Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಮದುವೆಗೆ ತಂದೆ ಯೋಗರಾಜ್ ಬರೋದಿಲ್ವಂತೆ!

ಯುವರಾಜ್ ಸಿಂಗ್ ಮದುವೆಗೆ ತಂದೆ ಯೋಗರಾಜ್ ಬರೋದಿಲ್ವಂತೆ!
Chandigarh , ಶನಿವಾರ, 26 ನವೆಂಬರ್ 2016 (15:21 IST)
ಚಂಡೀಘಡ: ಕ್ರಿಕೆಟಿಗ ಯುವರಾಜ್ ಸಿಂಗ್ ಮದುವೆಗೆ ಅವರ ತಂದೆ ಯೋಗರಾಜ್ ಸಿಂಗ್ ಬರುವುದಿಲ್ಲವಂತೆ. ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಯೋಗರಾಜ್ ಸಿಂಗ್ ಮತ್ತು ಯುವರಾಜ್ ತಾಯಿ ಶಬನಮ್ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದರೆ ಪುತ್ರ ಯುವರಾಜ್ ಬಗ್ಗೆ ಯೋಗರಾಜ್ ಸಿಂಗ್ ಗೆ ಯಾವುದೇ ಮುನಿಸಿಲ್ಲ. ಆಗಾಗ ಯುವರಾಜ್ ಪರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಹಾಗಿದ್ದರೂ ಮದುವೆಗೆ ಯಾಕೆ ಬರೋದಿಲ್ಲ?

“ಹೇಳಿಕೆಯಿಲ್ಲದ ಕಡೆಗೆ ನನ್ನ ಅಪ್ಪನ ಮನೆಯಾದರೂ ಹೋಗಲ್ಲ. ನಾನು ದೇವರನ್ನ ನಂಬುತ್ತೇನೆ. ಆದರೆ ಗುರುಗಳು, ಮಠ ಮಂದಿರಗಳ ಮೇಲೆ ನನಗೆ ನಂಬಿಕೆಯಿಲ್ಲ. ನಾನು ಹಿಂದೆಯೂ ಯುವಿ ತಾಯಿಗೆ ಇದನ್ನು ಹೇಳಿದ್ದೆ. ಮಠ ಮಂದಿರಗಳಲ್ಲಿ ಮದುವೆ ಮಾಡಿದರೆ ಬರೋದಿಲ್ಲ. ಆದರೆ ನವಂಬರ್ 29 ರಂದು ಹೋಟೆಲ್ ಲಲಿತ್ ನಲ್ಲಿ ನಡೆಯಲಿರುವ ಆರತಕ್ಷತೆಗೆ ಖಂಡಿತಾ ಹೋಗುತ್ತೇನೆ. ಆ ಸಮಾರಂಭಕ್ಕೆ ಯುವಿ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದ್ದಾನೆ” ಎಂದು ಯೋಗರಾಜ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪ್ರಯೋಗ ಮಾಡಲು ಹೋಗಿ ಕೈಸುಟ್ಟುಕೊಂಡ ದ.ಆಫ್ರಿಕಾ