉದುವ ಉಪಕರಣವನ್ನು ಹೊರತಗೆಯುವಲ್ಲಿ ಸಫಲರಾಗಿದ್ದಾರೆ.



Share this Story:

Follow Webdunia kannada