Webdunia - Bharat's app for daily news and videos

Install App

ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಶ್ರೇಷ್ಠ ಸಲಹೆ ಏನು ಗೊತ್ತಾ?

Webdunia
ಗುರುವಾರ, 12 ಜನವರಿ 2017 (10:08 IST)
ಮುಂಬೈ: ಟೀಂ ಇಂಡಿಯಾದ ಮೂರೂ ಮಾದರಿಯ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿರುವುದನ್ನು ನಂಬುವುದಕ್ಕೇ ಆಗುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.  ಹಾಗಾದರೆ ಕ್ರಿಕೆಟಿಗನ ಜೀವನ ಇಷ್ಟೊಂದು ಅದ್ಭುತವಾಗಲು ಯಾರು ಕೊಟ್ಟ ಸಲಹೆ ಪ್ರಯೋಜನವಾಯಿತು ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ.

ನಾನು ಆರಂಭದ ದಿನಗಳಲ್ಲಿ ಉತ್ತಮವಾಗಿ ಆಡಬೇಕು ಎಂಬ ಕನಸು ಮಾತ್ರ ಹೊತ್ತುಕೊಂಡಿದ್ದೆ. ಈ ಸಂದರ್ಭದಲ್ಲಿ ಕ್ರಿಕೆಟ್ ನಲ್ಲಿ ಶ್ರೇಷ್ಠ ಸಲಹೆ ಎಂದು ನನಗೆ ಕೊಟ್ಟಿದ್ದು ನನ್ನ ಹೀರೋ ಸಚಿನ್ ತೆಂಡುಲ್ಕರ್. ನಿನ್ನ ಆಟದಲ್ಲಿ ನಂಬಿಕೆಯಿಡು. ಬೇರೆಯವರು ಹೇಗೆ ಆಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿನ್ನ ಶೈಲಿಯಲ್ಲಿ ಆಡುತ್ತಿದ್ದರೆ ಯಶಸ್ಸು ನಿನ್ನದಾಗುತ್ತದೆ ಎಂದು ಸಚಿನ್ ಅಂದು ಕೊಹ್ಲಿಗೆ ಹೇಳಿದ್ದರಂತೆ.

ಅದರ ನಂತರ ಕೊಹ್ಲಿ ಹಿಂತಿರುಗಿ ನೋಡಲಿಲ್ಲ. ತಮ್ಮದೇ ಹಾದಿಯಲ್ಲಿ ನಡೆದರು. ಅದಕ್ಕೇ ಇಂದು ಈ ಯಶಸ್ಸು ಸಿಕ್ಕಿದ್ದು ಎಂದು ಕ್ರಿಕೆಟ್ ದೇವರ ನೆನೆಸಿಕೊಳ್ಳುತ್ತಾರೆ ಕೊಹ್ಲಿ. ಸದ್ಯ ಟೆಸ್ಟ್ ತಂಡವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ದ ಕೊಹ್ಲಿ ಇನ್ನು, ಮೂರೂ ಮಾದರಿಗಳಲ್ಲಿ ಭಾರತವನ್ನು ನಂ.1 ಮಾಡುವ ಗುರಿ ಹೊಂದಿಕೊಂಡಿದ್ದಾರಂತೆ.  ಇಂತಹದ್ದೊಂದು ದಿನ ನನ್ನ ಜೀವನದಲ್ಲಿ ಬರಬಹುದು ಎಂದು ಅಂದುಕೊಂಡಿರಲೇ ಇಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments