Select Your Language

Notifications

webdunia
webdunia
webdunia
webdunia

ಮೂರನೇ ಟೆಸ್ಟ್ ನಡೆಯಲಿರುವ ರಾಂಚಿ ಪಿಚ್ ನಲ್ಲಿ ಧೋನಿಗೇನು ಕೆಲಸ?!

ಮೂರನೇ ಟೆಸ್ಟ್ ನಡೆಯಲಿರುವ ರಾಂಚಿ ಪಿಚ್ ನಲ್ಲಿ ಧೋನಿಗೇನು ಕೆಲಸ?!
Ranchi , ಗುರುವಾರ, 9 ಮಾರ್ಚ್ 2017 (09:45 IST)
ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಧೋನಿ ತವರೂರು ರಾಂಚಿಯಲ್ಲಿ ನಡೆಯಲಿದೆ. ಆದರೆ ಟೀಂ ಇಂಡಿಯಾ ಬರುವುದಕ್ಕಿಂತಲೂ ಮೊದಲೇ ಧೋನಿ ಪಿಚ್ ಪರೀಕ್ಷೆ ನಡೆಸಲು ಆಗಮಿಸಿದ್ದಾರೆ.

 
ಕಳೆದ ಎರಡೂ ಟೆಸ್ಟ್ ಪಂದ್ಯಗಳು ಐದು ದಿನ ಪೂರೈಸದೇ ಪಿಚ್ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ತಮ್ಮ ತವರೂರಿನಲ್ಲಿ ಆ ರೀತಿ ಆಗದೇ ಇರಲಿ ಎನ್ನುವುದು ಧೋನಿ ಕಳಕಳಿ ಇರಬಹುದು. ಆದರೆ ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಹೇಳಿರುವ ಧೋನಿ ಅತೀವ ಕಾಳಜಿಯಿಂದ ಟೀಂ ಇಂಡಿಯಾಗಿಂತ ಮೊದಲೇ ಪಿಚ್ ಪರೀಕ್ಷಿಸಿರುವುದು ಹಲವರ ಹುಬ್ಬೇರಿಸಿದೆ.

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ನಂತರ ನೇರವಾಗಿ ಕೋಲ್ಕೊತ್ತಾಗೆ ತೆರಳದೇ ತವರು ರಾಂಚಿಗೆ ಬಂದಿಳಿದ ಧೋನಿ, ಪಿಚ್ ಪರಿಶೀಲಿಸಿ, ಕ್ಯುರೇಟರ್ ಗಳೊಂದಿಗೆ ಚರ್ಚಿಸಿದರು.

ಆದರೆ ಪಿಚ್ ನಿರ್ಮಿಸುವಲ್ಲಿ ಧೋನಿ ಪ್ರಭಾವ ಬೀರುತ್ತಿಲ್ಲ ಎಂದು ಕ್ಯುರೇಟರ್ ಗಳು ಸ್ಪಷ್ಟಪಡಿಸಿದ್ದಾರೆ. ಆತ ತವರಿಗೆ ಬಂದಾಗಲೆಲ್ಲಾ ರಾಂಚಿ ಕ್ರೀಡಾಂಗಣಕ್ಕೆ ಬರುವುದು ಸಹಜ. ಇಂದೂ ಹಾಗೇ ಬಂದು, ಪಿಚ್ ಪರಿಶೀಲಿಸಿದ್ದಾರಷ್ಟೇ. ಇಂತಹದ್ದೇ ಪಿಚ್ ನಿರ್ಮಿಸಿ ಎಂದು ಅವರು ಯಾವತ್ತೂ ಒತ್ತಡ ಹೇರಿಲ್ಲ ಎಂದು ಕ್ಯುರೇಟರ್ ಹೇಳಿದ್ದಾರೆ. ಹಾಗಿದ್ದರೂ, ತಮ್ಮ ತವರಿನಲ್ಲಿ ನಡೆಯಲಿರುವ ಪಂದ್ಯದ ಬಗ್ಗೆ ಧೋನಿ ಆಸ್ಥೆ ವಹಿಸಿರುವುದು ನಿಜಕ್ಕೂ ಅಭಿನಂದನೀಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಗೆ ಮಾಫಿ ನೀಡಿದ ಐಸಿಸಿ