Webdunia - Bharat's app for daily news and videos

Install App

ಎಂಎಸ್ ಧೋನಿಗೆ ಟಾಯ್ಲೆಟ್ ಗೆ ಹೋಗಲು ಸಹಾಯ ಮಾಡಿದ್ದ ವಿರಾಟ್ ಕೊಹ್ಲಿ!

Webdunia
ಸೋಮವಾರ, 26 ಡಿಸೆಂಬರ್ 2016 (07:11 IST)
ನವದೆಹಲಿ: ಕ್ರಿಕೆಟ್ ನಲ್ಲಿ ಹಲವು ತಮಾಷೆಯ ಸಂಗತಿಗಳು ನಡೆಯುತ್ತವೆ. ಕೆಲವೊಂದು ಎಷ್ಟೋ ಸಮಯದ ನಂತರ ಬಹಿರಂಗವಾಗುತ್ತದೆ. ಅಂತಹದ್ದೊಂದು ಘಟನೆಯಲ್ಲಿ ಇದೂ ಒಂದು.


2015 ರಲ್ಲಿ ಬಾಂಗ್ಲಾದೇಶದ ವಿರುದ್ಧ ಢಾಕಾದ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವಾಗ ಒಂದು ಓವರ್ ವಿರಾಟ್ ಕೊಹ್ಲಿ ಕೀಪಿಂಗ್ ಮಾಡಿದ್ದರು. ಕಾರಣವೇನು ಗೊತ್ತಾ? ಖಾಯಂ ಕೀಪರ್ ಧೋನಿಗೆ ಟಾಯ್ಲೆಟ್ ಗೆ ಹೋಗಲು ಅವಸರವಾಗಿತ್ತಂತೆ. ಆದರೆ ಇನ್ನೂ 6 ಓವರ್ ಪಂದ್ಯ ಮುಗಿಯಲು ಬಾಕಿಯಿತ್ತು.

ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಧೋನಿ ಗ್ಲೌಸ್ ತೊಟ್ಟು ಕೊಹ್ಲಿ ಕೀಪಿಂಗ್ ಮಾಡಿದ್ರು. ಆಗ  ಉಮೇಶ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ಆಟದ ಮಧ್ಯೆ ಟಾಯ್ಲೆಟ್ ಗೆ ಹೋಗುವ ವಿಚಾರದಲ್ಲಿ ಆಟಗಾರರು ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ಕ್ರಿಕೆಟ್ ನಲ್ಲಿ ವಿಶೇಷ ನಿಯಮಾವಳಿ ಇಲ್ಲ. ಏನೇ ಆದರೂ, ಕೊಹ್ಲಿಯ ಕೀಪಿಂಗ್ ವಿಡಿಯೋ ಈಗ ಯೂ ಟ್ಯೂಬ್ ನಲ್ಲಿ ಭಾರೀ ಹಿಟ್ ಪಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸರ್ಫರಾಜ್ ಖಾನ್ ಎರಡೇ ತಿಂಗಳಲ್ಲಿ 17 ಕೆಜಿ ತೂಕ ಇಳಿಸಿದ್ದು ಹೇಗೆ

ರಿಷಭ್ ಪಂತ್ ನಾಲ್ಕನೇ ಟೆಸ್ಟ್ ಆಡುವ ಬಗ್ಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್

ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

ಮ್ಯಾಂಚೆಸ್ಟರ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments