ಇಂಗ್ಲೆಂಡ್ ಸರಣಿಗೆ ಟೀಂ ಇಂಡಿಯಾ ಪಟ್ಟಿಯಲ್ಲಿ ರೋಹಿತ್ ಶರ್ಮಾ ಯಾಕಿಲ್ಲ ಗೊತ್ತೇ?

Webdunia
ಶನಿವಾರ, 7 ಜನವರಿ 2017 (09:57 IST)
ಮುಂಬೈ:  ನಿನ್ನೆಯಷ್ಟೇ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದರಲ್ಲಿ ಒಂದು ಪ್ರಮುಖ ಹೆಸರು ಕಾಣೆಯಾಗಿತ್ತು. ಅವರೇ ರೋಹಿತ್ ಶರ್ಮಾ. ಅವರ್ಯಾಕೆ ಆಯ್ಕೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೊನ್ನೆಯಷ್ಟೇ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಗೆ ಆಯ್ಕೆಯಾಗಿದ್ದ ರೋಹಿತ್ ಟೀಂ ಇಂಡಿಯಾದಲ್ಲಿಲ್ಲ. ಎಂಎಸ್ ಕೆ ಪ್ರಸಾದ್ ತಂಡ ಘೋಷಿಸುವಾಗ ರೋಹಿತ್ ಹೆಸರು ಎಲ್ಲೂ ಕೇಳಿ ಬರಲಿಲ್ಲ. ಅಭ್ಯಾಸ ಪಂದ್ಯದ ತಂಡದಲ್ಲೂ ಅವರ ಹೆಸರಿರಲಿಲ್ಲ. ಯಾಕೆಂದು ಎಲ್ಲರಿಗೂ ಅಚ್ಚರಿಯಾಗಿತ್ತು.

ಅವರ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಹುಯಿಲೆಬ್ಬಿಸಿದರು. ಏಕದಿನ ಪಂದ್ಯಗಳಲ್ಲಿ ಸ್ಥಿರ ಸದಸ್ಯರಾಗಿರುವ ರೋಹಿತ್ ರನ್ನು ಕೈ ಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೆ ಸ್ವತಃ ಅವರೇ ಸ್ಪಷ್ಟನೆ ನೀಡಬೇಕಾಗಿ ಬಂತು.

ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ನಾನಿನ್ನೂ ನೂರರಷ್ಟು ಫಿಟ್ ಆಗಿಲ್ಲ. ಮುಂದಿನ ಆಸ್ಟ್ರೇಲಿಯಾ ಸರಣಿಗೆ ಚೇತರಿಸಿಕೊಳ್ಳುವ ಗುರಿ ಹೊಂದಿದ್ದೇನೆ ಎಂದು ಟ್ವಿಟರ್ ನಲ್ಲಿ ಮೆಸೇಜ್ ಹಾಕಿದ ಬಳಿಕ ಎಲ್ಲರೂ ತಣ್ಣಗಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

ಮುಂದಿನ ಸುದ್ದಿ
Show comments