Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೂ ಕ್ರಿಸ್ಟಿಯಾನಾ ರೊನಾಲ್ಡೋಗೂ ಎತ್ತಣ ಸಂಬಂಧ?!

ವಿರಾಟ್ ಕೊಹ್ಲಿಗೂ ಕ್ರಿಸ್ಟಿಯಾನಾ ರೊನಾಲ್ಡೋಗೂ ಎತ್ತಣ ಸಂಬಂಧ?!
NewDelhi , ಸೋಮವಾರ, 2 ಜನವರಿ 2017 (09:56 IST)
ನವದೆಹಲಿ: ಕ್ರಿಸ್ಟಿಯಾನಾ ರೊನಾಲ್ಡೋ ಎಲ್ಲಿ? ವಿರಾಟ್ ಕೊಹ್ಲಿ ಎಲ್ಲಿ? ಇಬ್ಬರೂ ಕ್ರೀಡಾಳುಗಳೇ ಆದರೂ, ಭಾರತೀಯರೂ ಅಲ್ಲ, ಒಂದೇ ಕ್ರೀಡೆಗೆ ಸೇರಿದವರೂ ಅಲ್ಲ. ಆದರೂ ಕೊಹ್ಲಿಗೆ ರೊನಾಲ್ಡೋ ಪ್ರೇರಣೆಯಂತೆ.

ಎಲ್ಲಾ ಬಿಟ್ಟು ಫುಟ್ ಬಾಲ್ ಆಟಗಾರ ರೊನಾಲ್ಡೋ ಹೇಗೆ ಪ್ರೇರಣೆಯಾದರು ಎಂಬುದಕ್ಕೆ ಕೊಹ್ಲಿಯೇ ಉತ್ತರಿಸಿದ್ದಾರೆ. “ನಾನು ರೊನಾಲ್ಡೋ ಅವರ ಕಠಿಣ ಪರಿಶ್ರಮದಿಂದ ಆಕರ್ಷಿತನಾಗಿದ್ದೇನೆ. ಆತ ಹಲವು ವರ್ಷಗಳ ಕಾಲ ನಂ.1 ಆಗಿದ್ದಂತೆ ನಾನೂ ಆಗಲು ಬಯಸುವೆ. ಲಿಯಾನೊಲ್ ಮೆಸ್ಸಿ ಬುದ್ಧಿವಂತ ಆಟಗಾರ. ಆದರೆ ರೊನಾಲ್ಡೊ ಕಠಿಣ ಪರಿಶ್ರಮಿ” ಎಂದು ಕೊಹ್ಲಿ ವಿವರಿಸಿದ್ದಾರೆ.

ತನಗೂ ರೊನಾಲ್ಡೋ ರೀತಿ ಕಠಿಣ ಪರಿಶ್ರಮ ಪಡಬೇಕು. ಅವರಂತೇ ಸದಾ ನಂ.1 ಆಗಿರಬೇಕು ಎಂದು ಆಸೆ ಎಂದು ಅವರು ಹೇಳಿಕೊಂಡಿದ್ದಾರೆ. ಅದೇ ಹಾದಿಯಲ್ಲಿರುವ ಕೊಹ್ಲಿ ಕೂಡಾ ಒತ್ತಡಗಳನ್ನು ನಿಭಾಯಿಸಿಕೊಂಡು ಸಿಕ್ಕಿದ ಅವಕಾಶವನ್ನು ಕೈಚೆಲ್ಲದೇ ಬಳಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ನಲ್ಲಿ ಬ್ರಿಟಿಷ್ ಪತ್ರರ್ತನಿಗೆ ವೀರೇಂದ್ರ ಸೆಹ್ವಾಗ್ ಕೊಟ್ಟ ತಕ್ಕ ಉತ್ತರವಿದು