ಇಂಥಾ ಅಮೋಘ ವರ್ಷಕ್ಕೆ ಎಂತಹಾ ತೆರೆ ಎಳೆಯುತ್ತಿದ್ದಾರೆ ವಿರಾಟ್ ಕೊಹ್ಲಿ!

ಕೃಷ್ಣವೇಣಿ ಕೆ
ಶುಕ್ರವಾರ, 30 ಡಿಸೆಂಬರ್ 2016 (07:32 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದು ಕನಸಿನ ವರ್ಷ. ಯಾರೇ ಆದರೂ ಆಸೆ ಪಡುವಂತಹ, ಕನಸು ಕಾಣುವಂತಹ ವರ್ಷ. ಅದಕ್ಕೊಂದು ಅದ್ಭುತ ತೆರೆ ಎಳೆಯಲಿದ್ದಾರೆ ಕೊಹ್ಲಿ.

 
ಮೂರು ಟೆಸ್ಟ್ ಸರಣಿಗಳು. ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗಳು. ಮೂರೂ ಸರಣಿಗಳಲ್ಲೂ ಒಂದು ಅದ್ಭುತ ಗೆಲುವು. ಬಯಸಿದ ವಿಕೆಟ್. ಬಯಸಿದಂತೆ ಬೌಲ್ ಮಾಡಿದ ಬೌಲರ್ ಗಳು. ಬೇಕಾದಂತೆ ರನ್ ಗಳಸಿದ ಬ್ಯಾಟ್ಸ್ ಮನ್ ಗಳು.

ತಂಡದಲ್ಲಿ ಒಡಕಿನ ಮಾತೇ ಇಲ್ಲ. ಇಷ್ಟಕ್ಕೆ ಅನುಗುಣವಾಗಿ ಸಾಥ್ ಕೊಡುವ ಕೋಚ್ ಮತ್ತಿತರ ಟೀಂ ಮ್ಯಾನೇಜ್ ಮೆಂಟ್. ಇದರ ಜತೆಗೆ ತಾನೂ ಬೇಕಾದಷ್ಟು ರನ್ ಗಳಿಸಲು ಇನ್ನೇನು ಬೇಕು ಒಬ್ಬ ನಾಯಕನಿಗೆ? ಕೊಹ್ಲಿ ವಿಚಾರದಲ್ಲೂ ಅದೇ ಆಗಿದೆ. ಇದೆಲ್ಲದರ ಫಲವಾಗಿ ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿದ್ದಾರೆ. ಟೆಸ್ಟ್ ನಲ್ಲಿ ನಂ.1 ಪಟ್ಟವನ್ನೂ ಪಡೆದಿದ್ದಾರೆ. ಒಬ್ಬ ನಾಯಕ ಇದಕ್ಕಿಂತ ಹೆಚ್ಚಿಗೆ ಏನನ್ನೂ ಬಯಸಲಾರ.

ಈ ಅಮೋಘ ಯಶಸ್ಸಿಗೆ ಕೊಹ್ಲಿ ಅದ್ಭುತವಾಗಿ ತೆರೆ ಎಳೆಯಲು ತೀರ್ಮಾನಿಸಿದಂತಿದೆ. ಅದಕ್ಕೇ ತಮ್ಮ ಮನದೆನ್ನೆ ಅನುಷ್ಕಾ ಶರ್ಮಾ ಜತೆಗೆ ಡೆಹ್ರಾಡೂನ್ ನಲ್ಲಿ ರಜೆ ಸವಿ ಅನುಭವಿಸುತ್ತಿದ್ದಾರೆ. ಎಲ್ಲಾ ನಿಜವಾದರೆ ಜನವರಿ 1 ರಂದು ಹೊಸ ವರ್ಷದ ಜತೆಗೆ, ಹೊಸ ಬಾಳಿಗೆ ಕಾಲಿಡಲು ಕಂಕಣ ಬದ್ಧರಾಗುವ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ.

ಆ ಮೂಲಕ ವೈಯಕ್ತಿಕವಾಗಿ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಲಿದ್ದಾರೆ. ಆದರೆ ಇದು ಕ್ರಿಕೆಟ್ ಬದುಕಿನಲ್ಲೂ ಮುಂದುವರಿಸಬೇಕಾದರೆ ಕೊಹ್ಲಿ ಮುಂದಿದೆ ಸವಾಲುಗಳು. ಈ ವರ್ಷ ಗಳಿಸಿದ ಯಶಸ್ಸು ಮುಂದುವರಿಸಬೇಕಾದರೆ ಕೊಹ್ಲಿ ಕಠಿಣ ಹಾದಿಯನ್ನು ಸವೆಸಬೇಕಿದೆ.

ಮೊದಲಿಗೆ ಬರುವುದು ಆಸ್ಟ್ರೇಲಿಯಾ ಸರಣಿ. ಅದಕ್ಕಿಂತ ಮೊದಲು ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಹೈದರಾಬಾದ್ ನಲ್ಲಿ ನಡೆಯಲಿದೆ. ನಂತರ ಫೆಬ್ರವರಿ ಕೊನೆಯಲ್ಲಿ ಆಸ್ಟ್ರೇಲಿಯಾ ಸರಣಿ ಆರಂಭವಾಗಲಿದೆ. ಇದು ಕೊಹ್ಲಿಗೆ ಸವಾಲು. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಕೊಹ್ಲಿ ಮುಂದಿರುವ ದೊಡ್ಡ ಚಾಲೆಂಜ್.

ಇನ್ನು ಒಬ್ಬ ಆಟಗಾರನಾಗಿ ಐಪಿಎಲ್ ನಂತರ ಬರಲಿರುವ ಚಾಂಪಿಯನ್ಸ್ ಟ್ರೋಫಿ ಕೊಹ್ಲಿಗೆ ಅತೀ ಮುಖ್ಯದ್ದು. ಮಿನಿ ವಿಶ್ವಕಪ್ ಎಂದೇ ಪರಿಗಣಿತವಾಗಿರುವ ಕೂಟದಲ್ಲಿ ನಾಯಕನಲ್ಲದಿದ್ದರೂ, ತಂಡವನ್ನು ದಡಕ್ಕೆ ಸೇರಿಸುವ ಹೊಣೆ ಅವರ ಮೇಲಿದೆ. ಇದಿಷ್ಟು ಸದ್ಯಕ್ಕೆ ನಿಗದಿಯಾಗಿರುವ ಚಾಲೆಂಜ್. ಮುಂದಿನ ವರ್ಷ ವಿದೇಶ ಪ್ರವಾಸದಲ್ಲಿ ಟೆಸ್ಟ್ ಪಂದ್ಯ ಆಡುವುದಿದ್ದರೆ ಆಗ ಕೊಹ್ಲಿಗೆ ನಿಜವಾದ ಚಾಲೆಂಜ್ ಎದುರಾಗಲಿದೆ. ಸದ್ಯಕ್ಕೆ ಟೆಸ್ಟ್ ನಾಯಕತ್ವ ಮಾತ್ರ ಹೊಂದಿರುವ ಕೊಹ್ಲಿಗೆ ಮುಂದಿನ ವರ್ಷ ಏಕದಿನ ನಾಯಕತ್ವವೂ ಸಿಗಲಾರದು ಎಂದೇನಿಲ್ಲ. ಅದು ಎಂಎಸ್ ಧೋನಿ ಯಶಸ್ಸಿನಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments