ಬೆಂಗಳೂರು: ನಿನ್ನೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹುಡುಗ ಯುವ ಬೌಲರ್ ಯಜುವೇಂದ್ರ ಚಾಹಲ್ ದಿನವಾಗಿತ್ತು. ಕೊನೆಯ ಓವರ್ ಗಳಲ್ಲಿ ರನ್ ಬದಲು ಅವರು ವಿಕೆಟ್ ಉರುಳಿಸುತ್ತಾ ಬಂದರು. ಇದರೊಂದಿಗೆ ಅಪರೂಪದ ದಾಖಲೆಯನ್ನೂ ಮಾಡಿದರು.
ಚಾಹಲ್ ನಿನ್ನೆ 6 ವಿಕೆಟ್ ಪಡೆದಿದ್ದು ಭಾರತದ ಪರ ಟಿ20 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನವಾಗಿದೆ. ಇದಕ್ಕಿಂತ ಮೊದಲು ರವಿಚಂದ್ರನ್ ಅಶ್ವಿನ್ ಒಂದು ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತಿದ್ದು ದಾಖಲೆಯಾಗಿತ್ತು. ಆ ದಾಖಲೆಯನ್ನು ಚಾಹಲ್ ಮುರಿದರು.
ಧೋನಿ ತಮ್ಮ ಟಿ20 ವೃತ್ತಿ ಜೀವನದ ಮೊದಲ ಅರ್ಧ ಶತಕ ದಾಖಲಿಸಿದರು. ಅವರು ನಿನ್ನೆ 56 ರನ್ ಹೊಡೆದಿದ್ದು ಅವರ ಶ್ರೇಷ್ಠ ಸಾಧನೆಯಾಗಿದೆ. ಸುರೇಶ್ ರೈನಾ ಕೂಡಾ ಕಿರು ಮಾದರಿ ವೃತ್ತಿ ಜೀವನದ ಎರಡನೇ ಅರ್ಧ ಶತಕ ದಾಖಲಿಸಿದರು.
ಭಾರತ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆಲುವು ದಾಖಲಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಪಂದ್ಯದಲ್ಲಿ 8 ರನ್ ಗೆ 8 ವಿಕೆಟ್ ಕಳೆದುಕೊಂಡ ಪ್ರಥಮ ತಂಡ ಎನ್ನುವ ಕುಖ್ಯಾತಿಗೆ ಇಂಗ್ಲೆಂಡ್ ಪಾತ್ರವಾಯಿತು. 119 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆಂಗ್ಲರು 127 ರನ್ ಗಳಿಗೆ ಆಲೌಟ್ ಆದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