Select Your Language

Notifications

webdunia
webdunia
webdunia
webdunia

ಇಶಾಂತ್ ಶರ್ಮಾ ಜತೆಗಿನ ಫೋಟೋ ಪ್ರಕಟಿಸಿದ್ದಕ್ಕೆ ಆರ್. ಅಶ್ವಿನ್ ಪತ್ನಿ ಹೇಳಿದ್ದೇನು?

ಇಶಾಂತ್ ಶರ್ಮಾ ಜತೆಗಿನ ಫೋಟೋ ಪ್ರಕಟಿಸಿದ್ದಕ್ಕೆ ಆರ್. ಅಶ್ವಿನ್ ಪತ್ನಿ ಹೇಳಿದ್ದೇನು?
Chennai , ಗುರುವಾರ, 9 ಮಾರ್ಚ್ 2017 (11:10 IST)
ಚೆನ್ನೈ:  ದ್ವಿತೀಯ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ವೇಗಿ ಇಶಾಂತ್ ಶರ್ಮಾ ಜತೆಗೆ ಟ್ವಿಟರ್ ನಲ್ಲಿ ಫೋಟೋ ಪ್ರಕಟಿಸಿದ್ದರು. ಆದರೆ ಅದಕ್ಕೆ ಅಶ್ವಿನ್ ಪತ್ನಿ ಪ್ರೀತಿ ಗಂಡನ ಕಾಲೆಳೆದಿದ್ದಾರೆ.

 
ಇಶಾಂತ್ ಜತೆಗೆ ತೆಗೆದ ಸೆಲ್ಫೀ ಪ್ರಕಟಿಸಿದ್ದ ಅಶ್ವಿನ್ “ಈ ವ್ಯಕ್ತಿಯ ಸಿಕ್ಸರ್ ಇಂದಿನ ಗೆಲುವಿಗೆ ಮಹತ್ವದ್ದಾಗಿತ್ತು. ಶ್ರಮವಹಿಸಿ ಬೌಲಿಂಗ್ ಮಾಡಿದರು. ಉತ್ತಮವಾಗಿ ಆಡಿದೆ ಇಶಿ” ಎಂದು ಗೆಳೆಯನ ಗುಣಗಾನ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರೀತಿ ಅಶ್ವಿನ್ “ನಿಮ್ಮ ಸೆಂಡ್ ಆಫ್ ಫೋಟೋವನ್ನು ಪ್ರಕಟಿಸಿ ಪ್ಲೀಸ್.. ಆದರೆ ದಯವಿಟ್ಟು ಅದರ ಮೇಲೆ ನಿಮ್ಮ ಕಣ್ಣು ಮಿಟುಕಿಸಬೇಡಿ” ಎಂದು ಕಾಲೆಳೆದಿದ್ದರು. ಅಶ್ವಿನ್ ಮಿಚೆಲ್ ಸ್ಟಾರ್ಕ್ ರನ್ನು ಔಟ್ ಮಾಡಿದ ನಂತರ ವಿಶಿಷ್ಟವಾಗಿ ಸನ್ನೆ ಮಾಡಿ ಅವರಿಗೆ ಸೆಂಡ್ ಆಫ್ ಮಾಡಿದ್ದನ್ನು ಪ್ರೀತಿ ಈ ರೀತಿ ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಶಾಂತ್ ಶರ್ಮಾ ಕೋತಿ ಮುಖದ ಚಾಲೆಂಜ್ ಈಗ ಭಾರೀ ಹಿಟ್!