Select Your Language

Notifications

webdunia
webdunia
webdunia
webdunia

ಉದ್ಯಮಪತಿಗಳು, ಪಕ್ಷಗಳ ಅಪವಿತ್ರ ಮೈತ್ರಿ: ಶ್ರೀಸಾಮಾನ್ಯನ ಬದುಕು ದುರ್ಭರ

ಉದ್ಯಮಪತಿಗಳು, ಪಕ್ಷಗಳ ಅಪವಿತ್ರ ಮೈತ್ರಿ: ಶ್ರೀಸಾಮಾನ್ಯನ ಬದುಕು ದುರ್ಭರ
, ಶನಿವಾರ, 15 ಫೆಬ್ರವರಿ 2014 (19:26 IST)
PR
PR
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಉದ್ದೇಶದೊಂದಿಗೆ ಅಧಿಕಾರದ ಗದ್ದುಗೆಗೆ ಏರಿದ ದೆಹಲಿಯ ಆಮ್ ಆದ್ಮಿ ಸರ್ಕಾರ ರಾಜೀನಾಮೆ ನೀಡಿತು. ಆಮ್ ಆದ್ಮಿ ಸರ್ಕಾರದ ರಾಜೀನಾಮೆಯಿಂದ ಸಹಜವಾಗಿ ಬಿಜೆಪಿಗೆ ಸಂತಸ ಉಂಟುಮಾಡಿದೆ. ಬಿಜೆಪಿಯ ಮುಖಂಡ ಅರುಣ್ ಜೇಟ್ಲಿ ತಮ್ಮ ವೆಬ್‌ಸೈಟ್ ಲೇಖನವೊಂದರಲ್ಲಿ ಅಂತಿಮವಾಗಿ ದುಃಸ್ವಪ್ನ ಕೊನೆಗೊಂಡಿತು ಎಂದು ಪ್ರತಿಕ್ರಿಯಿಸುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಎಎಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದೂ ಕೂಡ ದುರುದ್ದೇಶದಿಂದಲೇ ಕೂಡಿತ್ತು.

ದೆಹಲಿಯಲ್ಲಿ ಪ್ರಬಲವಾಗಿ ಬೆಳೆದ ಎಎಪಿ ಪಕ್ಷವನ್ನು ಬುಡಸಮೇತ ಕೀಳುವುದಕ್ಕೆ ಕಾಂಗ್ರೆಸ್ ಸಂಕಲ್ಪಿಸಿತ್ತು. ಇದು ಒಂದು ರೀತಿಯಲ್ಲಿ ಮಗುವನ್ನು ಎತ್ತಿಕೊಂಡು ಚಿವುಟಿದ ಹಾಗಿತ್ತು. ಬೆಂಬಲವನ್ನು ಘೋಷಿಸಿದ ನಂತರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುತ್ತಾ ಬಂತು.ಭ್ರಷ್ಟಾಚಾರವನ್ನು ಮುಖ್ಯವಿಷಯವಾಗಿ ತೆಗೆದುಕೊಂಡು ಆಮ್ಆದ್ಮಿ ಚುನಾವಣೆ ಪ್ರಚಾರಕ್ಕೆ ಇಳಿಯುವುದು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಸಹ್ಯವಾಗಿಲ್ಲ.

webdunia
PR
PR
ಏಕೆಂದರೆ ಎರಡು ಪಕ್ಷಗಳೂ ಭ್ರಷ್ಟಾಚಾರದಲ್ಲಿ ಮುಳುಗಿ ಎದ್ದಿರುವ ಪಕ್ಷಗಳೇ.ರಾಜಕೀಯ ಪಕ್ಷಗಳು ಮುಖೇಶ್ ಅಂಬಾನಿ, ಮುಂತಾದ ಉದ್ಯಮ ಸಾಮ್ರಾಜ್ಯಧಿಪತಿಗಳಿಗೆ ಮಣೆ ಹಾಕುತ್ತಿರುವುದರ ಹಿಂದೆ ಪ್ರಬಲವಾದ ಕಾರಣವೂ ಇದೆ. ಕಳೆದ 10 ವರ್ಷಗಳಿಂದ ಅಂಬಾನಿ ದೇಶವನ್ನು ನಡೆಸುತ್ತಿದ್ದಾರೆ ಎಂದು ಕೇಜ್ರಿವಾಲ್ ಇದೇ ಕಾರಣಕ್ಕಾಗಿ ಉದ್ಗರಿಸಿದರು. ಪಕ್ಷಗಳು ಬಲಿಷ್ಠ, ಆರ್ಥಿಕ ಸದೃಢ ಪಕ್ಷಗಳಾಗಿ ಬೆಳೆಯಲು ಉದ್ಯಮಪತಿಗಳ ಕಾಣಿಕೆ ಇಲ್ಲದಿಲ್ಲ. ಹೀಗಾಗಿ ಅವುಗಳ ಋಣ ತೀರಿಸುತ್ತಿವೆ. ಆದರೆ ಆ ಋಣಸಂದಾಯದಿಂದ ಜನಸಾಮಾನ್ಯರ ಬದುಕು ದುರ್ಭರವಾದರೆ ಅದಕ್ಕೆ ಯಾರೇನೂ ಮಾಡಲು ಆಗುತ್ತದೆ ಎಂಬ ಧೋರಣೆ ಈ ಪಕ್ಷಗಳದ್ದಾಗಿದೆ.

ಇದರಿಂದಾಗಿಯೇ ಅಂಬಾನಿ ಹಿಡಿತದಲ್ಲಿರುವ ಅನಿಲ ಮುಂತಾದ ಅಗತ್ಯ ವಸ್ತುಗಳ ದರ ಏರುತ್ತಲೇ ಇವೆ. ಅಂಬಾನಿ ಶ್ರೀಮಂತಿಕೆಯ ಸೂಚ್ಯಂಕ ಗಾಳಿಪಟದಂತೆ ಮೇಲೇರುತ್ತಲೇ ಇದೆ. ಉದ್ಯಮಪತಿಗಳು, ರಾಜಕಾರಣಿಗಳು ಕೈಜೋಡಿಸಿದಾಗ ಜನಸಾಮಾನ್ಯರ ಬದುಕು ಹೇಗೆ ದಿಕ್ಕುತಪ್ಪುತ್ತದೆ ಎನ್ನುವುದಕ್ಕೆ ನಮ್ಮ ರಾಷ್ಟ್ರ ನಿದರ್ಶನವಾಗಿದೆ.

Share this Story:

Follow Webdunia kannada