Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಜತೆ ಕಾದಾಡಿದ್ದಕ್ಕೆ ಈ ಕ್ರಿಕೆಟಿಗನಿಗೆ ತಕ್ಕ ಶಾಸ್ತಿಯಾಯ್ತು

Webdunia
ಶುಕ್ರವಾರ, 2 ಡಿಸೆಂಬರ್ 2016 (09:54 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆ ವಾಗ್ವಾದಕ್ಕಿಳಿದಿದ್ದಕ್ಕೆ ಐಸಿಸಿ ಇಂಗ್ಲೆಂಡ್ ನ ಬೆನ್ ಸ್ಟೋಕ್ ಗೆ ತಕ್ಕ ಶಾಸ್ತಿ ಮಾಡಿದೆ. ಮೂರನೇ ಟೆಸ್ಟ್ ನಲ್ಲಿ ಕೊಹ್ಲಿ ಜತೆ ಸ್ಟೋಕ್ಸ್ ವಾಗ್ವಾದಕ್ಕಿಳಿದಿದ್ದಲ್ಲದೆ ಇಬ್ಬರ ನಡುವೆ ಸನ್ನೆಯ ಮೂಲಕ ಶೀತಲ ಸಮರ ನಡೆಯುತ್ತಿತ್ತು.

ಇದಕ್ಕಾಗಿ ಐಸಿಸಿ ಸ್ಟೋಕ್ಸ್ ಗೆ 15 ಶೇಕಡಾ ಪಂದ್ಯದ ಶುಲ್ಕ ನೀಡಬೇಕೆಂದು ತಾಕೀತು ಮಾಡಿದೆ. ಹಿಂದೊಮ್ಮೆ ಬಾಂಗ್ಲಾದೇಶ ವಿರುದ್ಧವೂ ಸ್ಟೋಕ್ಸ್ ಎರಡು ಬಾರಿ ಇದೇ ರೀತಿ ಅಶಿಸ್ತಿನ ವರ್ತನೆ ತೋರಿ ದಂಡ ಹಾಕಿಸಿಕೊಂಡಿದ್ದರು.

ಕೊಹ್ಲಿ ಜತೆ ವಾಗ್ವಾದ ಮತ್ತು ಔಟಾಗಿ ಹೋಗುವಾಗ ಬಾಯಿಕೆ ಕೈಬೆರಳಿಟ್ಟು ಸಂಜ್ಞೆ ಮಾಡಿದ್ದರು ಸ್ಟೋಕ್ಸ್. ಇದಕ್ಕೆ ಪ್ರತಿಯಾಗಿ ಕೊಹ್ಲಿ ಕೂಡಾ ಸ್ಟೋಕ್ಸ್ ಔಟಾಗಿ ಹೋಗುವಾಗ ಇದೇ ರೀತಿ ಸನ್ನೆ ಮಾಡಿದ್ದರು. ಆದರೆ ಸ್ಟೋಕ್ಸ್ ಸತತ ಮೂರನೇ ಬಾರಿ ಅಶಿಸ್ತಿನ ವರ್ತನೆಯಿಂದ ದಂಡಕ್ಕೊಳಗಾಗುತ್ತಿದ್ದು, ಇನ್ನೊಂದು ಬಾರಿ ಪುನರಾವರ್ತಿಸಿದರೆ ಪಂದ್ಯದಿಂದ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments