Select Your Language

Notifications

webdunia
webdunia
webdunia
webdunia

ಹುಡುಗಿಯರಿಗೆ ಪಾನಿ ಪುರಿ ಯಾಕೆ ಇಷ್ಟ ?

ಹುಡುಗಿಯರಿಗೆ ಪಾನಿ ಪುರಿ ಯಾಕೆ ಇಷ್ಟ ?
, ಭಾನುವಾರ, 6 ಅಕ್ಟೋಬರ್ 2013 (16:10 IST)
- ಅರುಣಕುಮಾರ ಧುತ್ತರಗಿ

PR
ಪಾನಿ ಪುರಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ , ಅದರಲ್ಲು ಹುಡಗಿಯರಿಗೆ ಪಾನಿಪುರಿ ಅಂದರೆ ಪಂಚ ಪ್ರಾಣ. ಬಹಳ ಇಷ್ಟಪಟ್ಟು ತಿಂತಾರೆ. ಯಾರಾದ್ರು ಸ್ಲಾಮ್ ಬೂಕ್ ಕೊಟ್ಟರೆ ಅದರಲ್ಲಿ ನಿಮಗೆ ಇಷ್ಟದ ತಿಂಡಿ ಯಾವುದು ಅಂತಾ ಇದ್ದರೆ ಪಾನಿಪುರಿ ಅಂತ ಬರೆಯೊರೆ ಜಾಸ್ತಿ.

ಒಂದಿಷ್ಟು ಹುಳಿ, ಉಪ್ಪು, ಖಾರು, ಮಸಾಲೆ ಮಿಕ್ಸ್ ಮಾಡಿ ಪಾನಿ ರೆಡಿ ಮಾಡತಾರೆ, ಆ ಪಾನಿ ಪುರಿಯೋಳಗಡೆ ಹಾಕಿ ತಿಂದರೆ, ಆ ಮಜಾನೇ ಬೇರೆ. ಇದರ ಜೋತೆಗೆ ಬಟಾಣಿ ಮತ್ತು ಕತ್ತರಿಸಿದ ಈರುಳ್ಳಿ ಮಿಕ್ಸ್ ಮಾಡಿಕೊಂಡು ತಿಂಡರೆ .. ಆಹಾ ನೆನೆಸ್ಕೊಂಡರೆ ಬಾಯಿಗೆ ನೀರು ಬರುತ್ತೆ .

ಸಾಮನ್ಯವಾಗಿ ಹುಡುಗರು ಕಡಿಮೆ ಪಾನಿ ಪುರಿ ತಿನ್ನುತ್ತಾರೆ, ಆದರೆ ಹುಡುಗಿಯರು ಮಾತ್ರ ಅತಿ ಹೆಚ್ಚು ಪಾನಿಪುರಿ ತಿಂತಾರೆ. ಪಾನಿ ಪುರಿ ಬಂಡಿ ಇದ್ದ್ರೆ ಅಲ್ಲಿ ಹುಡುಗಿಯರ ಗುಂಪೇ ಇರುತ್ತದೆ. ಆ ಹುಡ್ಗಿಯರನ್ನು ನೋಡೊಕೆ ಅಂತ ಅಲ್ಲಿ ಹುಡುಗರು ಸುತ್ತಾಡುತ್ತಾರೆ, ಆ ವಿಷಯ ಬೇರೆ. ಹುಡ್ಗಿಯರು ಪಾನಿಪುರಿ ತಿನ್ನೊದು ನೋಡಿ ಕೆಲವು ಹುಡುಗರು ಪಾನಿ ಪುರಿ ತಿಂತಾರೆ, ಉದ್ದೆಶ ಹುಡುಗಿಯರನ್ನು ನೋಡೋದು, ನೆಪಕ್ಕೆ ಪಾನಿ ಪುರಿ ತಿನ್ನೊದು. ಎಲ್ಲರು ಹಾಗಲ್ಲ , ಆದರೆ ಕೆಲವು ಕಡೆ ನಾನು ಕಂಡ ದೃಶ್ಯಗಳನ್ನು ಹೇಳುತ್ತಿದ್ದೆನೆ ಅಷ್ಟೆ.

webdunia
PR
ಹುಡುಗಿಯರು ಜಾಸ್ತಿ ಪಾನಿಪುರಿ ಇಷ್ಟ ಪಡೊದಕ್ಕೆ ಕೆಲವು ಕಾರಣಗಳಿವೆ.

1) ಹುಡುಗಿಯರಿಗೆ ಹುಳಿ ಅಂದ್ರೆ ಇಷ್ಟ : ಹೌದು ಸಾಮಾನ್ಯವಾಗಿ ಹುಡುಗಿಯರು ಹುಳಿ ಇಷ್ಟ ಪಡುತ್ತಾರೆ. ಆ ಕಾರಣಕ್ಕೆ ಪಾನಿಪುರಿ ತಿನ್ನೊದು ಜಾಸ್ತಿ.

2) ಮನೆ ಹತ್ತಿರ ಸಿಗುವುದು ಇದೊಂದೆ: ಸಾಮನ್ಯವಾಗಿ ಹುಡುಗರು ಊರೆಲ್ಲ ಸುತ್ತಾಡುತ್ತಾರೆ, ಮತ್ತು ಏನೆಲ್ಲ ತಿನ್ನುತ್ತಾ ಒಡಾಡುತ್ತಿರುತ್ತಾರೆ. ಆದ್ರೆ ಪಾಪ ಹುಡುಗಿಯರಿಗೆ ಎಲ್ಲೂ ಒಡಾಡೊಕೆ ಆಗೊಲ್ಲ, ಸೊ ಅದಕ್ಕೆ ಮನೆ ಹತ್ತಿರ ಇರುವ ಪಾನಿ ಪುರಿ ಬಂಡಿಗೆ ಹೊಗಿ ಪಾನಿ ಪುರಿ ತಿಂತಾರೆ.

3) ಕಡಿಮೆ ಕರ್ಚಿನಲ್ಲಿ ಹೆಚ್ಚು ಮಜಾ : ಪಾನಿ ಪುರಿ ಕಡಿಮೆ ಹಣದಲ್ಲಿ ಸಿಗುತದೆ. ಹುಡುಗಿಯರ ಹತ್ತಿರ ಹಣ ಕಡಿಮೆ ಇರೊದರಿಂದ ಅವರು ಪಾನಿ ಪುರಿ ಜಾಸ್ತಿ ತಿನ್ನುತ್ತಾರೆ. ಒಂದು ವೇಳೆ ಹಣ ಜಾಸ್ತಿ ಇದ್ದರೂ ಕೂಡ ಹುಡುಗರ ತರಹ ಜಾಸ್ತಿ ಖರ್ಚು ಮಾಡೊಕೆ ಇಷ್ಟಪಡೊದಿಲ್ಲ.

4) ಪಾನಿ ಪುರಿ ಬಂಡಿಯವನು ಹುಡುಗಿಯರ ಅಣ್ಣ ಆಗಿರುತ್ತಾನೆ : ಸಾಮನ್ಯವಾಗಿ ಪಾನಿ ಪುರಿ ಮಾರುವವನು ರಾಜಸ್ಥಾನದ ಮೂಲದವನೋ ಅಥವ ಉತ್ತರ ಭಾರತದ ಕಡೆಯವನೋ ಆಗಿರುತ್ತಾನೆ. ಅವ್ರೆಲ್ಲ ಹಿಂದಿ ಮಾತಡುತ್ತರೆ ಈ ಹುಡುಗಿಯರು ಅವನ ಹತ್ತಿರ ಹೋಗಿ :" ಭಯ್ಯಾ ಪಾನಿ ಪುರಿ ದೆ " ಅಂತಾರೆ. ಎಲ್ಲ ಹುಡುಗಿಯರು ಇವನಿಗೆ ಭಯ್ಯಾ ಅಂತ ಕರಿಯೊದು. ( ಈ ರೀತಿ ಗುಲಬರ್ಗಾದಲ್ಲಿ ಜಾಸ್ತಿ ).

5) ಹುಡುಗಿಯರಿಗೆ ಬೇರೆ ಚಟ ಇರೊದಿಲ್ಲ : ಹುಡುಗರ ತರಹ ಗುಟಕಾ, ಪಾನ, ಹೊರಗಡೆಯ ಇತರ ತಿಂಡಿ ತಿನ್ನುವುದು ಹುಡುಗಿಯರು ಮಾಡುವುದಿಲ್ಲ

Share this Story:

Follow Webdunia kannada