Webdunia - Bharat's app for daily news and videos

Install App

ಹಾಡಿನ ಸಾಲು ನೆನಪಿಸಲು ಪಂದ್ಯವನ್ನೇ ನಿಲ್ಲಿಸಿದ್ದರಂತೆ ವೀರೇಂದ್ರ ಸೆಹ್ವಾಗ್ !

Webdunia
ಗುರುವಾರ, 24 ನವೆಂಬರ್ 2016 (13:46 IST)
ನವದೆಹಲಿ: ಈ ಸುದ್ದಿ ಓದಿದರೆ ಹೀಗೂ ಉಂಟೇ ಎಂದು ನಿಮಗೆ ಅನಿಸಿದರೆ ಆಶ್ಚರ್ಯವಿಲ್ಲ. ತಾವು ಎರಡನೇ ತ್ರಿಶತಕ ಬಾರಿಸಿದ ಪಂದ್ಯ ನಡೆಯುವಾಗ ಹಾಡಿನ ಸಾಲೊಂದು ಮರೆತು ಹೋಯಿತೆಂದು ಪಂದ್ಯವನ್ನೇ ನಿಲ್ಲಿಸಿದ್ದರಂತೆ ವೀರೇಂದ್ರ ಸೆಹ್ವಾಗ್!

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಇಂತಹದ್ದೊಂದು ವಿಶಿಷ್ಟ ಸಂಗತಿಯನ್ನು ಹೊರಹಾಕಿದ್ದಾರೆ. 2008 ರಲ್ಲಿ ಚೆನ್ನೈಯಲ್ಲಿ ದ.ಆಫ್ರಿಕಾ ವಿರುದ್ಧ ಸೆಹ್ವಾಗ್ ವೃತ್ತಿ ಜೀವನದ ಎರಡನೇ ತ್ರಿಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಅವರು ತೂ ಜಾನೇನಾ ಎಂಬ ಹಿಂದಿ ಹಾಡು ಗುನುಗುತ್ತಿದ್ದರಂತೆ. ಆದರೆ ಇದ್ದಕ್ಕಿದ್ದಂತೆ ಅವರಿಗೆ ಮುಂದಿನ ಸಾಲು ಯಾವುದು ಎಂದು ನೆನಪಾಗಲಿಲ್ಲವಂತೆ.

ಅದಕ್ಕೆ ಅವರೇನು ಮಾಡಿದರು ಗೊತ್ತೇ? ಆಡುವುದನ್ನೇ ನಿಲ್ಲಿಸಿ ಮೈದಾನದ ಹೊರಗಿದ್ದ ಇಶಾಂತ್ ಶರ್ಮಾರನ್ನು ಕರೆಸಿಕೊಂಡರಂತೆ. ತಮ್ಮ ಐಪಾಡ್ ನೋಡಿ ಹಾಡಿನ ಸಾಲು ತಿಳಿದುಕೊಂಡು ಬರಲು ಕಳುಹಿಸಿದರಂತೆ. ಅದನ್ನು ಇಶಾಂತ್ ಶಿರಸಾವಹಿಸಿ ಪಾಲಿಸಿದರು ಎಂದೂ ವೀರೂ ಹೇಳಿಕೊಂಡಿದ್ದಾರೆ.

ಈಗ ಹೇಳಿ ಇದನ್ನು ಓದಿದ ಮೇಲೆ ಹೀಗೂ ಉಂಟೇ ಅನಿಸದೇ ಇರುವುದೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

Virat Kohli, ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ: ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

ಮುಂದಿನ ಸುದ್ದಿ
Show comments