Select Your Language

Notifications

webdunia
webdunia
webdunia
webdunia

ಡಿ.21 ರ ಪ್ರಳಯ 2025ಕ್ಕೆ ಪೋಸ್ಟ್‌ಪೋನ್

ಡಿ.21 ರ ಪ್ರಳಯ 2025ಕ್ಕೆ ಪೋಸ್ಟ್‌ಪೋನ್
ಕಾರವಾರ , ಬುಧವಾರ, 19 ಡಿಸೆಂಬರ್ 2012 (15:18 IST)
ಡಿ.21 ರಂದು ಜಗತ್ತು ಪ್ರಳಯವಾಗುವುದಿಲ್ಲ. ಅದು ಸುಳ್ಳು ಸುದ್ದಿಯಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ 2025ನೆ ಇಸ್ವಿಯಲ್ಲಿ ಪ್ರಳಯವಾಗುತ್ತದೆ ಎಂದು ಸದಾಶಿವಗಡದ ಜೊಸ್ ಜೆ ರುಝಾರಿಯೋ ಭವಿಷ್ಯ ನುಡಿದಿದ್ದಾರೆ.

ಜಗತ್ತು 2025 ರಂದು ಪ್ರಳಯವಾಗುವುದು ಖಂಡಿತ. ಆದರೆ, ದೇವರಲ್ಲಿ ಅಪಾರ ವಿಶ್ವಾಸವಿಟ್ಟು ಸತ್ಯ ಮಾರ್ಗದಲ್ಲಿ ನಡೆದರೆ ಈ ಪ್ರಳಯವನ್ನು ತಪ್ಪಿಸಲು ಸಾಧ್ಯವಿದೆ. ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಅನಾಚಾರ, ಭ್ರಷ್ಟಾಚಾರಗಳು ತಾಂಡವಾಡುತ್ತಿವೆ. ಆದ್ದರಿಂದ 2025ರಂದು ಜಗತ್ತು ಪ್ರಳಯವಾಗುವ ಎಲ್ಲ ಮುನ್ಸೂಚನೆ ದೊರೆತಿದ್ದು, ದೇವರ ಮೊರೆ ಹೋಗುವವರಿಗೆ ಪ್ರಳಯದ ಬಾಧೆ ತಟ್ಟುವುದಿಲ್ಲ ಎಂದಿದ್ದಾರೆ.

ದೇವರ ಮೊರೆ ಹೋಗಿ ಸತ್ಯ ಮಾರ್ಗದಲ್ಲಿ ನಡೆಯುವುದರಿಂದ ಪ್ರಳಯವನ್ನು ತಪ್ಪಿಸಬಹುದು. ಈ ಕುರಿತಾಗಿ ತಾವು ಆಂಗ್ಲ ಭಾಷೆಯಲ್ಲಿ ಒಂದು ಪುಸ್ತಕವನ್ನು ಬರೆದಿದ್ದು ಸದ್ಯದಲ್ಲಿಯೇ ಸಾರ್ವಜನಿಕರಿಗೆ ಅರ್ಪಣೆ ಮಾಡಲಿದ್ದೇನೆ. ಜಗತ್ತಿನ ಅಳಿವು-ಉಳಿವು ದೇವರ ಕೈಯಲ್ಲಿದೆ. ಶ್ರದ್ಧಾ ಭಾವನೆಯಿಂದ ದೇವರಿಗೆ ಶರಣರಾದರೆ ಜಗತ್ತಿನಲ್ಲಾಗುತ್ತಿರುವ ಅನ್ಯಾಯ, ಅತ್ಯಾಚಾರವನ್ನು ತಡೆಯುವ ಮೂಲಕ ಜಗತ್ತನ್ನು ಪ್ರಳಯದಿಂದ ಮುಕ್ತವಾಗಿಸಬಹುದು ಎಂದು ತಿಳಿಸಿದ್ದಾರೆ.

Share this Story:

Follow Webdunia kannada