Select Your Language

Notifications

webdunia
webdunia
webdunia
webdunia

ಟೀಂ ಮೀಟಿಂಗ್ ನಲ್ಲಿ ಕೋಚ್ ಕುಂಬ್ಳೆಗೆ ನಾಯಕ ಕೊಹ್ಲಿ ಬೈದಿದ್ದರೇ?!

ಟೀಂ ಮೀಟಿಂಗ್ ನಲ್ಲಿ ಕೋಚ್ ಕುಂಬ್ಳೆಗೆ ನಾಯಕ ಕೊಹ್ಲಿ ಬೈದಿದ್ದರೇ?!
London , ಗುರುವಾರ, 22 ಜೂನ್ 2017 (08:26 IST)
ಲಂಡನ್: ಟೀಂ ಇಂಡಿಯಾ ಕೋಚ್ ಹುದ್ದೆಗೆ ರಾಜೀನಾಮೆ ನೀಡುವುದಕ್ಕೆ ನಾಯಕ ಕೊಹ್ಲಿಯೊಂದಿಗೆ ಭಿನ್ನಾಭಿಪ್ರಾಯಗಳೇ ಕಾರಣ ಎಂದು ಅನಿಲ್ ಕುಂಬ್ಳೆ ಹೇಳಿಕೆ ನೀಡಿದ ಬೆನ್ನಲ್ಲೇ ಈ ವಿಚಾರವಾಗಿ ಹಲವು ಸುದ್ದಿಗಳು ಹಬ್ಬುತ್ತಿವೆ.

 
ಇಬ್ಬರ ನಡುವೆ ಮುಖ ಕೊಟ್ಟು ಮಾತನಾಡದಷ್ಟು ಸಂಬಂಧ ಹಳಸಿತ್ತು ಎಂದು ಗಾಸಿಪ್ ಹಬ್ಬಿತ್ತು. ಅದರ ಜತೆಗೆ ಇದೀಗ ಬಂದ ಹೊಸ ವರದಿಯ ಪ್ರಕಾರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಮೊದಲು ನಡೆದ ತಂಡದ ಸಭೆಯಲ್ಲಿ ಕೋಚ್ ಕುಂಬ್ಳೆಗೆ ನಾಯಕ ಕೊಹ್ಲಿ ಬೈದಿದ್ದರು ಎಂದು ಸುದ್ದಿ ಹಬ್ಬಿದೆ.

ಇದು ಎಷ್ಟರ ಮಟ್ಟಿಗೆ ನಿಜವೆಂದು ಗೊತ್ತಿಲ್ಲ. ಅಂತೂ ಆ ಸಭೆಯಲ್ಲಿ ಕೊಹ್ಲಿ ಕೋಚ್ ವಿರುದ್ಧ ಕೂಗಾಡಿದ್ದರಂತೆ. ಇದಲ್ಲದೆ, ನಿಮ್ಮ ಪರವಾಗಿ ಇಲ್ಲಿ ಯಾವ ಆಟಗಾರರೂ ಇಲ್ಲ. ಎಲ್ಲವೂ ಸಾಕಾಗಿದೆ ಎಂದು ಕೂಗಾಡಿದ್ದರು ಎಂದು ವರದಿಯಾಗಿದೆ. ಇಷ್ಟರಮಟ್ಟಿಗೆ ಇವರಿಬ್ಬರ ಸಂಬಂಧ ಹಾಳಾಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದವಡೆ ಮುರಿದಿದ್ದರೂ ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ ಮಹಾನ್ ಕ್ರಿಕೆಟಿಗ ನಮ್ಮ ಕನ್ನಡಿಗ