Select Your Language

Notifications

webdunia
webdunia
webdunia
webdunia

‘ಹೇರ್‌ಲೈನ್’ಗೆ ಸಂಗಾತಿ ಜೊತೆ ಬಂದರೆ ಉಚಿತ ಸೇವೆ

‘ಹೇರ್‌ಲೈನ್’ಗೆ ಸಂಗಾತಿ ಜೊತೆ ಬಂದರೆ ಉಚಿತ ಸೇವೆ
, ಬುಧವಾರ, 2 ಏಪ್ರಿಲ್ 2014 (15:44 IST)
- ವ್ಯಾಲೆಂಟೈನ್ಸ್ ವೀಕ್ ಕೊಡುಗೆ ನೀಡಿದ ಹೇರ್‌ಲೈನ್
- ಜೊತೆಗಾರರಿಗೆ ನೀವು ಪಡೆದ ಮೊತ್ತದಷ್ಟೇ ಸೇವೆ ಫ್ರೀ..!
PR

ಬೆಂಗಳೂರು: ಫೆಬ್ರವರಿ ಎಂದ ತಕ್ಷಣ ನೆನಪಾಗುವುದು ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳ ಸಂಭ್ರಮವನ್ನು ಈ ಫೆಬ್ರವರಿಯಲ್ಲಿ ಮತ್ತಷ್ಟು ಮಧುರವಾಗಿಸಲು ಹೇರ್‌ಲೈನ್ ಇಂಟರ್‌ನ್ಯಾಷನ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ಸಂಸ್ಥೆ ಅವಕಾಶ ಕಲ್ಪಿಸುತ್ತಿದೆ.

ಫೆಬ್ರವರಿ ೧೦ರಿಂದ ೧೬ರವರೆಗಿನ ಅವಧಿಯಲ್ಲಿ ನೀವು ನಮ್ಮಲ್ಲಿ ಯಾವುದೇ ಬ್ಯೂಟಿ, ಚರ್ಮ ಹಾಗೂ ಕೂದಲಿನ ಟ್ರೀಟ್‌ಮೆಂಟ್ ಪಡೆದರೂ ನಿಮ್ಮ ಜೊತೆಗಾರರಿಗೆ ಕೊಡುಗೆ ರೂಪದಲ್ಲಿ ಉಚಿತವಾಗಿ ಟ್ರೀಟ್‌ಮೆಂಟ್ ನೀಡುತ್ತೇವೆ.

ಪ್ರತಿಯೊಬ್ಬ ಮನುಷ್ಯನೂ ಈಗ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾನೆ. ಆದರೆ ಬ್ಯೂಟಿ ಟ್ರೀಟ್‌ಮೆಂಟ್ ಪಡೆಯಲು ಹೆಚ್ಚಿನವರಿಗೆ ಕಾಲಾವಕಾಶವೇ ಸಿಗುವುದಿಲ್ಲ. ಹಾಗಾಗಿ ನಿಮಗೆ ಹಾಗೂ ನಿಮ್ಮ ಜೊತೆಗಾರರಿಗೆ ಟ್ರೀಟ್‌ಮೆಂಟ್ ಸಿಗುವಂತಾಗಲು ‘ಹೇರ್‌ಲೈನ್ಸ್’ ಈ ವ್ಯಾಲೆಂಟೈನ್ ಅವಧಿಯಲ್ಲಿ ಅವಧಿಯಲ್ಲಿ ಅವಕಾಶ ಮಾಡಿಕೊಡುತ್ತಿದೆ. ನಮ್ಮ ಈ ಸೇವೆಯಿಂದ ನೀವು ಮತ್ತಷ್ಟು ಚೆಂದಗೆ ಕಾಣಿಸಿಕೊಳ್ಳಬಹುದು ಹಾಗೂ ಈ ವ್ಯಾಲೆಂಟೈನನ್ನು ಮತ್ತಷ್ಟು ರೊಮ್ಯಾಂಟಿಕ್ ಮಾಡಿಕೊಳ್ಳಬಹುದು ಎನ್ನುವುದು ನಮ್ಮ ಸೇವೆಯ ವಿಶೇಷ.

ಇನ್‌ಸ್ಟೆಂಟ್ ಮೇಕ್ ಓವರ್, ಇನ್‌ಸ್ಟೆಂಟ್ ಗ್ಲೋ, ಬೋಟೋಕ್ಸ್ ಇಂಜೆಕ್ಷನ್, ಸೆಲ್ಫಿಲ್ ಫೇಸ್‌ಲಿಫ್ಟ್, ಕೊಲಾಜನ್ ಟ್ರೀಟ್‌ಮೆಂಟ್, ಫೇಶಿಯಲ್ ಕ್ಲೀನ್ ಅಪ್, ಬಾಡಿ ಹೇರ್ ರಿಡಕ್ಷನ್, ಮುಂಗುರುಳು, ಕೃತಕ ಕೂದಲು, ಶಸ್ತ್ರಚಿಕಿತ್ಸೆ ರಹಿತ ಫೇಸ್‌ಲಿಫ್ಟ್ ಸೇರಿದಂತೆ ಯಾವುದೇ ಬ್ಯೂಟಿ, ಸ್ಕಿನ್ ಹಾಗೂ ಕೂದಲಿನ ಟ್ರೀಟ್‌ಮೆಂಟ್ ನಮ್ಮಲ್ಲಿ ಲಭ್ಯವಾಗಲಿದೆ. ಪುರುಷರು ಮತ್ತು ಮಹಿಳೆಯರು ತಮ್ಮ ಸಂಗಾತಿಗೆ ಕೊಡುಗೆ ನೀಡಲೆಂದೇ ಹೇರ್‌ಲೈನ್ಸ್ ಈ ಸೇವೆಗಳನ್ನು ನೀಡುತ್ತಿದೆ.

ವೇಗವಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ವ್ಯಾಲೆಂಟೈನ್ಸ್ ಡೇಯಂದು ಪ್ರೇಮಿಗಳು ಪರಸ್ಪರ ಜೊತೆಗಿದ್ದು ಒಂದಷ್ಟು ಕಾಲ ಕಳೆಯಲು ಬಯಸುತ್ತಾರೆ. ಸೌಂದರ್ಯ ಪ್ರಜ್ಞೆಯಿರುವ ಜೋಡಿಗಳಿಗೆ ಇಂತಹ ಪ್ಯಾಕೇಜ್ ಸಹಕಾರಿ. ಅದರಲ್ಲೂ ಇಬ್ಬರೂ ಪರಸ್ಪರ ಜೊತೆಗಿದ್ದು ಈ ರೀತಿಯ ಟ್ರೀಟ್‌ಮೆಂಟ್ ತೆಗೆದುಕೊಂಡರೆ ಅದು ಬೋನಸ್ ಕೊಡುಗೆ ಎನ್ನುತ್ತಾರೆ ಹೇರ್ ಲೈನ್ ಇಂಟರ್‌ನ್ಯಾಷನ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಬಾನಿ ಆನಂದ್.

ಹೇರ್‌ಲೈನ್‌ನಲ್ಲಿ ನೀಡುವ ಎಲ್ಲಾ ಚಿಕಿತ್ಸೆಗಳನ್ನೂ ನುರಿತ ಚರ್ಮ ರೋಗ ತಜ್ಞರಿಂದಲೇ ನೀಡಲಾಗುತ್ತಿದೆ. ಈ ತಜ್ಞರು ಚಿಕಿತ್ಸೆ ನೀಡುವುದಕ್ಕೂ ಮುನ್ನ ನಿಮ್ಮ ದೇಹ, ಚರ್ಮ ಹಾಗೂ ಕೂದಲನ್ನು ಪರಿಶೀಲಿಸಿ ಬಳಿಕವಷ್ಟೇ ಚಿಕಿತ್ಸೆ ಆರಂಭಿಸುತ್ತಾರೆ. ಇದರಿಂದ ಚಿಕಿತ್ಸೆಗೆ ಬರುವವರಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ ನಮ್ಮ ಚಿಕಿತ್ಸೆ ನಿಮಗೆ ತೃಪ್ತಿದಾಯಕವಾಗಿರುತ್ತದೆ.

ಹೇರ್ ಲೈನ್ ಇಂಟರ್‌ನ್ಯಾಷನ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್

ತಲೆಕೂದಲು, ಚರ್ಮ ಹಾಗೂ ಸೌಂದರ್ಯ ವರ್ಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುವ ಸೇವೆಗಳನ್ನು ಹೇರ್ ಲೈನ್ ಇಂಟರ್‌ನ್ಯಾಷನ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ನೀಡುತ್ತಿದೆ. ನಮ್ಮ ಸಂಸ್ಥೆಯು ಪುರುಷರು ಹಾಗೂ ಮಹಿಳೆಯರಿಗೆ ಚಿಕಿತ್ಸೆ ಹಾಗೂ ಟ್ರೀಟ್‌ಮೆಂಟ್ ನೀಡುತ್ತದೆ. ಇಂದಿರಾನಗರ, ವೈಟ್‌ಫೀಲ್ಡ್, ಜಯನಗರ ಮತ್ತು ಆರ್.ಟಿ.ನಗರ ಸೇರಿದಂತೆ ಒಟ್ಟು ೪ ಕೇಂದ್ರಗಳಲ್ಲಿ ಮೆಡಿಕಲ್ ಹಾಗೂ ಸೌಂದರ್ಯ ತಜ್ಞರಿಂದ ಸೇವೆ ನೀಡುತ್ತದೆ

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada