Webdunia - Bharat's app for daily news and videos

Install App

ವಿರಾಟ್ ಜತೆಗಿನ ಅನುಷ್ಕಾ ಲವ್ವಿ ಡವ್ವಿಗೆ ಅವರಜ್ಜಿ ಏನೆನ್ನುತ್ತಾರೆ?

Webdunia
ಗುರುವಾರ, 9 ಏಪ್ರಿಲ್ 2015 (12:30 IST)
ಭಾರತ ತಂಡದ ಸ್ಪೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೀತಿ-ಪ್ರೇಮದ ವಿಷಯ ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಬ್ಬರು ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ. ಎರಡು ಕಡೆಯ ಪರಿವಾರದವರು ಸಹ ಮದುವೆಗೆ ಸೈ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. 

ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಈ ಪ್ರೇಮಿಗಳ ಮೇಲೆ ಟೀಕಾ ಪ್ರಹಾರವೇ ನಡೆದಿತ್ತು. ಭಾರತದ ಸೋಲಿಗೆ ಪರೋಕ್ಷವಾಗಿ ಅನುಷ್ಕಾರವರೇ ಕಾರಣ ಎಂಬಂತೆ ಬಿಂಬಿಸಲಾಗಿತ್ತು. ಕೊಹ್ಲಿಯ ಕಳಪೆ ಪ್ರದರ್ಶನಕ್ಕೆ ಅನುಷ್ಕಾರವರನ್ನು ಹೊಣೆಗಾರಳನ್ನಾಗಿಸಿ ಅಣಕವಾಡಲಾಗಿತ್ತು. 
 
ಆದರೆ ಈ ಕಠಿಣ ಪರಿಸ್ಥಿತಿ ಅವರಿಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು. ವಿಶ್ವಕಪ್ ನಂತರ ಅವರಿಬ್ಬರು ಕೈ ಕೈ ಹಿಡಿದುಕೊಂಡೇ ಅನೇಕ ಬಾರಿ ಕಾಣಿಸಿಕೊಂಡರು. ಅದೇನೆ ಇರಲಿ ಇವರಿಬ್ಬರು ಬಾಲ್ಯ ಸ್ನೇಹಿತರು ಎಂಬ ವಿಚಾರ ನಿಮಗೆ ಗೊತ್ತೇ? ನಟಿಮಟಿಯ ಪರಿವಾರದವರು ವಿರಾಟ್‌ನನ್ನು ಪುಟ್ಟ ಹುಡುಗನಾಗಿದ್ದಾಗಿನಿಂದ ಬಲ್ಲರು ಮತ್ತು ಅವರು ಆತನನ್ನು ತುಂಬ ಇಷ್ಟ ಪಡುತ್ತಾರಂತೆ.
 
ಖಾಸಗಿ ಸುದ್ದಿವಾಹಿನಿಯೊಂದರ ಪ್ರಕಾರ ಅನುಷ್ಕಾರವರ ಅಜ್ಜಿಗೆ ಅವರಿಬ್ಬರ ಸಂಬಂಧ ಆದಷ್ಟು ಬೇಗ ಮದುವೆಯಲ್ಲಿ ಮುಕ್ತಾಯ ಕಾಣಲಿ ಎಂಬ ಬಯಕೆಯಂತೆ. ತಮ್ಮ ಅಜ್ಜಿಯ ಮನದಾಸೆಯನ್ನು ಅನುಷ್ಕಾ ಎಷ್ಟು ಬೇಗ ಪೂರೈಸುತ್ತಾರೆ ಎಂಬುದನ್ನು ಅವರೇ ಹೇಳಬೇಕು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments