Select Your Language

Notifications

webdunia
webdunia
webdunia
webdunia

ವಿಶ್ವದಲ್ಲಿ ಅತಿ ದಪ್ಪ ಮನುಷ್ಯ ಯಾರು ಗೊತ್ತಾ ?

ವಿಶ್ವದಲ್ಲಿ ಅತಿ ದಪ್ಪ ಮನುಷ್ಯ ಯಾರು ಗೊತ್ತಾ ?
, ಶುಕ್ರವಾರ, 24 ಜನವರಿ 2014 (08:55 IST)
PR
ನವದೆಹಲಿ : ವಿಶ್ವದಲ್ಲಿ ಅತಿ ದಪ್ಪ ಇರುವ ವ್ಯಕ್ತಿ ಯಾರು ಗೋತ್ತಾ ? ಇಲ್ಲೋಬ್ಬ ವಿಶ್ವದ ಅತಿ ದೊಡ್ಡ ಮತ್ತು ದಪ್ಪ ಮನುಷ್ಯ ಇದ್ದಾನೆ. ದಪ್ಪ ಇರುವ ಮನುಷ್ಯರಿಗೆ ಮದುವೆ ಆಗುವ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತದೆ. ಏಕೆಂದರೆ ದಪ್ಪ ಇರುವ ಮನುಷ್ಯನಿಗೆ ದಪ್ಪ ಇರುವ ಹುಡುಗಿ ಹುಡುಕಿ ತರಬೇಕಾಗುತ್ತದೆ. ಆದರೆ ಈ ಲೇಖನ ಓದಿದ ಬಳಿಕ ನೀವು ನೋಡುವ ದೃಷ್ಠಿಕೋನ ಬದಲಾಗಬಹುದು.

53 ವರ್ಷದ ಪಾಲ್‌ ಮಯಸನ್‌ ಎನ್ನುಯ ವ್ಯಕ್ತಿ ಯೊಬ್ಬ ಇಲ್ಲಿದ್ದಾನೆ ಈ ವ್ಯಕ್ತಿ ಸುಮಾರು 444 ಕಿಲೋ ಭಾರದ ವ್ಯಕ್ತಿ ಇದ್ದಾನೆ . ವಿಶ್ವದ ಅತಿ ದಪ್ಪ ಮನುಷ್ಯನೆಂದು ಪ್ರಸಿದ್ದಿ ಪಡೆದಿದ್ದಾನೆ. ಸತತ ಪರಿಶ್ರಮದ ಮೂಲಕ ಈ ವ್ಯಕ್ತಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾನೆ. 444 ಕಿಲೋ ನಿಂದ ಕೇವಲ 139 ಕಿಲೋ ತೂಕದವನಾಗಿದ್ದಾನೆ .

ಈ ಪಾಲ್‌ಎನ್ನುವ ವ್ಯಕ್ತಿ ರೆಬೆಕಾ ಎನ್ನುವ ಮಹಿಳೆಯನ್ನು ತನ್ನ ಜೀವನ ಸಂಗಾತಿಯಾಗಿಸಿಕೊಂಡಿದ್ದಾನೆ. ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಹಿಳೆ. ತನ್ನ ಪತಿಯ ಬಗ್ಗೆ ಹೆಚ್ಚಿನ ಕಾಳಜಿ ವ್ಯಕ್ತಪಡಿಸಿದ್ದಾಳೆ ಕಳೆದ ವರ್ಷ ಅಗಸ್ಟ್‌ನಲ್ಲಿ ಇವರಿಬ್ಬರು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದಾರೆ , ನಂತರ ಇವರಿಬ್ಬರು ಮದುವೆಯಾಗಲು ತಿರ್ಮಾನಿಸಿ ಗಂಡ ಹೆಂಡತಿಯಾಗಿದ್ದಾರೆ.

ಆದರೆ ಈಗಲೂ ಕೂಡ ಪಾಲ್‌ ತನ್ನ ಭಾರದ ಬಗ್ಗೆ ಸಂತುಷ್ಟವಾಗಿಲ್ಲವಂತೆ. ನಾನು ಇನ್ನು ಕಡಿಮೆ ತೂಕದ ವ್ಯಕ್ತಿಯಾಗಲು ಬಯಸುತ್ತೆನೆ ಎಂದು ಹೇಳಿಕೆ ನೀಡಿದ್ದಾನೆ. ಮುಂದಿನ ದಿನಗಳಲ್ಲಿ ನಾನು ವ್ಹಿಲ್‌ ಚೇರ್‌ನಲ್ಲಿ ಕೂಡಲು ಇಷ್ಟಪಡುವುದಿಲ್ಲ ಎಂದು ಪಾಲ್‌ ತಿಳಿಸಿದ್ದಾನೆ.

Share this Story:

Follow Webdunia kannada