Select Your Language

Notifications

webdunia
webdunia
webdunia
webdunia

ನಾನು ಒಂದು ಫೋಟೋ ಹಾಕಿದ್ದಕ್ಕೇ ಧೋನಿ ನಿವೃತ್ತಿ ಬಗ್ಗೆ ರೂಮರ್ ಹಬ್ಬಿಸಿದ್ರಲ್ಲಾ ಎಂದ ವಿರಾಟ್ ಕೊಹ್ಲಿ

ನಾನು ಒಂದು ಫೋಟೋ ಹಾಕಿದ್ದಕ್ಕೇ ಧೋನಿ ನಿವೃತ್ತಿ ಬಗ್ಗೆ ರೂಮರ್ ಹಬ್ಬಿಸಿದ್ರಲ್ಲಾ ಎಂದ ವಿರಾಟ್ ಕೊಹ್ಲಿ
ಧರ್ಮಶಾಲಾ , ಭಾನುವಾರ, 15 ಸೆಪ್ಟಂಬರ್ 2019 (08:53 IST)
ಧರ್ಮಶಾಲಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಧೋನಿ ಜತೆಗಿನ ಹಳೆಯ ಪಂದ್ಯವೊಂದರ ಗೆಲುವಿನ ಕ್ಷಣಗಳ ಫೋಟೋ ಅಪ್ ಲೋಡ್ ಮಾಡಿದ್ದಕ್ಕೇ ಧೋನಿ ನಿವೃತ್ತಿಯಾಗ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿ ಬಿಟ್ಟರು.


ಈ ಬಗ್ಗೆ ಈಗ ಸ್ವತಃ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸುದ್ದಿ ಹೊರಬಿದ್ದ ತಕ್ಷಣ ಕೆಲವರು ಧೋನಿ ನಿವೃತ್ತಿಯಾಗುತ್ತಿರುವುದಕ್ಕೆ ವಿರಾಟ್ ಸುಳಿವು ಕೊಟ್ಟರು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಸುದ್ದಿ ಹಬ್ಬುತ್ತಿದ್ದ ಧೋನಿ ಪತ್ನಿ ಸಾಕ್ಷಿ ಇದೆಲ್ಲಾ ಸುಳ್ಳು ಸುದ್ದಿ ಎಂದು ಅಲ್ಲಗಳೆದರು.

ಇದೀಗ ದ.ಆಫ್ರಿಕಾ ಸರಣಿಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ನಾನು ಮನೆಯಲ್ಲಿ ಕೂತಿದ್ದಾಗ ಸುಮ್ಮನೇ ಒಂದು ಹಳೆಯ ಫೋಟೋ ಅಪ್ ಲೋಡ್ ಮಾಡಿದೆ ಅಷ್ಟೇ. ಅದುವೇ ಸುದ್ದಿಯಾಗಿಬಿಟ್ಟಿತು. ಹೀಗಾಗಿ ಇದು ನನಗೊಂದು ಪಾಠ ಕಲಿಸಿತು. ನಾನು ಏನು ಆಲೋಚನೆ ಮಾಡುತ್ತೇನೋ ಅದನ್ನೇ ಜಗತ್ತೂ ಯೋಚಿಸಬೇಕೆಂದಿಲ್ಲ ಎಂದು ಅರ್ಥ ಮಾಡಿಕೊಂಡೆ.  ಆ ಪಂದ್ಯ ನನಗೆ ವಿಶೇಷವಾಗಿತ್ತು. ಅದನ್ನು ನಾನು ಎಲ್ಲೂ ಹೇಳಿಕೊಂಡಿರಲಿಲ್ಲ. ಅದಕ್ಕೇ ಫೋಟೋ ಹಾಕಿದೆ. ಆದರೆ ಜನ ಅದನ್ನು ಬೇರೇ ರೀತಿಯಲ್ಲಿ ಅರ್ಥೈಸಿದರು’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟಿ20 ಮೊದಲ ಪಂದ್ಯ: ಎಲ್ಲಿ, ಯಾವಾಗ ವೀಕ್ಷಿಸಬೇಕು?