Select Your Language

Notifications

webdunia
webdunia
webdunia
webdunia

ಹೌದು, ನಾನು ಅನುಷ್ಕಾಳನ್ನು ಪ್ರೀತಿಸುತ್ತಿದ್ದೇನೆ ಏನೀಗ? ವಿರಾಟ್ ಕೊಹ್ಲಿ ಕಿಡಿ

ಹೌದು, ನಾನು ಅನುಷ್ಕಾಳನ್ನು ಪ್ರೀತಿಸುತ್ತಿದ್ದೇನೆ ಏನೀಗ? ವಿರಾಟ್ ಕೊಹ್ಲಿ ಕಿಡಿ
ನವದೆಹಲಿ , ಶುಕ್ರವಾರ, 21 ನವೆಂಬರ್ 2014 (13:14 IST)
ಬಾಲಿವುಡ್ ತಾರೆ ಅನುಷ್ಕಾ ಶರ್ಮಾರೊಂದಿಗಿನ ತಮ್ಮ ಪ್ರೇಮ ಸಂಬಂಧವನ್ನು ಕ್ರಿಕೆಟರ್ ವಿರಾಟ್ ಕೊಹ್ಲಿ ಬಹಿರಂಗವಾಗಿ ದೃಢಪಡಿಸಿದ್ದಾರೆ.

ಕೊಹ್ಲಿ ಅನುಷ್ಕಾ ಶರ್ಮಾ ಸಂಬಂಧದ ಕುರಿತು ಬಾಯಿಗೆ ಬಂದಂತೆ ಮಾತನಾಡದಿರಿ ಎಂದು ಹೇಳಿರುವ ಅವರು ತಮ್ಮ ಖಾಸಗಿತನಕ್ಕೆ ಚ್ಯುತಿ ತರದಂತೆ ಕೇಳಿಕೊಂಡಿದ್ದಾರೆ. 
 
ಫ್ಯಾಸನ್ ಲೈನ್ ಉದ್ಘಾಟಿಸಿ ಮಾತನಾಡುತ್ತಿದ್ದ ಕೊಹ್ಲಿ ವಾಸ್ತವ ಸಂಗತಿ ಎಲ್ಲರ ಮುಂದಿದೆ. ನಾವೇನನ್ನು ಮುಚ್ಚಿಡುತ್ತಿಲ್ಲ.  ಮುಚ್ಚಿಡಲು ಪ್ರಯತ್ನಿಸುತ್ತಲೂ ಇಲ್ಲ.  ಆದರೆ ನೀವು ಪದೇ ಪದೇ ಒಂದೇ ವಿಷಯದ ಬಗ್ಗೆ  ಕೇಳುತ್ತಿದ್ದರೆ ಅದು ವಿವಾದಕ್ಕೆ ಕಾರಣವಾಗುತ್ತದೆ. ಅದು ನಮ್ಮಿಬ್ಬರಿಗೆ ಇಷ್ಟವಿಲ್ಲ ಎಂದು  ಕೊಹ್ಲಿ ತಿಳಿಸಿದ್ದಾರೆ.
 
ನಾನು ಮತ್ತು ಅನುಷ್ಕಾ ಪರಸ್ಪರ ಪ್ರೀತಿಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತು. ಜನರು ಇದಕ್ಕಿಂತ ಹೆಚ್ಚು ಕುತೂಹಲ ಹೊಂದುವುದು ಸರಿಯಲ್ಲ. ನಮ್ಮಿಬ್ಬರನ್ನು ಒಟ್ಟಿಗೆ ಕಂಡಾಕ್ಷಣ ಜನರು ನೀವಿಬ್ಬರು ಇಷ್ಟಪಡುತ್ತಿರುವುದು ನಿಜವೇನು? ಎಂದು ಪದೇ ಪದೇ ಕೇಳಿದರೆ? ವಿಷಯ ಎಲ್ಲರಿಗೂ ಗೊತ್ತಿರುವಾಗ ಪದೇ ಪದೇ ಅದರ ಬಗ್ಗೆ ಕೇಳುವುದು ಸಮಂಜಸ ಎನಿಸುವುದಿಲ್ಲ. ನಾವೇನು  ತಪ್ಪು ಮಾಡುತ್ತಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. 

Share this Story:

Follow Webdunia kannada