Select Your Language

Notifications

webdunia
webdunia
webdunia
webdunia

ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುತ್ತಿದ್ದಾರೆಯೇ? ವಂಚನೆ ಪತ್ತೆಗಾಗಿ ಹತ್ತು ಸೂತ್ರಗಳು

ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುತ್ತಿದ್ದಾರೆಯೇ? ವಂಚನೆ ಪತ್ತೆಗಾಗಿ ಹತ್ತು ಸೂತ್ರಗಳು
IFM
ಲೇಖನ: ರಾಜೇಶ್ ಪಾಟೀಲ್

ನಿಮ್ಮ ಸಂಬಂಧ ಮೊದಲಿನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವ ಭಯ ಕಾಡುತ್ತಿದೆಯೇ? ನಿಮ್ಮ ಸಂಗಾತಿ(ಅವನು/ಅವಳು) ಮಧ್ಯ ರಾತ್ರಿಯವರೆಗೆ ಕಚೇರಿಯಲ್ಲಿ ಕಳೆಯುತ್ತಿದ್ದಾನೆಯೇ ಅಥವಾ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯದಿರುವುದಕ್ಕೆ ಕ್ಷಮೆಯಾಚಿಸುತ್ತಿದ್ದಾರೆಯೇ? ಕೋಪೋದ್ರಿಕ್ತರಾಗಿ ದೂರವಾಗುತ್ತಿದ್ದಾರೆಯೆ? ಲೈಂಗಿಕ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?

ಈ ಕೆಳಗಿನ ಅಂಶಗಳಲ್ಲಿ ಯಾವುದಾದರೂ ಒಂದು ಸರಿಯೆಂದು ಆದಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುತ್ತಿರುವ ಸಾಧ್ಯತೆಗಳಿವೆ.

ನಿಮ್ಮ ಸಂಗಾತಿಯನ್ನು ನಂಬದಿರುವುದಕ್ಕೆ ಹತ್ತು ಅಂಶಗಳು....

ಮದುವೆಯಾದ ದಂಪತಿಗಳು ಅಥವಾ ಪ್ರೇಮಿಗಳು ಮದುವೆಯಾಗಲು ಹೊರಟ ಸಂದರ್ಭದಲ್ಲಿ ಸಂಗಾತಿ ವಂಚಿಸುವುದರಿಂದ ಜೀವನದಲ್ಲಿ ಮರೆಯಲಾಗದ ನೋವು ಕಾಡುತ್ತದೆ. ನಿಮ್ಮ ಸಂಗಾತಿಯ ವಂಚನೆಯನ್ನು ಕಂಡುಹಿಡಿಯುವ ಹತ್ತು ಎಚ್ಚರಿಕೆಯ ಮಾಹಿತಿ ಇಲ್ಲಿದೆ .

1 ನಿಮ್ಮನ್ನು ಸಂಗಾತಿಯು ತಂದೆ- ತಾಯಿ/ಗೆಳೆಯರಿಗೆ ಪರಿಚಯಿಸಲು ಹಿಂದೇಟು ಹಾಕುತ್ತಿದ್ದಾನೆಯೇ. ಹಾಗಾದಲ್ಲಿ ದೂರದ ಸಂಬಂಧವನ್ನು ನಿಮ್ಮ ಸಂಗಾತಿ ಬಯಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಿಮ್ಮ ಸಂಬಂಧ ಹೊಸತಾಗಿದ್ದಲ್ಲಿ ನೀವು ಸೂಕ್ತ ಎಂದು ನಿರ್ಧರಿಸುವ ಮೊದಲು ಹೆಚ್ಚಿನ ಸಮಯವನ್ನು ನಿಮ್ಮೊಂದಿಗೆ ಕಳೆಯುತ್ತಿದ್ದಾರೆಯೇ ಅಥವಾ ನಿಮ್ಮ ಮುಂದಾಲೋಚನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಯೇ ಹಾಗಾದಲ್ಲಿ ಮುಂದಿನ ದಿನಗಳಲ್ಲಿ ವಂಚಿಸುವ ಸಾಧ್ಯತೆಗಳು ಹೆಚ್ಚು.

