ಬೆಂಗಳೂರು: ಅದೇನು ತಿಂದು ಬಂದಿದ್ದರೋ.. ಮೊನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಆ ಮಟ್ಟಿಗೆ ಬಾಲ್ ಮಾಡಿದ್ದರು. ಅವರ ಸಕ್ಸಸ್ ಸೀಕ್ರೆಟ್ ಈಗ ಅವರ ಬಾಯಿಯಿಂದಲೇ ಬಯಲಾಗಿದೆ.
ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಒಂದೇ ಸಮನೆ ಚಚ್ಚುತ್ತಿದ್ದಾಗ ಮಹಿ ಮತ್ತು ವಿರಾಟ್ ಜತೆ ಚರ್ಚಿಸಿದ್ದೆ. ಅವರಿಬ್ಬರೂ ಸೇರಿ ನನ್ನಲ್ಲಿ ಆಫ್ ಸೈಡ್ ನಲ್ಲಿ ಆಫ್ ಸ್ಟಂಪ್ ಕಡೆಗೆ ಬಾಲ್ ಹಾಕಲು ಸಲಹೆ ನೀಡಿದರು. ಇದರಿಂದ ಬ್ಯಾಟ್ಸ್ ಮನ್ ಗಳಿಗೆ ಶಾಟ್ ಹೊಡೆಯಲು ಕಷ್ಟವಾಗುತ್ತದೆ.
ಇಂಗ್ಲೆಂಡ್ ಬೌಲಿಂಗ್ ಮಾಡುತ್ತಿದ್ದಾಗ ಅವರಿಗೆ ಸಾಕಷ್ಟು ಟರ್ನ್ ಸಿಗುತ್ತಿದ್ದುದನ್ನು ಗಮನಿಸಿದೆ. ಅದೇ ರೀತಿ ಅಮಿತ್ ಮಿಶ್ರಾ ಬೌಲಿಂಗ್ ಮಾಡುತ್ತಿದ್ದಾಗ ತಿರುವು ಪಡೆಯುತ್ತಿತ್ತು. ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದೇ ರೀತಿ ಬಾಲ್ ಎಸೆದೆ. ಯಶಸ್ಸೂ ಕಂಡೆ ಎಂದು ಚಾಹಲ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