ಸದ್ಯದಲ್ಲೇ ನಿರೀಕ್ಷಿಸಿ ಮಹಿ-ಯುವಿ ಜುಗಲ್ ಬಂದಿ ಎಂದ ಯುವರಾಜ್ ಸಿಂಗ್

Webdunia
ಮಂಗಳವಾರ, 10 ಜನವರಿ 2017 (11:54 IST)
ನವದೆಹಲಿ: ಕೆಲವು ವರ್ಷಗಳ ಹಿಂದೆ ಟೀಂ ಇಂಡಿಯಾದಲ್ಲಿ ರನ್ ಚೇಸಿಂಗ್ ಇದ್ದಾಗ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಜೋಡಿಯದ್ದೇ ಕಾರುಬಾರು. ಅದೀಗ ಮತ್ತೆ ನೋಡಬಹುದು ಎಂದಿದ್ದಾರೆ ಯುವಿ.


ಹಲವು ವರ್ಷಗಳ ನಂತರ ಯುವರಾಜ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಧೋನಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಹಿಂದಿನ ಸಹ ಆಟಗಾರರಾದ ಸುರೇಶ್ ರೈನಾ, ಆಶಿಷ್ ನೆಹ್ರಾ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಹಳೆಯ ದಿನಗಳನ್ನು ಮತ್ತೆ ಮರಳಿ ತರುತ್ತೇವೆ ಎಂದು ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ್ದಾರೆ ಯುವಿ.

ಆದರೆ ಈಗ ಟೀಂ ಇಂಡಿಯಾ ಮೊದಲಿದ್ದಂತಿಲ್ಲ. ವಿರಾಟ್ ಕೊಹ್ಲಿ ಎಂಬ ಸೂಪರ್ ಸ್ಟಾರ್ ಮೇಲೆ ನಿಂತಿದೆ ಎಂಬುದನ್ನು ಯುವಿ ಚೆನ್ನಾಗಿ ಅರಿತಿದ್ದಾರೆ.  ವಿರಾಟ್ ನಂತೆ ಮೂರೂ ಮಾದರಿಯ ಪಂದ್ಯಗಳಲ್ಲಿ 50 ಸರಾಸರಿ ಹೊಂದಿದ ಬ್ಯಾಟ್ಸ್ ಮನ್ ಇರುವಾಗ ತಮಗೆ ಕೆಲಸ ಕಡಿಮೆ ಎನ್ನುವುದು ಅವರಿಗೆ ಗೊತ್ತು. ಆದರೆ ಮತ್ತೆ 35 ವರ್ಷದ ಯುವಿಗೆ ಮೊದಲಿನ ರೀತಿ ಆಡಲು ಸಾಧ್ಯವೇ ಎಂಬುದು ಅಭಿಮಾನಿಗಳ ಅನುಮಾನ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments