ವೈ ದಿಸ್ ಕೊಲವರಿ ಡಿ? ಫ್ಲಿಪ್ ಕಾರ್ಟ್ ಸಂಸ್ಥೆಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಪ್ರಶ್ನೆ

Webdunia
ಮಂಗಳವಾರ, 17 ಜನವರಿ 2017 (10:52 IST)
ನವದೆಹಲಿ: ಟ್ವಿಟರ್ ನಲ್ಲಿ ಆಕ್ಟಿವ್ ಆಗಿರುವ ಕ್ರಿಕೆಟಿಗರ ಪೈಕಿ ರವೀಂದ್ರ ಜಡೇಜಾ ಕೂಡಾ ಒಬ್ಬರು. ಆದರೆ ಆನ್ ಲೈನ್ ಮಾರಾಟ ದಿಗ್ಗಜ ಸಂಸ್ಥೆ ಫ್ಲಿಪ್ ಕಾರ್ಟ್ ಜತೆ ಅವರು ನಡೆಸಿದ ಈ ಸಂಭಾಷಣೆ ನಿಮ್ಮ ಮುಖದಲ್ಲಿ ಖಂಡಿತಾ ನಗು ಮೂಡಿಸದಿರದು.


ಇದೆಲ್ಲಾ ಶುರುವಾಗಿದ್ದು, ಫ್ಲಿಪ್ ಕಾರ್ಟ್ ಮಾಡಿದ ಒಂದು ಟ್ವೀಟ್ ನಿಂದ. “ಭಾರತದ ನೂತನ ಆಲ್ ರೌಂಡರ್ ಜನವರಿ 19 ರಂದು ನಮ್ಮಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಭಾರತದಲ್ಲೇ ಶ್ರೇಷ್ಟವಾದದ್ದು. ಯಾರಾದರೂ ಹೇಳಬಲ್ಲಿರಾ? ಯಾರದು?” ಎಂದು ಫ್ಲಿಪ್ ಕಾರ್ಟ್ ಟ್ವೀಟ್ ಮಾಡಿತ್ತು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಜಡೇಜಾ “ಯಾಕೆ ಈ ಕೊಲವರಿ? ಘೋಷಣೆ ಮಾಡುವ ಮೊದಲು ನನಗೆ ಹೇಳಬೇಕಿತ್ತಲ್ವಾ? 19 ಕ್ಕೆ ನನಗೆ ಮ್ಯಾಚ್ ಇದೆ. ಇದನ್ನು 20 ಕ್ಕೆ ಮುಂದೂಡಲಾಗದೇ?” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಫ್ಲಿಪ್ ಕಾರ್ಟ್ “ಓಹ್ ನೀವೂ ಕೂಡಾ. ಆ ಆಲ್ ರೌಂಡರ್ ನ ಅಭಿಮಾನಿಯಾ? ಗ್ರೇಟ್!” ಎಂದಿತು. “ಏನು ಅಭಿಮಾನಿಯಾ?! ನಾನೇ ಭಾರತದ ಲೀಡಿಂಗ್ ಆಲ್ ರೌಂಡರ್” ಎಂದು ಜಡೇಜಾ ಪ್ರತಿಕ್ರಿಯಿಸಿದರು.

ಅಸಲಿಗೆ ಫ್ಲಿಪ್ ಕಾರ್ಟ್ ಹೇಳುತ್ತಿರುವುದು ಒಂದು ಜಡೇಜಾ ಕೇಳುತ್ತಿರುವುದು ಇನ್ನೊಂದು. ಕೊನೆಗೆ ಜಡೇಜಾಗೂ ಯಾಕೋ ಅನುಮಾನ ಬಂತು. ದಯವಿಟ್ಟು ಯಾರಾದರೂ ಈ ಅನುಮಾನ ತೀರಿಸುತ್ತೀರಾ ಎಂದು ಜಡೇಜಾ ಕೇಳಿದಾಗ ಅಸಲಿ ವಿಷಯ ಬಯಲಿಗೆ ಬಂತು. ನಿಜವಾಗಿ ಫ್ಲಿಪ್ ಕಾರ್ಟ್ ಹೇಳಿಕೊಂಡಿದ್ದು ಹೊಸ ಮೊಬೈಲ್ ಮಾರುಕಟ್ಟೆಗೆ ಬರುತ್ತಿರುವ ವಿಷಯವನ್ನು. ಆದರೆ ಜಡೇಜಾ ಕನ್ ಫ್ಯೂಸ್ ಆಗಿದ್ದರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments