ಮುಂಬೈ: ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ಘೋಷ್ ವಿವಾಹ ನಿಶ್ಚಿತಾರ್ಥ ನಿನ್ನೆ ನೆರವೇರಿತು. ಆದರೆ ಈ ಕಾರ್ಯಕ್ರಮಕ್ಕೆ ಬಂದಿದ್ದ ವಿರಾಟ್ ಕೊಹ್ಲಿ-ಅನುಷ್ಕಾ ಜೋಡಿ ವಿಶೇಷವಾಗಿ ಗಮನ ಸೆಳೆದರು.
ಕಪ್ಪು-ಬಿಳುಪು ಬಣ್ಣದ ಉಡುಗೆಯಲ್ಲಿ ಬಂದಿದ್ದ ವಿರಾಟ್- ಅನುಷ್ಕಾ ಹೊರಗಡೆ ನೆರೆದಿದ್ದ ಫೋಟೋಗ್ರಾಫರ್ ಗಳ ಕರೆ ಕಣ್ಣೆತ್ತಿಯೂ ನೋಡುವ ಗೋಜಿಗೆ ಹೋಗಲಿಲ್ಲ. ಒಮ್ಮೆಯಾದರೂ, ವಿರಾಟ್ ತಮ್ಮ ಕಡೆಗೆ ನೋಡಿ ಸ್ಮೈಲ್ ಮಾಡಿಯಾರು ಎಂದು ಕಾಯುತ್ತಿದ್ದ ಫೋಟೋಗ್ರಾಫರ್ ಗಳು ನಿರಾಸೆ ಮೂಡಿಸಿದರು.