Select Your Language

Notifications

webdunia
webdunia
webdunia
webdunia

ಪುಟಿದೆದ್ದ ಶ್ರೀಶಾಂತ್: ಬಾಲಿವುಡ್, ರಾಜಕೀಯಕ್ಕೆ ಎಂಟ್ರಿ

ಪುಟಿದೆದ್ದ ಶ್ರೀಶಾಂತ್:  ಬಾಲಿವುಡ್, ರಾಜಕೀಯಕ್ಕೆ ಎಂಟ್ರಿ
ಮುಂಬೈ , ಸೋಮವಾರ, 25 ಏಪ್ರಿಲ್ 2016 (13:20 IST)
ಮಾಜಿ ಕ್ರಿಕೆಟ್ ಆಟಗಾರ ಎಸ್.ಶ್ರೀಶಾಂತ್ 2013ರಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದರಿಂದ ಅವರ ಭವಿಷ್ಯ ಮಂಕಾಗಿತ್ತು.  ಶ್ರೀಶಾಂತ್ ಒಂದು ಕಾಲದಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲರ್ ಆಗಿದ್ದರು. ಆದರೆ ಮ್ಯಾಚ್ ಫಿಕ್ಸಿಂಗ್ ಹಗರಣದ ಬಳಿಕ ಶ್ರೀಶಾಂತ್‌ಗೆ ಕ್ರಿಕೆಟ್ ಆಡಬೇಕೆಂಬ ಅಭಿಲಾಷೆಯಿದ್ದರೂ  ಅವರ ಕ್ರಿಕೆಟ್ ಜೀವನ ಮುಂದುವರಿಯುವ ಲಕ್ಷಣವೇ ಕಂಡುಬರಲಿಲ್ಲ.

ಆದರೆ ಕೆಲವು ವರ್ಷಗಳ ಬಳಿಕ ಅವರ ಜೀವನ ಸಾಹಸಮಯವಾಗುತ್ತದೆಂದು ಅವರೇ ಊಹಿಸಿರಲಿಲ್ಲ. ಶ್ರೀಶಾಂತ್ ಕ್ರಿಕೆಟ್‌ಗೆ ಮತ್ತೆ ಕಾಲಿಡದಿದ್ದರೂ ಶ್ರೀಶಾಂತ್ ಈಗ ''ಕ್ಯಾಬರೇಟ್'' ಬಾಲಿವುಡ್ ಚಿತ್ರದಲ್ಲಿ ಚೊಚ್ಚಲ ಪ್ರವೇಶ ಮಾಡುತ್ತಿದ್ದು, ಬಿಜೆಪಿ ಪರ ಕೇರಳ ವಿಧಾನಸಬೆ ಚುನಾವಣೆಯಲ್ಲಿ ಕೂಡ ಕಣಕ್ಕಿಳಿದಿದ್ದಾರೆ.

ಶ್ರೀಶಾಂತ್ ಚಿತ್ರದ ನಾಯಕಿ ರೀಚಾ ಚಡ್ಡಾಗೆ ಗಾಡ್‌ಫಾದರ್ ಮತ್ತು ಸೋದರನ ಪ್ರತಿರೂಪದಂತೆ ಪಾತ್ರವಹಿಸಿದ್ದಾರೆ ಎಂದು ನಿರ್ದೇಶಕ ಕೌಸ್ಟವ್ ನಾರಾಯಣ್ ನಿಯೋಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada