Select Your Language

Notifications

webdunia
webdunia
webdunia
webdunia

ಅನುಷ್ಕಾಗೆ ಹೂಮುತ್ತು ತೇಲಿ ಬಿಟ್ಟು ವಿಶ್ವದಾಖಲೆ ಸಂಭ್ರಮ ಆಚರಿಸಿದ ಕೊಹ್ಲಿ

ಅನುಷ್ಕಾಗೆ ಹೂಮುತ್ತು ತೇಲಿ ಬಿಟ್ಟು ವಿಶ್ವದಾಖಲೆ ಸಂಭ್ರಮ ಆಚರಿಸಿದ ಕೊಹ್ಲಿ
ನವದೆಹಲಿ , ಸೋಮವಾರ, 10 ನವೆಂಬರ್ 2014 (12:54 IST)
ಮಹೇಂದ್ರ ಸಿಂಗ್ ಧೋನಿಯವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಸಾರಥ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ವಿರಾಟ್ ಕೊಹ್ಲಿ ಈಗ ತಮ್ಮ ಫಾರ್ಮ್‌ಗೆ ಮರಳಿದ್ದಾರೆ. ರವಿವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ದಾಖಲಿಸಿದ ಅವರು, ಆ ಮೂಲಕ  6,000 ರನ್‌ಗಳ ಮೈಲಿಗಲ್ಲನ್ನು ದಾಟಿದರು.  ಆ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ತಮ್ಮ ಪ್ರೇಯಸಿ , ನಟಿ ಅನುಷ್ಕಾ ಶರ್ಮಾರ ಕಡೆ ಹೂ ಮುತ್ತನ್ನು ತೇಲಿ ಬಿಟ್ಟು ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು.

ಈ ಸಾಧನೆಯೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 6,000 ರನ್ ಪೂರೈಸಿದ ವಿಶ್ವದಾಖಲೆಗೆ ಭಾಜನರಾದರು. ಕೇವಲ 136 ಪಂದ್ಯಗಳಲ್ಲಿ  6,000 ರನ್ ಕೂಡಿ ಹಾಕಿರುವ ಅವರು, ಈ ಗುರಿಯನ್ನು ಸಾಧಿಸಲು 141 ಪಂದ್ಯಗಳನ್ನು ಬಳಸಿಕೊಂಡಿದ್ದ  ವೆಸ್ಟ್ ಇಂಡಿಸ್‌ನ ಮಾಜಿ ಆಟಗಾರ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಮುರಿದಿದ್ದಾರೆ. 
 
ಭಾರತೀಯರ ಬಗ್ಗೆ ಹೇಳುವುದಾದರೆ ಈ ದಾಖಲೆ ಇಲ್ಲಿಯವರೆಗೆ ಮಾಜಿ ಕ್ಯಾಪ್ಟನ್ ಸೌರವ್ ಹೆಸರಲ್ಲಿತ್ತು. ಅವರು ಈ ಮೈಲಿಗಲ್ಲನ್ನು ದಾಟಲು 147 ಪಂದ್ಯಗಳನ್ನು ತೆಗೆದುಕೊಂಡಿದ್ದರು.  
 
ವೇಗವಾಗಿ 6 ಸಾವಿರ ರನ್ ಪೂರ್ಣಗೊಳಿಸಿದ ಟಾಪ್ -5 ಬ್ಯಾಟ್ಸ್‌ಮನ್‌ಗಳೆಂದರೆ;
 
 *ಭಾರತದ ವಿರಾಟ್ ಕೊಹ್ಲಿ-  136 ಇನ್ನಿಂಗ್ಸ್
 
* ವೆಸ್ಟ್ ಇಂಡೀಸ್ ವಿವಿಯನ್ ರಿಚರ್ಡ್ಸ್ 141 ಇನಿಂಗ್ಸ್
 
* ಭಾರತದ ಸೌರವ್ ಗಂಗೂಲಿ 147 ಇನ್ನಿಂಗ್ಸ್
 
*ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ 147  ಇನ್ನಿಂಗ್ಸ್
 
*ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 154  ಇನ್ನಿಂಗ್ಸ್

Share this Story:

Follow Webdunia kannada