ವಿವಿಎಸ್ ಲಕ್ಷ್ಮಣ್ ಸ್ಲೆಡ್ಜಿಂಗ್ ಮಾಡುತ್ತಿದ್ದ ಒಳ್ಳೆ ಹುಡುಗನಂತೆ ಕಣ್ರಪ್ಪೋ…!

Webdunia
ಮಂಗಳವಾರ, 31 ಜನವರಿ 2017 (12:45 IST)
ಹೈದರಾಬಾದ್: ಈ ಮಾತು ಹೇಳಿದ್ರೆ ಯಾರಾದ್ರೂ ನಂಬ್ತಾರಾ? ಆದರೆ ಸ್ವತಃ ವಿವಿಎಸ್ ಲಕ್ಷ್ಮಣ್ ಹೇಳಿದ ಮೇಲೆ ನಂಬಲೇ ಬೇಕು. ಆಸ್ಟ್ರೇಲಿಯಾ ವಿರುದ್ಧ ಸದಾ ಉತ್ತಮಾಗಿ ಆಡುತ್ತಿದ್ದ ಲಕ್ಷ್ಮಣ್ ತಾವು ಕೂಡಾ ಎದುರಾಳಿಗಳ ಮೇಲೆ ಸ್ಲೆಡ್ಜಿಂಗ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.

 
ಕ್ರಿಕೆಟ್ ನ ಜಂಟಲ್ ಮ್ಯಾನ್ ಎನಿಸಿಕೊಂಡಿದ್ದ ಲಕ್ಷ್ಮಣ್ “ನಾನು ಪಾಪದ ಮನುಷ್ಯ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನಾನು ಸ್ಲೆಡ್ಜಿಂಗ್ ಮಾಡುತ್ತಿದ್ದೆ. ಆದರೂ ಒಳ್ಳೆ ಹುಡುಗನಾಗಿದ್ದೆ” ಎಂದು ತಮಾಷೆ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಸರಣಿ ಆರಂಭವಾಗುತ್ತಿದ್ದಂತೆ ಸ್ಲೆಡ್ಜಿಂಗ್ ಬಗ್ಗೆ ಮಾತುಗಳು ಜೋರಾಗುತ್ತಿವೆ. ಈ ಹಿನ್ನಲೆಯಲ್ಲಿ ಸಂದರ್ಶನವೊಂದರಲ್ಲಿ ಮನದಾಳದ ಮಾತು ಹಂಚಿಕೊಂಡಿರುವ ಲಕ್ಷ್ಮಣ್ ಸ್ಲೆಡ್ಜಿಂಗ್ ಮಾಡುವುದರಲ್ಲಿ ಆಸ್ಟ್ರೇಲಿಯಾದವರಿಗಿಂತ ಟೀಂ ಇಂಡಿಯಾದವರೇ ಒಂದು ಹೆಜ್ಜೆ ಮುಂದು ಎಂದಿದ್ದಾರೆ.

ಭಾರತೀಯ ಕ್ರಿಕೆಟಿಗರ ಹಾಗೆ ಎದುರಾಳಿಗಳ ಮೇಲೆ ಮಾನಸಿಕ ಯುದ್ಧ ಹೇರಲು ಆಸೀಸ್ ಆಟಗಾರರಿಗೆ ಗೊತ್ತಿಲ್ಲ.  ಜಹೀರ್ ಖಾನ್ ಈ ವಿಷಯದಲ್ಲಿ ನಂ.1. ಎರಡನೆಯ ಸ್ಥಾನ ಹರ್ಭಜನ್ ಸಿಂಗ್ ಗೆ ಸಲ್ಲಬೇಕು. ಎದುರಾಳಿಗಳನ್ನು ತಮ್ಮ ನೋಟದಲ್ಲೇ  ಧೃತಿಗೆಡಿಸುವ ಆಟಗಾರರು ಇವರು ಎಂದು ಲಕ್ಷ್ಮಣ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

IPL Auction 2026: ಕ್ಯಾಮರೂನ್ ಗ್ರೀನ್ ಗೆ 25 ಕೋಟಿ, ಮಹೇಶ್ ಪತಿರಾಣಗೆ 18 ಕೋಟಿ: ಐಪಿಎಲ್ ಭರ್ಜರಿ ಸೇಲ್

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಮುಂದಿನ ಸುದ್ದಿ
Show comments