Webdunia - Bharat's app for daily news and videos

Install App

ವಿಷ್ಣು ವಿವಾದ: ಧೋನಿಗೆ ಬಿಗ್ ರಿಲೀಫ್

Webdunia
ಮಂಗಳವಾರ, 6 ಸೆಪ್ಟಂಬರ್ 2016 (10:31 IST)
ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಭಗವಾನ್ ವಿಷ್ಣುವಿನ ಅವತಾರದೊಂದಿಗೆ ಕಾಣಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದ ಆರೋಪವನ್ನೆದುರಿಸುತ್ತಿದ್ದ ಕೂಲ್ ಕ್ಯಾಪ್ಟನ್ ಧೋನಿ ಈಗ ನಿರಾಳರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲೆ ದಾಖಲಾಗಿದ್ದ ಎಲ್ಲ ದೂರುಗಳನ್ನು ಸೋಮವಾರ ಸುಪ್ರೀಕೋರ್ಟ್ ವಜಾಗೊಳಿಸಿದೆ. 

2013ರಲ್ಲಿ ಪತ್ರಿಕೆಯೊಂದರ ಮುಖಪುಟದಲ್ಲಿ ಕೈಯ್ಯಲ್ಲಿ ಶೂ ಸೇರಿದಂತೆ ಅನೇಕ ವಸ್ತುಗಳನ್ನು ಹಿಡಿದುಕೊಂಡು ದೇವರ ಅವತಾರದಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಇದು ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕರ್ನಾಟಕದ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹೀರೆಮಠ್ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ಧೋನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.  ದೇಶದ ಅನೇಕ ಕಡೆಗಳಲ್ಲಿ ಸಹ ಧೋನಿ ವಿರುದ್ಧ ಕೇಸ್ ದಾಖಲಾಗಿತ್ತು.
 
ಆಂಧ್ರಪ್ರದೇಶದ ಅನಂತಪುರದ ಕೋರ್ಟ್ ಧೋನಿ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾ ಮಾಡುವಂತೆ ಧೋನಿ ಸುಪ್ರೀಂ ಮೆಟ್ಟಿಲೇರಿದ್ದರು.
 
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಪೀಠ ಧೋನಿ ವಿರುದ್ಧದ ಎಲ್ಲ ದೂರುಗಳನ್ನು ರದ್ದುಗೊಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಸೂಪರ್‌ ಕಿಂಗ್ಸ್ ಗಾಯಕ್ಕೆ ಉಪ್ಪು ಸವರಿದ ಕಿಂಗ್ಸ್‌: ಟೂರ್ನಿಯಿಂದ ಧೋನಿ ಪಡೆ ಔಟ್‌

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

ಮುಂದಿನ ಸುದ್ದಿ
Show comments