Webdunia - Bharat's app for daily news and videos

Install App

ಮುಖೇಶ್-ನೀತಾ ಅಂಬಾನಿಯ ಕಾರ್ಪೋರೇಟ್ ಸೇವಾ ಮನೋಭಾವ

Webdunia
ಸೋಮವಾರ, 27 ಆಗಸ್ಟ್ 2012 (18:51 IST)
ಹೌದು...ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್ಐಎಲ್)‌ನ ಮುಖ್ಯಸ್ಥರು ಹಾಗೂ ಸಿಇಓ ಆಗಿರುವ ಮುಖೇಶ್ ಅಂಬಾನಿ ನಿಜಕ್ಕೂ ಪ್ರಮುಖ ಯಶಸ್ವಿ ಉದ್ಯಮಿ. ರಿಲಯನ್ಸ್ ಕಂಪನಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದಕ್ಕೆ ಅದರ ವ್ಯವಹಾರವೇ ಸಾಕ್ಷಿಯಾಗಿದೆ.

ಅಷ್ಟೇ ಅಲ್ಲ ರಿಲಯನ್ಸ್ ದಿಗ್ಗಜ ತನ್ನ ವ್ಯವಹಾರದಲ್ಲಿ ತೋರುತ್ತಿರುವಷ್ಟೇ ಆಸಕ್ತಿಯನ್ನು ಸೇವಾ ಮನೋಭಾವದಲ್ಲೂ ಹಿಂದೆ ಬಿದ್ದಿಲ್ಲ. ಅದಕ್ಕಾಗಿಯೇ ಅಂಬಾನಿ ವಿಶೇಷ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ರಿಲಯನ್ಸ್ ಫೌಂಡೇಶನ್ ಅನ್ನು ಆರಂಭಿಸಿದ್ದಾರೆ.

ಉದ್ಯಮಿ ಮುಖೇಶ್ ಅಂಬಾನಿ ದೇಶದಲ್ಲಿ ಕಾರ್ಪೋರೇಟ್ ಸೇವೆಯನ್ನು ಬೆಳೆಸುವ ಮೂಲಕ ಶ್ರೇಷ್ಠರ ಸಾಲಿನಲ್ಲಿ ನಿಂತಿದ್ದಾರೆ. ಅಲ್ಲದೇ ಪತ್ನಿ ನೀತಾ ಅಂಬಾನಿ ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಚಾರಿಟೇಬಲ್ ಕಾರ್ಯಕ್ರಮವನ್ನು (ರಿಲಯನ್ಸ್ ಫೌಂಡೇಶನ್) ಮತ್ತಷ್ಟು ವಿಸ್ತರಿಸುವಲ್ಲಿ ಮುಂದಾಗಲಿದ್ದಾರೆ. ಅವೆಲ್ಲಕ್ಕಿಂತ ಹೆಚ್ಚಾಗಿ ರಿಲಯನ್ಸ್ ಫೌಂಡೇಶನ್ ಮೂಲಕ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಬದ್ಧತೆಯನ್ನು ಪರಿಗಣಿಸಿ ನೀತಾ ಅಂಬಾನಿಯನ್ನು ಎಐಎಂಎ(ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್) ಕಾರ್ಪೋರೇಟ್ ಸಿಟಿಜನ್ ಆಫ್ ದ ಇಯರ್ ಎಂದು ಆಯ್ಕೆ ಮಾಡಿದೆ.

ಇದೇ ಸಮಯದಲ್ಲಿ ಗ್ರಾಹಕರ ಹಿತರಕ್ಷಣೆ ಮತ್ತು ಭೌತಿಕತೆ ಎಲ್ಲದರಲ್ಲೂ ಪ್ರಧಾನವಾಗಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಗೊಂದಲ ಮತ್ತು ಕೊಡುಗೆಯ ನೀತಿಯಿಂದ ದೂರ ಉಳಿದು ಸೇವಾ ಕಾರ್ಯದಲ್ಲಿ ಹೊಸ ವ್ಯಾಪ್ತಿಯನ್ನು ಕಂಡುಕೊಂಡಿದ್ದಾರೆ.

ರಿಲಯನ್ಸ್ ಫೌಂಡೇಶನ್ ಹಲವರ ಜೀವನದಲ್ಲಿ ಬದಲಾವಣೆ ತರುವ ಮೂಲಕ ಯಶಸ್ವಿಯಾಗಿದೆ. ಇದು ಮುಖ್ಯವಾಗಿ ಐದು ಅಂಶಗಳ ಮೇಲೆ ನಿಂತಿದೆ. ಅದು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಹಳ್ಳಿಗಳ ಜೀರ್ಣೋದ್ಧಾರ ಮತ್ತು ಕಲೆ ಮತ್ತು ಸಂಸ್ಕೃತಿ. ಬಿಐಜೆ(ಭಾರತ್ ಇಂಡಿಯಾ ಜೋಡೋ) ಸೇರಿದಂತೆ ಎಲ್ಲವೂ ಒಳಗೊಂಡಿದೆ.

ರಿಲಯನ್ಸ್ ದೃಷ್ಠಿ ಅಸೋಸಿಯೇಷನ್, ನ್ಯಾಷನಲ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಜತೆ ಸೇರಿ ಅಂಧರಿಗಾಗಿ ಮೊದಲ ಹಿಂದಿ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಎಚ್ಐವಿ ಡೋಟ್ಸ್ ಕಾರ್ಯಕ್ರಮದಡಿಯಲ್ಲಿ ಅಲಹಾಬಾದ್, ಪಟಾಲ್ ಗಂಗಾ, ಆಂಧ್ರಪ್ರದೇಶ ಮತ್ತು ಹಾಜಿರಾ ಸೇರಿದಂತೆ ಹಲವೆಡೆ ಉಚಿತ ಔಷಧ ಮತ್ತು ಎಚ್ಐವಿ ಸೋಂಕಿನಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ.

ನೀತಾ ಅಂಬಾನಿಯವರು ಧೀರೂಭಾಯ್ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್(ಡಿಎಐಎಸ್)ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಶಿಕ್ಷಣ ಎಂಬುದು ಎಲ್ಲಕ್ಕಿಂತ ಹೆಚ್ಚಾಗಿ ಹೃದಯಕ್ಕೆ ಹತ್ತಿರವಾಗುವ ವಿಷಯ ಎಂಬುದನ್ನು ಮನಗಂಡಿದ್ದಾರೆ. ಪ್ರತಿಯೊಂದು ಮಗುವು ಓದಲು ಮತ್ತು ಬರೆಯಲು ಶಕ್ತರಾಗಬೇಕೆಂಬುದು ನೀತಾ ಅವರ ಅಭಿಲಾಷೆ.

ಮುಖೇಶ್ ಅಂಬಾನಿ ಉತ್ಸಾಹದಿಂದ ಕೈಗೊಂಡಿರುವುದೇ ಕಾರ್ಪೋರೇಟ್ ಸೇವೆಯನ್ನ. ಇದು ರಿಲಯನ್ಸ್ ಇಂಡಸ್ಟ್ರೀಸ್‌ನ ಆಂತರಿಕ ಭಾಗವಾಗಿದೆ. ಇದರ ಕಾರ್ಯ ಹಾಗೂ ಚಾರಿಟೇಬಲ್ ಸೇವಾ ಕಾರ್ಯ ಭಾರತದ ಪ್ರಮುಖ ವಿಷಯವಾಗಿದೆ. ಅದೇ ರೀತಿ ಅವರ ಶೇರು ಮಾರುಕಟ್ಟೆದಾರರು 38ನೇ ವಾರ್ಷಿಕ ಜನರಲ್ ಸಭೆಯನ್ನು ಈ ವರ್ಷ ನಡೆಸಲಿದ್ದಾರೆ.

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮರುವಿಶ್ಲೇಷಣೆ ಎನ್ನುವಂತೆ ಕಾರ್ಪೋರೇಟ್ ಸೇವೆ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಭಾಗ ಎಂಬಂತೆ ಸ್ವೀಕರಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್‌ನ ಸಾಮಾಜಿಕ ಜವಾಬ್ದಾರಿಯ ಕೆಲಸ ಯಶಸ್ವಿಯಾಗಿದ್ದು, ದೇಶದ ಹಲವು ಪ್ರಮುಖ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟು ಸೇವಾ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments