Select Your Language

Notifications

webdunia
webdunia
webdunia
webdunia

ಡಾಕ್ಟರೇಟ್ ಕೊಡುತ್ತೇವೆಂದರೂ ರಾಹುಲ್ ದ್ರಾವಿಡ್ ನಿರಾಕರಿಸಿದ್ದೇಕೆ?!

ಡಾಕ್ಟರೇಟ್ ಕೊಡುತ್ತೇವೆಂದರೂ  ರಾಹುಲ್ ದ್ರಾವಿಡ್ ನಿರಾಕರಿಸಿದ್ದೇಕೆ?!
Bangalore , ಗುರುವಾರ, 26 ಜನವರಿ 2017 (09:01 IST)
ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಜೆಂಟಲ್ ಮೆನ್ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಬೆಂಗಳೂರು ವಿವಿ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ನೀಡಲುದ್ದೇಶಿಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
 

ತಾವು ಕ್ರಿಕೆಟ್ ಆಡಿದ್ದಕ್ಕೇ ಡಾಕ್ಟರೇಟ್ ಪದವಿ ಕೊಡುವುದು ಬೇಡ. ಮುಂದೊಮ್ಮೆ ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಬಂಧ ಮಂಡಿಸಿದರೆ ಅದನ್ನು ಗಮನಿಸಿ ಡಾಕ್ಟರೇಟ್ ಪದವಿ ನೀಡಿ ಎಂದು ತಮಗೆ ಸಿಗಲಿದ್ದ ಬಿರುದನ್ನು ನಯವಾಗಿ ನಿರಾಕರಿಸಿದ್ದಾರೆ.

ಬೆಂಗಳೂರು ವಿವಿ ದ್ರಾವಿಡ್ ಗೆ ಈ ಮೇಲ್ ಮೂಲಕ ಡಾಕ್ಟರೇಟ್ ಪದವಿ ನೀಡುವುದಾಗಿ ಮಾಹಿತಿ ನೀಡಿತ್ತು. ಇದಕ್ಕೆ ಅವರು ಈ ಮೇಲ್ ಮೂಲಕವೇ ಹೀಗೆ ಉತ್ತರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಗುಲ್ಬರ್ಗಾ ವಿವಿ ನೀಡಬೇಕಿದ್ದ ಡಾಕ್ಟರೇಟ್ ಪದವಿಯನ್ನೂ ದ್ರಾವಿಡ್ ನಯವಾಗಿ ನಿರಾಕರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬನ್ನಿರಿ, ಆಡಿರಿ ಇಂದೇ ಗೆಲ್ಲಿರಿ! ಯುವ ಬೌಲರ್ ಗಳಿಗೆ ವಿರಾಟ್ ಕೊಹ್ಲಿ ಆಫರ್!