Select Your Language

Notifications

webdunia
webdunia
webdunia
webdunia

ಪರ್ವತಗಳಲ್ಲಿ ಕಲ್ಲೆಸೆದು ಬೌಲಿಂಗ್ ಕಲಿತವನೀಗ ವಿಶ್ವಕಪ್ ತಂಡದಲ್ಲಿ !

ಪರ್ವತಗಳಲ್ಲಿ ಕಲ್ಲೆಸೆದು ಬೌಲಿಂಗ್ ಕಲಿತವನೀಗ ವಿಶ್ವಕಪ್ ತಂಡದಲ್ಲಿ !
ಕರಾಚಿ , ಬುಧವಾರ, 4 ಫೆಬ್ರವರಿ 2015 (11:45 IST)
ಆಡಲು ಮೈದಾನವಿಲ್ಲದೆ ಪರ್ವತಗಳಲ್ಲಿ ಕಲ್ಲೆಸೆಯುತ್ತ ಬೌಲಿಂಗ್ ಕಲಿತು, ಅಲ್ಲಿನ ನದಿಗಳಲ್ಲಿ ಈಜಿ ಅಭ್ಯಾಸ ನಡೆಸಿದ ಯುವಕನೊಬ್ಬ ವಿಶ್ವಕಪ್‌ಗೆ ಪ್ರಕಟಿಸಲಾದ ಪಾಕಿಸ್ತಾನದ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಈ ಮೂಲಕ ಆತನ ಕಠಿಣ ಪರಿಶ್ರಮಕ್ಕೆ ಫಲ ಸಂದಾಯವಾಗಿದೆ. ಆತನ ಹೆಸರು ಸೊಹೈಲ್ ಖಾನ್.
 
ಬೆಟ್ಟಗುಡ್ಡಗಳಲ್ಲಿ ಕಲ್ಲೆಸೆಯುತ್ತ ಬೌಲಿಂಗ್ ಕಲಿತ 30 ವರ್ಷದ ಸೊಹೈಲ್ ಖಾನ್, ಕೊನೆಕ್ಷಣದಲ್ಲಿ ವಿಶ್ವಕಪ್‌ಗೆ ಪ್ರಕಟಿಸಲಾದ ಪಾಕಿಸ್ತಾನ ತಂಡದಲ್ಲಿ ಸ್ಥಾನಗಳಿಸಿ ಅಚ್ಚರಿ ಮೂಡಿಸಿದ್ದಾನೆ.
 
ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಸೊಹೈಲ್ ಖಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, "ದೇಶೀಯ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ ಆತ ಅತ್ಯುತ್ತಮ ಬೌಲರ್. ಆತನ ಇತ್ತೀಚಿನ ಪ್ರದರ್ಶನಗಳು ಆತನನ್ನು ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಆಯ್ಕೆಗಾರರನ್ನು ಅನಿವಾರ್ಯವನ್ನಾಗಿಸಿವೆ. ಆತ ವಿಶ್ವಕಪ್‌ನಲ್ಲಿ ಅಮೋಘ ಸಾಧನೆ ಮಾಡಲಿದ್ದಾರೆ", ಎಂದು ನನಗೆ ಭರವಸೆಯಿದೆ ಎಂದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸೊಹೈಲ್ ಖಾನ್ 64 ವಿಕೆಟ್ ಕಬಳಿಸಿದ್ದರು. ಅಲ್ಲದೇ ಒಂದೇ ಪಂದ್ಯದಲ್ಲಿ 10 ವಿಕೆಟ್ ಪಡೆದು ಸಹ ಮಿಂಚಿದ್ದಾರೆ. 
 
ಅಂತರಾಷ್ಟ್ರೀಯ ಮಟ್ಟದದಲ್ಲಿ ಮಿಂಚುವ ಗುರಿಯೊಂದಿಗೆ  ಕಠಿಣ ಪರಿಶ್ರಮ ನಡೆಸಿದ ಖಾನ್  ವೇಗದ ಬೌಲಿಂಗ್ ನಡೆಸಲು ಸ್ನಾಯುವನ್ನು ಬಲಪಡಿಸುವ ನಿಟ್ಟಿವಲ್ಲಿ ಮಲಕಾಂಡ್ ಖೈಬರ್ ಪಖುತುಂಖ್ವಾ ಪ್ರಾಂತ್ಯದಲ್ಲಿನ ಪರ್ವತಗಳಲ್ಲಿ ನಿತ್ಯ ಕಲ್ಲೆಸೆದು ಅಭ್ಯಾಸ ನಡೆಸಿದ್ದಾನೆ. ಜತೆಗೆ ದೇಹ ರಚನೆಯನ್ನು ಉತ್ತಮ ಪಡಿಸಿಕೊಳ್ಳಲು ಅಲ್ಲಿನ ನದಿಗಳಲ್ಲಿ ಸತತವಾಗಿ ಈಜಿದ್ದಾರೆ.
 
ತನ್ನ ಸಾಧನೆಯ ಹಾದಿಯನ್ನು ಖಾನ್ ಹೀಗೆ ಬಿಚ್ಚಿಡುತ್ತಾರೆ. "ಮೂಲ ಕ್ರಿಕೆಟ್ ಸೌಲಭ್ಯಗಳಿಂದ ವಂಚಿತನಾಗಿದ್ದ ನಾನು ಆರಂಭದಲ್ಲಿ ಟೆನಿಸ್ ಬಾಲ್‌ನಿಂದ ಆಡುತ್ತಿದ್ದೆ. ಕ್ರಿಕೆಟ್‌ನಲ್ಲಿ ಹೆಸರುಗಳಿಸುವುದು ನನ್ನ ಕನಸಾಗಿತ್ತು. ಕ್ರಿಕೆಟ್ ಆಡಲು ನಾನು ವಾಸಿಸುವ ಪ್ರದೇಶದಲ್ಲಿ ಮೈದಾನವಿರಲಿಲ್ಲ. ಯಾರೋ ಒಬ್ಬರು ನನಗೆ ಕಲ್ಲನ್ನು ದೂರಕ್ಕೆ ಎಸೆಯುವುದನ್ನು ಅಭ್ಯಾಸ ನಡೆಸಿದರೆ ವೇಗದ ಬೌಲಿಂಗ್ ನಡೆಸಲು ಸಹಾಯಕವಾಗುವಂತೆ ಸ್ನಾಯುಗಳು ಬಲಗೊಳ್ಳುತ್ತವೆ ಎಂದರು. ಅದರಂತೆ ನಾನು ಪರ್ವತಗಳಲ್ಲಿ ಕಲ್ಲೆಸೆದೆ ಬೌಲಿಂಗ್ ಅಭ್ಯಾಸ ನಡೆಸಿದೆ". 
 
"ಬುಡಕಟ್ಟು ಪ್ರದೇಶಗಳಲ್ಲಿನ ನದಿಗಳಲ್ಲಿ ಮತ್ತು ತೊರೆಗಳಲ್ಲಿ ನಿರಂತರವಾಗಿ ಈಜಾಡಿದ್ದು ನನಗೆ ಬಲಿಷ್ಠ ದೇಹವನ್ನು ಬೆಳೆಸಿಕೊಳ್ಳಲು ನೆರವಾಯಿತು. ನಾನು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅವರಿಗೆ ಆಭಾರಿಯಾಗಿದ್ದೇನೆ. ಇಂದು ನಾನೇನಾಗಿದ್ದೇನೋ ಅದೆಲ್ಲವೂ ಅವರು ಹೇಳಿಕೊಟ್ಟ ಪಾಠಗಳಿಂದ", ಎನ್ನುತ್ತಾನೆ ಖಾನ್.

Share this Story:

Follow Webdunia kannada