Webdunia - Bharat's app for daily news and videos

Install App

ವಿರಾಟ್ ಕೊಹ್ಲಿಗಿಂತ ತಾನೇ ಶ್ರೇಷ್ಠ ಎಂದು ಕೊಚ್ಚಿಕೊಂಡ ಪಾಕ್ ಕ್ರಿಕೆಟಿಗ!

Webdunia
ಬುಧವಾರ, 22 ಫೆಬ್ರವರಿ 2017 (12:57 IST)
ಕರಾಚಿ: ತನ್ನ ತಂಡ ತಮ್ಮವರಿಂದಲೇ ಹಿಗ್ಗಾ ಮುಗ್ಗಾ ಟೀಕೆಗೊಳಗಾಗುತ್ತಿದೆ. ಐಸಿಸಿ ಶ್ರೇಯಾಂಕದಲ್ಲಿ ಟಾಪ್ 10 ಒಳಗೇ ಇರಲು ಹೆಣಗಾಡುತ್ತಿದೆ. ಹೀಗಿರುವಾಗ ಪಾಕಿಸ್ತಾನದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ತನ್ನನ್ನು ತಾನು ವಿರಾಟ್ ಕೊಹ್ಲಿಗೆ ಹೋಲಿಸಿಕೊಂಡಿದ್ದಾರೆ!

 
ಪಾಕಿಸ್ತಾನ ಕ್ರಿಕೆಟ್ ಲೀಗ್ ಪಂದ್ಯದಲ್ಲಿ 42 ಬಾಲ್ ಗಳಲ್ಲಿ 66 ರನ್ ಚಚ್ಚಿದ ಮೇಲೆ ಉಮರ್ ಗೆ ಅದೇನು ತಲೆಗೇರಿತೋ ತನ್ನನ್ನು ತಾನು ವಿರಾಟ್ ಗಿಂತಲೂ ಶ್ರೇಷ್ಠ ಎಂದು ಜಂಬ ಕೊಚ್ಚಿಕೊಂಡಿದ್ದಾರೆ. “ಕೊಹ್ಲಿ ಆರಂಭದಿಂದಲೂ 3 ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ನಾನು 6 ನೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ. ನನಗೂ ಕೊಹ್ಲಿ ಕ್ರಮಾಂಕ ನೀಡಿ. ಆಮೇಲೆ ನಮ್ಮಿಬ್ಬರನ್ನು ಹೋಲಿಕೆ ಮಾಡಿ. ನಮ್ಮ ದೇಶದ ಬಾಬರ್ ಅಝಮ್ ಕೂಡಾ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ. ಬಾಬರ್ ಮತ್ತು ಕೊಹ್ಲಿಯನ್ನೂ ಪರಸ್ಪರ ಹೋಲಿಕೆ ಮಾಡಬಹುದು” ಎಂದು ಉಮರ್ ಹೇಳಿಕೆ ನೀಡಿದ್ದಾರೆ.

ಇವರ ಹೇಳಿಕೆ ನೋಡಿದರೆ ನಗಬೇಕೋ, ಕೋಪಗೊಳ್ಳಬೇಕೋ ನೀವೇ ಹೇಳಿ. ಉಮರ್ ಇದುವರೆಗೆ 116 ಏಕದಿನ ಪಂದ್ಯವಾಡಿ ಕೇವಲ 2 ಶತಕ ಗಳಿಸಿದ್ದಾರೆ. ಆದರೆ ಕೊಹ್ಲಿ 179 ಏಕದಿನ ಪಂದ್ಯಗಳಿಂದ 27 ಶತಕ ಗಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments