Webdunia - Bharat's app for daily news and videos

Install App

ಸೌರವ್ ಗಂಗೂಲಿಗೆ ಗನ್ ತೋರಿಸಿದ್ದು ಯಾರು? ದಾದ ಜೀವನದ ಭಯಾನಕ ಕತೆ ಇದು!

Webdunia
ಶನಿವಾರ, 31 ಡಿಸೆಂಬರ್ 2016 (13:05 IST)
ಕೋಲ್ಕೊತ್ತಾ: ಸೌರವ್ ಗಂಗೂಲಿ ಎಂದರೆ ಧೈರ್ಯವಂತ, ಹುಂಬ ಕ್ರಿಕೆಟಿಗ ಎಂದು ಎಲ್ಲರಿಗೂ ಗೊತ್ತು.  ಮೈದಾನದಲ್ಲಿ ಯಾರಿಗೂ ಹೆದರುವ ಜಾಯಮಾನದವರೇ ಅಲ್ಲ. ಅಂತಹ ಕ್ರಿಕೆಟ್ ದಾದ ನನ್ನು ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಸಿದ ಘಟನೆ ನಡೆದಿತ್ತಂತೆ. ಎಲ್ಲಿ ಯಾವಾಗ ಈ ಸ್ಟೋರಿ ಓದಿ.


ಲಂಡನ್ ಅಂಡರ್ ಗ್ರೌಂಡ್ ನಲ್ಲಿ ನವಜೋತ್ ಸಿಂಗ್ ಸಿಧು ಜತೆ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ನಡೆದ ಘಟನೆಯೊಂದನ್ನು ಗಂಗೂಲಿ ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.  ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಎದುರು ಕೂತಿದ್ದ ಯುವಕ ಯುವತಿಯರ ಗುಂಪು ಬಿಯರ್ ಕುಡಿಯುತ್ತಾ ಕೂತಿದ್ದರಂತೆ.

ಅವರೊಲ್ಲಬ್ಬ ಗಂಗೂಲಿ ಕಡೆಗೆ ದುರುಗುಟ್ಟಿ ನೋಡುತ್ತಾ, ಕಾಲು ಕೆರೆದು ಜಗಳಕ್ಕೆ ಬರುವವನಂತೆ ನೋಡುತ್ತಿದ್ದನಂತೆ. ಆದರೆ ಗಂಗೂಲಿ ಅವರನ್ನು ಉತ್ತೇಜಿಸಲಿಲ್ಲ. ಕೊನೆಗೆ ಆ ವ್ಯಕ್ತಿ ಬಿಯರ್ ಬಾಟಲ್ ನನ್ನು ಗಂಗೂಲಿ ಮತ್ತು ಸಿದು ಕೂತಿದ್ದ ಕಡೆಗೆ ಎಸೆದಾಗಲೂ ಸಿದು ಪ್ರತಿಕ್ರಿಯಿಸಲು ಹೋದರೂ, ಗಂಗೂಲಿ ಸುಮ್ಮನಿರುವಂತೆ ಹೇಳಿದರಂತೆ.

ಇಷ್ಟಾದ ಮೇಲೆ ಆ ಯುವಕ ಗಂಗೂಲಿ ಕಡೆಗೆ ಬಂದು ಏನು ಹೇಳಿದೆ ನೀನು ಎಂದು ಜಗಳಕ್ಕೆ ಬಂದನಂತೆ. ಹೇಳಿ ಕೇಳಿ ಪಂಜಾಬಿ ಸಿದು. ಕೋಪ ಜಾಸ್ತಿ. ಈತನ ಉದ್ಧಟತನ ನೋಡಿ ಪಿತ್ತ ನೆತ್ತಿಗೇರಿತು. ಸ್ವಲ್ಪ ಜಗಳವಾಯಿತು.

ಹೇಗೋ ಆ ವ್ಯಕ್ತಿಯನ್ನು ಮಣಿಸಿದರೂ, ಒಬ್ಬಾತ ಗಂಗೂಲಿ ನೆತ್ತಿ ಮೇಲೆ ಗನ್ ಗುರಿಯಿಟ್ಟನಂತೆ. ಆಯಿತು ನನ್ನ ಕತೆ ಇಲ್ಲಿಗೇ ಮುಗಿಯಿತು ಎಂದೇ ಗಂಗೂಲಿ ಎಣಿಸಿದ್ದರಂತೆ. ಪುಣ್ಯಕ್ಕೆ ಅವರ ಜತೆಗಿದ್ದ ಯುವತಿಯೊಬ್ಬಳು ಆತನನ್ನು ರೈಲಿನಿಂದ ಹೊರಗೆ ಕರೆದೊಯ್ದಳಂತೆ. ಆಕೆ ಶಕ್ತಿ ನೋಡಿ ಗಂಗೂಲಿಗೆ ಅಚ್ಚರಿಯಾಯಿತಂತೆ. ಅಂತೂ ಜೀವ ಉಳಿಸಿಕೊಂಡೆ ಎಂದು ಆ ಘಟನೆಯನ್ನು ನೆನೆದಿದ್ದಾರೆ ಗಂಗೂಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

ಮುಂದಿನ ಸುದ್ದಿ
Show comments