Select Your Language

Notifications

webdunia
webdunia
webdunia
webdunia

ಎಂಎಸ್ ಧೋನಿ ಜೆರ್ಸಿ ಹೆಸರು ಪಾಕಿಸ್ತಾನ ಸಮವಸ್ತ್ರದಲ್ಲಿ!

ಎಂಎಸ್ ಧೋನಿ ಜೆರ್ಸಿ ಹೆಸರು ಪಾಕಿಸ್ತಾನ ಸಮವಸ್ತ್ರದಲ್ಲಿ!
Melbourne , ಗುರುವಾರ, 29 ಡಿಸೆಂಬರ್ 2016 (08:11 IST)
ಮೆಲ್ಬೋರ್ನ್: ಇತ್ತೀಚೆಗಷ್ಟೇ ಭಾರತದಲ್ಲಿ ಶಾಹಿದ್ ಅಫ್ರಿದಿ ಹೆಸರಿನ ಜೆರ್ಸಿ ತೊಟ್ಟಿದ್ದಕ್ಕೆ ಅಭಿಮಾನಿಯೊಬ್ಬ ಬಂಧನಕ್ಕೊಳಗಾಗಿದ್ದ. ಆದರೆ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ಎಂಎಸ್ ಧೋನಿ ಹೆಸರು ಬರೆದ ಪಾಕ್ ಸಮವಸ್ತ್ರ ಧರಿಸಿದ್ದು ಗಮನ ಸೆಳೆಯಿತು.


ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹಳಸಿದ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವೆ ಕ್ರಿಕೆಟ್ ಸರಣಿ ನಡೆಯುತ್ತಿಲ್ಲ. ಆದರೆ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರ ತಮ್ಮ ಕ್ರಿಕೆಟ್ ಪ್ರೇಮ ಮೆರೆಯುವುದನ್ನು ಮರೆಯುವುದಿಲ್ಲ.

ಇದಕ್ಕೆ ಮೊದಲು ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ತನ್ನ ಅಭಿಮಾನ ತೋರಿಸಲು ಹೋಗಿ ಜೈಲು ಸೇರಿದ್ದ. ಇದೇ ಕಾರಣಕ್ಕೇ ಏನೋ ಯಾವುದೇ ವಿವಾದ ಬೇಡವೆಂದು ಈ ಅಭಿಮಾನಿ ಪಾಕಿಸ್ತಾನ ಏಕದಿನ ಕ್ರಿಕೆಟ್ ನಲ್ಲಿ ತೊಡುವ ಸಮವಸ್ತ್ರ ಧರಿಸಿ ಅದರ ಮೇಲೆ ಧೋನಿ ಎಂದು ಬರೆದು 7 ನಂಬರ್ ಹಾಕಿಸಿಕೊಂಡಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಯ ದಿರಿಸಿನ ಬಗ್ಗೆ ಆಕ್ಷೇಪ ಎತ್ತಿದವರಿಗೆ ತಿರುಗೇಟು ಕೊಟ್ಟ ಮೊಹಮ್ಮದ್ ಶಮಿ ತಂದೆ