2 ನಿಮ್ಮ ಸಂಗಾತಿಯ ದೈಹಿಕ ಚಲನವಲನದ ಮೇಲೆ ನಿಮಗೆ ಪರೀಕ್ಷಿಸುವ ಅವಕಾಶಗಳಿವೆ. ನಿಮ್ಮೊಂದಿಗೆ ಮಾತನಾಡುವಾಗ ನಿಮ್ಮ ಕಣ್ಣನ್ನು ನೋಡಲು ಹಿಂದೇಟು ಹಾಕುತ್ತಿದ್ದಾರೆಯೇ ಅಥವಾ ನಿಮ್ಮೊಂದಿಗೆ ಮಾತನಾಡಲು ಇಚ್ಚೆ ವ್ಯಕ್ತಪಡಿಸುತ್ತಿಲ್ಲವೇ . ಹಾಗಾದಲ್ಲಿ ಅವರು ನಿಮಗೆ ಹೇಳುತ್ತಿರುವ ಸಂಗತಿ ಸತ್ಯದಿಂದ ದೂರವಾಗಿದೆ ಎಂದು ತಿಳಿದುಕೊಳ್ಳಿ.

3 ಸಾರ್ವಜನಿಕರು ನೋಡುವ ಸಂದರ್ಭದಲ್ಲಿ ನಿಮ್ಮ ಕೈಯನ್ನು ಹಿಡಿಯಲು ಸಂಗಾತಿ ಹಿಂದೇಟು ಹಾಕುತ್ತಿದ್ದಾರೆಯೇ (ಹಿಂದೇಟು ಹಾಕಲು ಇನ್ನು ಕೆಲ ಕಾರಣಗಳಿರಬಹುದು) ಆದರೆ ಹೆಚ್ಚಿನ ಸಂದರ್ಭದಲ್ಲಿ ಬಹುದೂರದ ಸಂಬಂಧವನ್ನು ಬಯಸುವುದಿಲ್ಲ ಎನ್ನುವುದು ಖಚಿತ ಮಾಡಿಕೊಳ್ಳಿ. ನಿಮ್ಮ ಕಷ್ಟದ ಸಂದರ್ಭದಲ್ಲಿ ಜಗತ್ತಿನ ಎದುರು ನಿಮ್ಮ ಕೈಯನ್ನು ಹಿಡಿದು ಸಾಗುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ.

4 ನಿಮ್ಮ ನಿಮ್ಮಲ್ಲಿ ಪರಸ್ಪರ ವಾದ ವಾಗ್ವಾದ ನಡೆದ ನಂತರ ಅವನು ನಿಮ್ಮನ್ನು ಮರಳಿ ಕರೆಯದಿದ್ದಲ್ಲಿ ನಿಮ್ಮನ್ನು ತನ್ನ ಜೀವನದ ಮಹತ್ವದ ವ್ಯಕ್ತಿ ಎಂದು ಪರಿಗಣಿಸಿಲ್ಲ ಎನ್ನುವುದು ಸ್ಫಷ್ಟ. ನೇಹಾ ಭಾಟಿಯಾ ಹೇಳುತ್ತಾರೆ" ನಾನು ನನ್ನ ಗೆಳೆಯನೊಂದಿಗೆ ಅನೇಕ ಬಾರಿ ವಾಗ್ವಾದದಲ್ಲಿ ತೊಡಗಿದ್ದೇನೆ. ನಾನು ಏನು ಹೇಳುತ್ತಿದ್ದೇನೆ ಎನ್ನುವುದನ್ನು ಕೇಳಲು ಇಚ್ಚಿಸಿದ ಅವನ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿತ್ತು. ಕನಿಷ್ಟ ನನ್ನನ್ನು ಅವನು ಮರಳಿ ಕರೆಯಬಹುದು ಎನ್ನುವ ನಿರೀಕ್ಷೆಯಲ್ಲಿರುತ್ತಿದ್ದೆ. ಆದರೆ ನಾನು ಅವನನ್ನು ಕರೆಯುವ ಮೊದಲು ಅವನು ನನ್ನನ್ನು ಕರೆಯದಿರುವುದು ನಾನು ಅವನ ಜೀವನದಲ್ಲಿ ಮಹತ್ವವಲ್ಲ ಎನ್ನುವುದು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ."

