ಪ್ರತಿಮಾ ಸಿಂಗ್‌ಗೆ ಇಶಾಂತ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ?

Webdunia
ಮಂಗಳವಾರ, 21 ಜೂನ್ 2016 (16:58 IST)
ಭಾರತದ ಕ್ರಿಕೆಟರುಗಳು ತಮ್ಮ ಬ್ರಹ್ಮಚಾರಿ ಜೀವನದ ಸಿಂಗಲ್ ಸ್ಥಿತಿಯಿಂದ ಹೊರಬಂದು ವಿವಾಹವಾಗುತ್ತಿರುವ ಪ್ರಸಕ್ತ ಪ್ರವೃತ್ತಿಗೆ ಅನುಗುಣವಾಗಿ ವೇಗಿ ಇಶಾಂತ್ ಶರ್ಮಾ ಕೂಡ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಜತೆ ನಿಶ್ಚಿತಾರ್ಥ ಮಾಡಿಕೊಂಡರು. ಒಂದು ಸಂದರ್ಭ ಹೊರತುಪಡಿಸಿ ಇಶಾಂತ್ ಶರ್ಮಾ ವಿವಾದಾತ್ಮಕ ಕಾರಣಗಳಿಗಾಗಿ ಸುದ್ದಿಯಲ್ಲಿರಲಿಲ್ಲ.

ತನ್ನ ಸಹಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯಾರಿಗೆ ಭಿನ್ನವಾಗಿ ಇಶಾಂತ್ ವೈಯಕ್ತಿಕ ಜೀವನ ಹೆಚ್ಚು ಪ್ರಾಮುಖ್ಯತೆ ಪಡೆದಿರಲಿಲ್ಲ. ಆದ್ದರಿಂದ ಅವರ ನಿಶ್ಚಿತಾರ್ಥದ ಸುದ್ದಿ ಅಚ್ಚರಿಯ ವಿಷಯವಾಗಿತ್ತು.
 
ಇಶಾಂತ್ ಮೂರು ವರ್ಷಗಳ ಹಿಂದೆ ನಾನು ದೆಹಲಿಯಲ್ಲಿ ಮಹಿಳಾ ಆಟಗಾರ್ತಿಯರಿಗೆ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಿದಾಗ ನನ್ನ ಸೋದರಿಯನ್ನು ಭೇಟಿಯಾದ. ನಾವು ಐವರು ಒಡಹುಟ್ಟಿದವರು( ನಾಲ್ಕು ಸೋದರರು ಮತ್ತು ಒಬ್ಬ ಸೋದರ) ತುಂಬಾ ಆತ್ಮೀಯವಾಗಿದ್ದೆವು.
 
ಇಶಾಂತ್ ಅವಳನ್ನು ತನ್ನ ಜತೆಗೆ ತಿರುಗಾಡಲು ಬರುವಂತೆ ಕರೆದಾಗ ಮುಗ್ಧೆ ಸೋದರಿ, ನನ್ನ ಬಳಿ ಬಂದು ಅನುಮತಿ ಕೇಳಿದಳು. ಇಶಾಂತ್ ಕೂಡ ಒಳ್ಳೆಯ ಹುಡುಗನಾದ್ದರಿಂದ ನಾನು ನಂಬಿ ಅನುಮತಿಸಿದೆ. ಅವರು ಈಗ ಹಸೆಮಣೆಗೆ ಏರುವುದು ನನಗೆ ಸಂತಸವಾಗಿದೆ. ಡಿಸೆಂಬರ್‌ನಲ್ಲಿ ಅವರ ಮದುವೆಯಾಗುತ್ತದೆ ಎಂದು ಆಕಾಂಕ್ಷಾ ತಿಳಿಸಿದ್ದಾರೆ.
 
ಅನೇಕ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ರೀತಿ ಇಶಾಂತ್ ಮನೆಯಲ್ಲಿ ಕಡಿಮೆ ಸಮಯ ಕಳೆಯುತ್ತಾರೆ. ಪ್ರತಿಮಾ ಎಲ್ಲವನ್ನೂ ನಿಭಾಯಿಸಲು ಸಿದ್ಧರಿದ್ದಾರೆ. ''ಮನೆಯಲ್ಲಿ ಸುಂದರ ಪತ್ನಿಯಿರುವಾಗ ಅವರು ಬೇರೆಯವರತ್ತ ಏಕೆ ಕಣ್ಣು ಹಾಯಿಸುತ್ತಾರೆ. ನಾನು ಕೂಡ ಕ್ರೀಡಾಪಟುವಾಗಿದ್ದು, ಪ್ರಯಾಣ ಮಾಡುವುದು ಆಟದ ಒಂದು ಭಾಗ ಎಂದು ಅರ್ಥವಾಗುತ್ತದೆ. ನಾನು ಇಶಾಂತ್ ಜತೆ ಹೆಚ್ಚು ಪ್ರವಾಸ ಮಾಡಲು ಆಗುವುದಿಲ್ಲ ಎನ್ನುವುದು ಅವರಿಗೂ ಗೊತ್ತು'' ಎಂದು ಪ್ರತಿಮಾ ಹೇಳಿದ್ದಾರೆ. 
 
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಶಾಂತ್ ನಿಜವಾಗಲೂ ಅರಳಿದರು. ಕಳೆದ ವರ್ಷ ಶ್ರೀಲಂಕಾ ಟೆಸ್ಟ್ ಸರಣಿ ವಿಜಯದಲ್ಲಿ ಇಶಾಂತ್ ಮುಖ್ಯ ಪಾತ್ರ ವಹಿಸಿದ್ದರು. ಸೀಮಿತ ಓವರುಗಳ ತಂಡಕ್ಕೆ ವಾಪಸಾಗುವುದು ಇಶಾಂತ್ ಮುಂದಿನ ಗುರಿಯಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments