Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಎಂಗೇಜ್‌ಮೆಂಟ್ ?

ಕ್ರಿಕೆಟಿಗ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಎಂಗೇಜ್‌ಮೆಂಟ್ ?
ನವದೆಹಲಿ , ಬುಧವಾರ, 22 ಅಕ್ಟೋಬರ್ 2014 (15:35 IST)
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ತಯಾರಾಗಿರಬಹುದು. ಕಳೆದ ಕೆಲ ವರುಷಗಳಿಂದ ಡೇಟಿಂಗ್ ನಡೆಸುತ್ತಿರುವ ಈ ಪ್ರಣಯ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಳ್ಳುವುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ ವಿರಾಟ್ ತಾಯಿ ಕೂಡ ಅನುಷ್ಕಾ ನಿವಾಸಕ್ಕೆ ತೆರಳಿ ಆಕೆಯನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ವರದಿಗಳ ಪ್ರಕಾರ ತಾಯಿ ಸರೋಜ್ ಸೇರಿದಂತೆ ವಿರಾಟ್ ಕುಟುಂಬ ಇತ್ತೀಚಿಗೆ ಅನುಷ್ಕಾ ನಿವಾಸಕ್ಕೆ ತೆರಳಿ ಆಕೆಯನ್ನು ಭೇಟಿಯಾಯಿತು. ವಿರಾಟ್, ಅನುಷ್ಕಾ ತಮ್ಮ ವೃತ್ತಿಜೀವನದಲ್ಲಿ ವ್ಯಸ್ತರಾಗಿಬಹುದು, ಆದರೆ ಈ ಭೇಟಿ ಅವರಿಬ್ಬರು  ತಮ್ಮ ಸಂಬಂಧವನ್ನು ಗಟ್ಟಿಗೊಳಿಸುವದರತ್ತ ಗಂಭೀರರಾಗಿದ್ದಾರೆ ಎಂಬ ಊಹೆಗೆ ಜನ್ಮ ನೀಡಿದೆ.
 
ಆದರೂ ಅವರಿಬ್ಬರ ನಿಶ್ಚಿತಾರ್ಥದ ವದಂತಿಗಳು ಹುಟ್ಟಿಕೊಂಡಿರುವುದು ಇದೇ ಮೊದಲ ಬಾರಿಗಲ್ಲ. ಇಂತಹ ಸುದ್ದಿಗಳಲ್ಲಿ  ಹುರುಳಿಲ್ಲ ಎಂದು ಅನುಷ್ಕಾ ಪ್ರಚಾರಕರು ಕಳೆದ ತಿಂಗಳು  ಹೇಳಿಕೆ ನೀಡಿದ್ದರು. "ಅನುಷ್ಕಾ ಶರ್ಮಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ಅಂತರ್ಜಾಲದಲ್ಲಿ ಹಲವಾರು ವದಂತಿಗಳು ಹುಟ್ಟಿಕೊಂಡಿವೆ. ಆದರೆ, ಈ ವದಂತಿಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸ ಬಯಸುತ್ತೇನೆ" ಎಂದು ಅವರು ಹೇಳಿಕೆ ನೀಡಿದ್ದರು. 

Share this Story:

Follow Webdunia kannada