ಯುವರಾಜ್ ಸಿಂಗ್ ಬಯೋಗ್ರಫಿ ಸಿನಿಮಾದಲ್ಲಿ ನಾಯಕ ಯಾರು ಗೊತ್ತೇ?

Webdunia
ಭಾನುವಾರ, 5 ಫೆಬ್ರವರಿ 2017 (07:21 IST)
ಮುಂಬೈ: ಧೋನಿ ಜೀವನಾಧಾರಿತ ಸಿನಿಮಾ ಹಿಟ್ ಆಯ್ತು. ಸಚಿನ್ ತೆಂಡುಲ್ಕರ್ ಸಿನಿಮಾ ಶೀಘ್ರದಲ್ಲೇ ಬರುತ್ತದೆ ಎಂದು ಸುದ್ದಿಯಾಗಿತ್ತು. ಇದೀಗ ಯುವರಾಜ್ ಸಿಂಗ್ ಸರದಿ. ಕಮ್ ಬ್ಯಾಕ್ ಹೀರೋ ಯುವಿ ಸಿನಿಮಾದಲ್ಲಿ ಯುವಿ ಪಾತ್ರ ವಹಿಸಲು ಬಾಲಿವುಡ್ ನ ಈ ಖ್ಯಾತ ಹೀರೋ ಬಳಿ ಕೇಳಿಕೊಳ್ಳಲಾಗಿದೆಯಂತೆ.

 
ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದು ಕೊಟ್ಟ, ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಯುವಿ ವರ್ಣರಂಜಿತ ಬದುಕು ಎಂತಹವರಿಗೂ ಕತೆಗೆ ಬೇಕಾದಷ್ಟು ಸರಕು ಒದಗಿಸುತ್ತದೆ. ಹೀಗಿರುವಾಗ ಯುವಿ ಸಿನಿಮಾ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಆದರೆ ಇತ್ತೀಚೆಗೆ ಏ ದಿಲ್ ಹೇ ಮುಷ್ಕಿಲ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಯುವರಾಜ್ ಜೀವನಾಧಾರಿತ ಸಿನಿಮಾದಲ್ಲಿ ನಟಿಸಲು ರಣಬೀರ್ ಆಸಕ್ತಿ ವಹಿಸಿರುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಅವರನ್ನೇ ಆ ಪಾತ್ರಕ್ಕೆ ಫಿಟ್ ಮಾಡಲಾಗುತ್ತಿದೆ ಎಂದು ಗಾಸಿಪ್ ಹರಡಿವೆ. ಆದರೆ ರಣಬೀರ್ ಆಪ್ತರು ಮಾತ್ರ ಇದನ್ನು ಖಚಿತಪಡಿಸಿಲ್ಲ.

ಆದರೆ ಸ್ವತಃ ಯುವರಾಜ್ ಗೆ ಈ ಪಾತ್ರಕ್ಕೆ ಅಕ್ಷಯ್ ಕುಮಾರ್ ಸೂಕ್ತ ಎಂಬ ಭಾವನೆಯಿದೆಯಂತೆ. ಅದನ್ನು ಸ್ವತಃ ಅವರೇ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅಂತೂ ಯಾರೇ ಮಾಡಲಿ,  ಯುವಿ ಸಿನಿಮಾ ಕೂಡಾ ಧೋನಿ ಸಿನಿಮಾದಂತೇ ಯಶಸ್ವಿಯಾಗುವುದಂತೂ ಸತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಅಗ್ರೆಸಿವ್ ಆಗಿ ರೋಹಿತ್ ಶರ್ಮಾ ಹೇಳಿದ್ದೇನು: ಕೊನೆಗೂ ರಿವೀಲ್

ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಸಿಟ್ಟಾಗಿರುವುದಕ್ಕೆ ಕಾರಣ ಬಯಲು

ವಿರಾಟ್ ಕೊಹ್ಲಿ, ಧೋನಿ ಮೇಲೆ ಗೌತಮ್ ಗಂಭೀರ್ ಗೆ ವೈಮನಸ್ಯ ಹುಟ್ಟಿಕೊಂಡಿದ್ದು ಇದೇ ಕಾರಣಕ್ಕಾ

ಮುಂದಿನ ಸುದ್ದಿ
Show comments