5 ನಿಮ್ಮ ಹೇಳಿಕೆಗಳಿಗೆ ಅಲಕ್ಷ್ಯ ತೋರಿ ಚಿಕ್ಕ ಚಿಕ್ಕ ವಿಷಯಗಳಿಗೆ ವಾಗ್ವಾದದಲ್ಲಿ ತೊಡಗಿದ್ದಾರೆಯೇ ಅಥವಾ ನೀವು ಸಂಗಾತಿಗೆ ತೋರುತ್ತಿರುವ ಪ್ರೀತಿಯ ಹೊರತಾಗಿಯು ನಿಮಗಾಗಿ ಮಾಡಿದ ವಿಷಯಗಳನ್ನು ಎತ್ತಿ ತೋರಿಸುತ್ತಿದ್ದಾರೆಯೇ ಹಾಗಾದಲ್ಲಿ ಖಂಡಿತ ಈ ಸಂಬಂಧ ಬಹುದೂರದವರೆಗೆ ಸಾಗದು.

6 ನಿಮಗೆ ಹೊರಗಡೆ ಭೇಟಿ ಮಾಡುವ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಅರಿಯದೇ, ತಾನಿರುವ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸುತ್ತಿದ್ದಾರೆಯೇ ಅಥವಾ ತಮ್ಮ ಅಭಿಪ್ರಾಯಗಳನ್ನು ಒತ್ತಾಯಪೂರ್ವಕವಾಗಿ ನಿಮ್ಮ ಮೇಲೆ ಹೇರುತ್ತಿದ್ದಾರೆಯೇ ಅಥವಾ ಲೈಂಗಿಕತೆಯಲ್ಲಿ ಅವಸರದ ಆಕರ್ಷಣೆ ತೋರುತ್ತಿದ್ದಾರೆಯೇ ಹಾಗಾದಲ್ಲಿ ನೀವು ಇದು ಪ್ರೇಮವೊ ಅಥವಾ ಕಾಮವೋ ಎನ್ನುವ ಕುರಿತಂತೆ ಚಿಂತಿಸಲೇಬೇಕಾದ ಅಗತ್ಯವಿದೆ.

7 ನನಗೆ ತುಂಬಾ ಕೆಲಸವಿರುವುದರಿಂದ ಹುಟ್ಟಿದ ದಿನ ಅಥವಾ ಮದುವೆ ವಾರ್ಷಿಕೋತ್ಸವದ ದಿನದ ಬಗ್ಗೆ ನೆನಪಿನಲ್ಲಿಡಲು ಸಮಯವಿಲ್ಲ ಎಂದು ಹೇಳಿದ್ದೆ ಆದಲ್ಲಿ ನಿಮ್ಮ ಸಂಬಂಧದ ಬಗ್ಗೆ ಮಹತ್ವ ತೋರುತ್ತಿಲ್ಲ ಎನ್ನುವುದು ಖಚಿತ ಮಾಡಿಕೊಳ್ಳಿ. ಟೆಲಿಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಕಿತಾ ಶರ್ಮಾ ಹೇಳುತ್ತಾರೆ.." ನನಗೆ ಮದುವೆಯಾದಾಗ ನನ್ನ ಗಂಡ ಹುಟ್ಟಿದ ಹಬ್ಬವನ್ನು ನೆನಪಿಸಿ ವಿಶೇಷ ಉಡುಗೊರೆಗಳನ್ನು ತಂದು ವಿಶಿಷ್ಟವಾಗಿ ಆಚರಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಮದುವೆ ವಾರ್ಷಿಕೋತ್ಸವವೂ ಮರೆತುಹೋಯಿತು. ಕೆಲಸದ ಭರದಲ್ಲಿ ಮದುವೆ ದಿನ ಮರೆತುಹೋಗಿದ್ದಕ್ಕೆ ಕ್ಷಮೆಯನ್ನು ಕೂಡಾ ಕೇಳದಿರುವುದು ನನಗೆ ತುಂಬಾ ನೋವನ್ನು ತರುತ್ತದೆ ಎಂದು ಹೇಳಿದ್ದಾರೆ.

8 ನಿಮ್ಮ ಸಂಗಾತಿಯು ತಮ್ಮ ಮೊಬೈಲ್ ಫೋನ್‌ ,ಇ-ಮೇಲ್, ಪತ್ರಗಳ ಬಗ್ಗೆ ಹೆಚ್ಚಿನ ಜಾಗೂರುಕರಾಗಿದ್ದಲ್ಲಿ ನಿಮ್ಮಿಂದ ಕೆಲ ವಿಷಯಗಳು ಮರೆಮಾಚುವ ಸಾಧ್ಯತೆಗಳಿವೆ ಎಂದು ತಿಳಿದುಕೊಳ್ಳಿ. ರಾಧಿಕಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾಳೆ" ನನ್ನ ಸಂಗಾತಿ(ಗಂಡ) ನನಗೆ ಮೊಬೈಲ್ ಮುಟ್ಟಲು ಅಥವಾ ಸಂದೇಶಗಳನ್ನು ಓದಲು ಬಿಡುತ್ತಿರಲಿಲ್ಲ. ಒಂದು ವೇಳೆ ನಾನು ಹಾಗೇ ಮಾಡಿದಲ್ಲಿ ತುಂಬಾ ಕೋಪಗೊಳ್ಳುತ್ತಿದ್ದ. ಆತನ ಲ್ಯಾಪ್‌ಟಾಪ್ ಕೂಡಾ ಉಪಯೋಗಿಸಲು ಬಿಡುತ್ತಿರಲಿಲ್ಲ. ಆದ್ದರಿಂದ ನನಗೆ ತುಂಬಾ ಸಂಶಯ ಉಂಟಾಗುತ್ತಿತ್ತು. ಇದರಿಂದಾಗಿ ನನಗೆ ಜೀವನದಲ್ಲಿ ಅಭದ್ರತೆ ಮತ್ತು ಅಸಹಾಯಕತೆ ತೋರುತ್ತಿತ್ತು.

9 ನಿಮ್ಮ ಸಂಗಾತಿ ನಿಮ್ಮನ್ನು ಭೇಟಿಯಾಗದಿರಲು ಯಾವುದಾದರೂ ಕಾರಣ ಹುಡುಕುವುದು ಅಥವಾ ಭೇಟಿಯಾಗದಿರುವುದಕ್ಕೆ ಸ್ಪಷ್ಟ ಕಾರಣಗಳನ್ನು ನೀಡದಿರುವುದು ಮತ್ತು ನಿಮಗೆ ಕರೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುವುದು, ಕೆಲವು ಬಾರಿಯಾದರೇ ಓ.ಕೆ. ಆದರೆ ನಿರಂತರ ಮರುಕಳಿಸಿದಲ್ಲಿ ನಿಮ್ಮನ್ನು ಬೇಕೆಂದು ದೂರವಿರಿಸುತ್ತಿದ್ದಾನೆ ಎಂದು ತಿಳಿದುಕೊಳ್ಳಿ.

10 ನಿಮ್ಮನ್ನು ತನ್ನ ಗೆಳೆಯನ ಗರ್ಲ್‌ಫ್ರೆಂಡ್‌ಗೆ ಹೋಲಿಸುವುದಾಗಲಿ ಅಥವಾ ತುಂಬಾ ಸಮಯವಿದ್ದಾಗಲು ನಿಮ್ಮೊಂದಿಗೆ ಮಾತನಾಡಲು ಇಷ್ಟಪಡದೆ ಗೆಳತಿಯರೊಂದಿಗೆ ಸಮಯ ಕಳೆಯುತ್ತಿದ್ದಲ್ಲಿ ಅವನು ಬೇರೆ ಹುಡುಗಿಯೊಂದಿಗೆ ಆಕರ್ಷಿತನಾಗುವ ಸಾಧ್ಯತೆಗಳಿರುವುದರಿಂದ ನಿಮ್ಮನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವಲ್ಲಿ ವಂಚಿಸುವ ಸಾಧ್ಯತೆಗಳು ಹೆಚ್ಚು .

ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುವುದು ನೋವಿನ ಸಂಗತಿ. ಆದರೆ ಮೂರ್ಖರಾಗಿ ಜೀವನ ಪರ್ಯಂತ ನೋವು ಅನುಭವಿಸುವುದಕ್ಕಿಂತ ಮೊದಲು ನಿಮ್ಮ ಸಂಗಾತಿಯನ್ನು ಪರೀಕ್ಷಿಸುವುದು ಒಳಿತು. ಕೆಲವರು ಹೇಳಿದಂತೆ ಒಂದು ವೇಳೆ ನೀವು ಯಾರನ್ನಾದರೂ ಪ್ರೀತಿಸಿದಲ್ಲಿ ಅವನನ್ನು ಮುಕ್ತವಾಗಿರಲು ಬಿಡಿ. ಮರಳಿ ಬಂದನಾದರೆ ಅವನು ಸದಾ ನಿಮ್ಮವನು..ಇಲ್ಲವಾದಲ್ಲಿ ಸದಾ ಪರರವನು..ಏನಂತೀರಾ.....ಮತ್ತೇನು ಒಮ್ಮೆ ಪರಿಕ್ಷಿಸಿ ನೋಡಿ?

Share this Story:

Follow Webdunia kannada