Select Your Language

Notifications

webdunia
webdunia
webdunia
webdunia

ಭಾರತ ಮೂರನೇ ಏಕದಿನ ವಿಶ್ವಕಪ್ ಕ್ರಿಕೆಟ್ ಗೆಲ್ಲುತ್ತಿತ್ತು!

ಭಾರತ ಮೂರನೇ ಏಕದಿನ ವಿಶ್ವಕಪ್ ಕ್ರಿಕೆಟ್ ಗೆಲ್ಲುತ್ತಿತ್ತು!
Mumbai , ಬುಧವಾರ, 24 ಮೇ 2017 (11:15 IST)
ಮುಂಬೈ: ಭಾರತ ಧೋನಿ ನಾಯಕತ್ವದಲ್ಲಿ 2011 ರ ವಿಶ್ವಕಪ್ ಗೆದ್ದಾಗ ಭಾರತಕ್ಕೆ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಕಿರೀಟ ಸಿಕ್ಕಿತ್ತು. ಆದರೆ ಇದಕ್ಕಿಂತ ಮೊದಲೇ ಭಾರತ ವಿಶ್ವಕಪ್ ಗೆಲ್ಲಬೇಕಿತ್ತು ಎಂದಿದ್ದಾರೆ ಸಚಿನ್ ತೆಂಡುಲ್ಕರ್.

 
ಅದು 2003 ರಲ್ಲಿ ದ.ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಫೈನಲ್ ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಿತ್ತು. ಆದರೆ ಆ ಫೈನಲ್ ನಲ್ಲಿ 358 ರನ್ ಚೇಸ್ ಮಾಡಲಾಗದೇ ಭಾರತ ಸೋತಿತ್ತು.

ಇಂದಿನ ಟಿ-20 ಜಮಾನದಲ್ಲಿ ಅದೇ ಆಟಗಾರರಿಗೆ ಅದೇ ಮೊತ್ತ ಚೇಸ್ ಮಾಡಲು ಕೊಟ್ಟಿದ್ದರೆ, ಸುಲಭವಾಗಿ ಗೆಲ್ಲುತ್ತಿದ್ದರು. ಆಗೆಲ್ಲಾ ಅಪರೂಪಕ್ಕೆ 300-325 ರನ್ ಚೇಸ್ ಮಾಡುತ್ತಿದ್ದೆವು. ಆದರೆ ಈಗ 350 ಸ್ಕೋರ್ ದೊಡ್ಡದೇನಲ್ಲ ಎಂದಿದ್ದಾರೆ ಸಚಿನ್.

ಇಂದಿನ ಆಟಗಾರರ ಮನಸ್ಥಿತಿ, ಬದಲಾದ ನಿಯಮಗಳಲ್ಲಿ ಈ ಮೊತ್ತಗಳೆಲ್ಲಾ ದೊಡ್ಡ ಸಂಗತಿಯೇ ಅಲ್ಲ. ಇಷ್ಟೊತ್ತಿಗೆ ನಮ್ಮ ಬಳಿ ಮೂರು ವಿಶ್ವಕಪ್ ಇರುತ್ತಿತ್ತು ಎಂದು ತೆಂಡುಲ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಜಹೀರ್ ಖಾನ್ ನಿಶ್ಚಿತಾರ್ಥದಲ್ಲಿ ವಿರಾಟ್ ಕೊಹ್ಲಿ ಗಮನೆ ಸೆಳೆದಿದ್ದೇಕೆ?!